ಮಂಗಳೂರು : ಪತ್ನಿ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ನಡೆದಿದೆ.
ಮೃತರನ್ನು ಗ್ರಾಮಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ (59) ಮತ್ತು ಆಕೆಯ ಪತಿ ಶೇಷಪ್ಪ ಪೂಜಾರಿ (63) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಸ್ಥಳೀಯ ಸ್ವಿಚ್ ಬೋರ್ಡ್ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪತಿ ಶೇಷಪ್ಪ ವೃತ್ತಿಯಲ್ಲಿ ಚಾಲಕರಾಗಿದ್ದರು.
ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಪತಿ ಶೇಷಪ್ಪ ಹಾಗೂ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೂ ಶೇಷಪ್ಪ ಆಸ್ಪತ್ರೆಯಲ್ಲಿದ್ದರು.
ಇವರಿಬ್ಬರಿಗೆ ಮಕ್ಕಳಿಲ್ಲದ ಕಾರಣ ಪರಸ್ಪರ ಪ್ರೀತಿಯಿಂದ ಇರುತ್ತಿದ್ದರು ,ಮನೆಗೆ ಹಿಂದಿರುಗಿದ ಸಂದರ್ಭದಲ್ಲಿ ಪತ್ನಿಯ ಮೃತಪಟ್ಟ ವಿಷಯ ತಿಳಿದ ಪತಿ ಮನನೊಂದು ಕೀಟನಾಶಕ ಸೇವಿಸಿದ್ದಾರೆ. ಶೇಷಪ್ಪ ಅವರನ್ನು ಕೂಡಲೇ ಆತನ ಸಂಬಂಧಿಕರು ಮತ್ತು ನೆರೆಹೊರೆಯವರು ಆಸ್ಪತ್ರೆಗೆ ಸಾಗಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೀನಾಕ್ಷಿ ಮತ್ತು ಅವರ ಪತಿ ಶೇಷಪ್ಪ ಅವರು ಮೀನಾಕ್ಷಿ ಅವರ ಸಹೋದರಿ ಅವರ ಮನೆಯಲ್ಲಿ ವಾಸಿಸುತ್ತಿದ್ದರು.ಅವರಿಗೆ ಮಕ್ಕಳಿಲ್ಲದ ಕಾರಣ ಪರಸ್ಪರ ಒಬ್ಬರನ್ನು ಒಬ್ಬರು ಬಿಟ್ಟು ಇರದಷ್ಟು ಪ್ರೀತಿಯಿಂದ ಇದ್ದರು.ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


