ಮಂಗಳೂರು ; ರಾಷ್ಟ್ರೀಯ ಹೆದ್ದಾರಿ 66 ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದ ಸರಣಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.


ಪಣಂಬೂರು ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದು ಹಸು ರಸ್ತೆ ದಾಟುತ್ತಿದ್ದ ಸಂದರ್ಭ ಮೊದಲಿಗೆ ಗ್ಯಾಸ್ ಟ್ಯಾಂಕರ್ ನಿಲ್ಲಿಸಿದ್ದಾನೆ . ಅದರ ಹಿಂದೆ ಬರುತ್ತಿದ್ದ ಆಟೋರಿಕ್ಷಾ ನಿಲ್ಲಿಸಿದಾಗ ಅದರ ಹಿಂದೆ ಇದ್ದಂತಹ ಇನ್ನೊಬ್ಬ ಚಾಲಕನು ಕೂಡ ನಿಲ್ಲಿಸಿರುತ್ತಾನೆ ಅದೇ ಸಂದರ್ಭದಲ್ಲಿ ಹಿಂದುಗಡೆಯಿಂದ ಬರುತ್ತಿದ್ದ ಇನ್ನೊಂದು ಟ್ಯಾಂಕರ್ ರಭಸವಾಗಿ ವಾಹನಕ್ಕೆ ಡಿಕ್ಕಿ ಹೊಡೆದಾಗ ಇನೋವಾ ಕಾರು ರಭಸಕ್ಕೆಮುಂದೆ ಇದ್ದ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.
ಆಟೋರಿಕ್ಷಾ ಎರಡು ಟ್ಯಾಂಕರ್‌ಗಳ ನಡುವೆ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ಮತ್ತು ಇಬ್ಬರು ಪ್ರಯಾಣಿಕರು ತಕ್ಷಣವೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರನ್ನು ನರಿಂಗಾನ ಮೊಂಟೆಪದವು ನಿವಾಸಿ (ರಿಕ್ಷಾ ಚಾಲಕ) ಮೊಯುದ್ದಿನ್ ಕುಂಇ (25),ಅಬೂಬಕ್ಕರ್ (65), ಮೊಂಟೆಪದವು, ಮಂಜನಾಡಿ (ಪ್ರಯಾಣಿಕ)ಇಬ್ರಾಹಿಂ (68), ಮೊಂಟೆಪದವು, ಮಂಜನಾಡಿ (ಪ್ರಯಾಣಿಕ) ಎಂದು ತಿಳಿದುಬಂದಿದೆ.
ಇನೋವಾ ಕಾರಿನಲ್ಲಿ ಗಾಯಗೊಂಡವರನ್ನು ಕೋಡಿಕಲ್ ನಿವಾಸಿ ಅನಂತ ಸನ್ನಿಲ್ (71) ಎಂದು ತಿಳಿದುಬಂದಿದೆ.
ರಿಕ್ಷಾ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಮೊಂಟೆಪದವು ನಿವಾಸಿಗಳಾಗಿದ್ದು, ಬೀಡಿ ವ್ಯಾಪಾರ ಮಾಡಿಕೊಂಡಿರುವವರಾಗಿರುತ್ತಾರೆ. ಇವರು ವಾರದಲ್ಲಿ ಎರಡು ದಿವಸ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಬಂದು ಅಲ್ಲಿನ ಒಂದು ಸಂಸ್ಥೆಗೆ ಬೀಡಿ ಕೊಟ್ಟು ಹೋಗುತ್ತಿದ್ದು, ಅದರಂತೆ ಇಂದು ಬೆಳಗ್ಗೆ ಮೊಂಟೆಪದವು ಎಂಬಲ್ಲಿಂದ ಆಟೋರಿಕ್ಷಾದಲ್ಲಿ ಬಂದು ಕೆಲಸ ಮುಗಿಸಿಕೊಂಡು ವಾಪಸ್ ಮೊಂಟೆಪದವು ಕಡೆಗೆ ತೆರಳುತ್ತಿರುವಾಗ ಪಣಂಬೂರು ಜಂಕ್ಷನ್ ಬಳಿ ಈ ಅಪಘಾತ ಸಂಭವಿಸಿದೆ.
ಪ್ರಸ್ತುತ ಮೃತ ದೇಹವನ್ನು ನಗರದ ಎ.ಜೆ. ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.


