ಮಂಗಳೂರು : ಗೋವು ನಮ್ಮೆಲ್ಲರ ಸಂಪೂಜ್ಯತೆಯ ಪ್ರತೀಕ, ಮನುಕುಲಕ್ಕೆ ಸದಾ ಉಪಕಾರಿ. ಗೋವಂಶದ ಉಳಿವಿಗಾಗಿ ವಿಶ್ವಹಿಂದೂ ಪರಿಷತ್ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಗೋವುಗಳ ಪಾಲನೆ-ಪೋಷಣೆಯ ನಿಟ್ಟಿನಲ್ಲಿ ಕಳೆದ 25 ವರ್ಷಗಳಿಂದ ವಿಶ್ವಹಿಂದೂ ಪರಿಷತ್ತಿನ ನೇತೃತ್ವದಲ್ಲಿ ಗೋವನಿತಾಶ್ರಯ ಟ್ರಸ್ಟಿನ ಮುಖಾಂತರ ಗೋಶಾಲೆ ಯನ್ನು ನಡೆಸಿಕೊಂಡು ಬರುತ್ತಿದ್ದು ಸುಮಾರು 450ಕ್ಕೂ ಹೆಚ್ಚು ದನಕರುಗಳ ಪಾಲನೆ-ಪೋಷಣೆ ಮಾಡುತ್ತಿದ್ದೇವೆ. ಮಂಗಳೂರು ಮಹಾನಗರದಿಂದ 220 ಮೀ. ದೂರದ ಪಜೀರಿನಲ್ಲಿ 11 ಎಕರೆ ವಿಶಾಲ ನಿವೇಶನದಲ್ಲಿ ಈ ಗೋಶಾಲೆ ಇದ್ದು ನಿರ್ಗತಿಕ, ಕಟುಕರ ಕೈಯಿಂದ ರಕ್ಷಿಸಿದ ಗೋವುಗಳನ್ನು ಈ ಗೋಶಾಲೆಯ ಮೂಲಕ ಸಾಕುತ್ತಿದ್ದೇವೆ. ಪ್ರತಿ ತಿಂಗಳು ಸುಮಾರು 10 ಲಕ್ಷ ರೂಪಾಯಿಯಷ್ಟು ಅಗಾಧ ಮೊತ್ತವನ್ನು ದಾನಿಗಳಿಂದ ಮತ್ತು ಗೋಪ್ರೇಮಿಗಳಿಂದ ಸಂಗ್ರಹಿಸಿ ಗೋವುಗಳನ್ನು ಪ್ರೀತಿಯಿಂದ ಸಾಕಿ, ಸಲಹಿ, ಪೋಷಿಸುತ್ತಿದ್ದೇವೆ ಎಂದು ಡಾ.ಎಂ ಬಿ ಪುರಾಣಿಕ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮನುಕುಲದ ಉದ್ಧಾರಕ್ಕೆ ಪಂಚಗವ್ಯಗಳನ್ನು ನೀಡುವ ಪುಣ್ಯ ಜೀವಿ ಗೋಮಾತೆಯ ಒಡಲು ತುಂಬಿಸುವ ಪವಿತ್ರ ಕಾರ್ಯದ ನಿಟ್ಟಿನಲ್ಲಿ ನವೆಂಬರ್ 09, 2025 ಅದಿತ್ಯವಾರದಂದು ಪಜೀರು ಗೋಶಾಲೆಯಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ಗೋವಿನ ಮೇವಿಗಾಗಿ * ಹೊರೆಕಾಣಿಕೆ ಅರ್ಪಣೆ” ಕಾರ್ಯಕ್ರಮವು ನಡೆಯಲಿದೆ. ಮಧ್ಯಾಹ್ನ 2.30 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆ ಮಂಗಳೂರಿನ ಕದ್ರಿ ದೇವಸ್ಥಾನದಿಂದ ಗೋಶಾಲೆಗೆ ಗೋ ಹೊರೆಕಾಣಿಕಾ ಮೆರವಣಿಗೆ ನಡೆಯಲಿದ್ದು ವೇದಮೂರ್ತಿ ಶ್ರೀ ವಿಠಲದಾಸ್ ತಂತ್ರಿ, ತಂತ್ರಿವರ್ಯರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಇವರ ದಿವ್ಯ ಉಪಸ್ಥಿತಿಯಲ್ಲಿ ಕದ್ರಿ ದೇವಸ್ಥಾನದ ಆಡಳಿತ ಮೊಕೇಸರರಾದ ಡಾ.ಎ.ಜೆ. ಶೆಟ್ಟಿಯವರು ಹೊರೆಕಾಣಿಕೆ ಮೆರವಣೆಗೆಯನ್ನು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಗಣೇಶ್ ರಾವ್, ಶ್ರೀ ಡಿ.ವೇದವ್ಯಾಸ ಕಾಮತ್,ವಿಧಾನಸಭಾ ಸದಸ್ಯರು ಮಂಗಳೂರು ದಕ್ಷಿಣ, ಡಾ. ವೈ.ಭರತ್ ಶೆಟ್ಟಿ ವಿಧಾನಸಭಾ ಸದಸ್ಯರು ಮಂಗಳೂರು ಉತ್ತರ, ಶ್ರೀ ಜಿತೇಂದ್ರ ಕೊಟ್ಟಾರಿ, ಎಸ್.ಜಿ ಹೆಗ್ರಡೆ ನಿವೃತ್ತ JDPI, ಸಣ್ಣ ಕೈಗಾರಿಕೆ ಇಲಾಖೆ, ಶ್ರೀ ಎಂ. ರವೀಂದ್ರ ಶೇಟ್, ಮಾಲಕರು ಎಸ್ಎಲ್. ಶೇಟ್ ಡೈಮಂಡ್ ಹೌಸ್, ಲೇಡಿಹಿಲ್ ಮಂಗಳೂರು, ಶ್ರೀ ಸತೀಶ್ ಕುಂಪಲ, ಜಿಲ್ಲಾಧ್ಯಕ್ಷರು, ಬಿಜೆಪಿ, ದಕ, ಶ್ರೀ ಕರುಣಾಕರನ್ ಕರುಣಾ ಬಿಲ್ಡರ್ಸ್ ಮಂಗಳೂರು, ಶ್ರೀ ಜಗದೀಶ ಕೆ. ಶೇಣವ, ವಕೀಲರು, ಶ್ರೀ ಪುಷ್ಪರಾಜ್ ಜೈನ್, ಅಭೀಷ್ ಬಿಲ್ಡರ್ಸ್ ಮಂಗಳೂರು ಇವರುಗಳ ಗೌರವ ಉಪಸ್ಥಿತಿಯಲ್ಲಿ ಹೊರಕಾಣಿಕೆ ಹೊರಡಲಿದೆ ಎಂದರು.
ಪಜೀರು ಗೋಶಾಲೆಯಲ್ಲಿ ಸಂಜೆ 4.00 ರಿಂದ ಭಜನಾ ಸಂಕೀರ್ತನೆ ಗೋಭಕ್ತ ಹೊರಕಾಣಿಕೆ ಜಾಥಾದ ಅಭೂತಪೂರ್ವ ಸಂಗಮ ಹಾಗೂ ಸಮೂಹಿಕ ಗೋಪೂಜೆ ನಡೆಯಲಿದೆ. ಸಂಜೆ ಗಂಟೆ 5.30ಕ್ಕೆ ಧಾರ್ಮಿಕಸಭಾ ಕಾರ್ಯಕ್ರಮವು ಡಾ.ಎಂ.ಬಿ.ಪುರಾಣಿಕ್, ಅಧ್ಯಕ್ಷರು, ಗೋವನಿತಾಶ್ರಯ ಟ್ರಸ್ಟ್ (ರಿ.) ಇವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಎಸ್ ರಾಘವೇಂದ್ರ ರಾವ್ ಆಡಳಿತ ನಿರ್ದೇಶಕರು ಮತ್ತು ಆಡಳಿತ ನಿರ್ವಾಹಣಾಧಿಕಾರಿ ಕರ್ಣಾಟಕ ಬ್ಯಾಂಕ್ ಲಿ. ಮಂಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು ದ.ಕ.ಜಿಲ್ಲೆ, ಶ್ರೀ ಎಂ. ಪ್ರಶಾಂತ್ ಶೇಟ್ ಮಾಲಕರು ಎಸ್.ಎಲ್. ಶೇಟ್ ಜ್ಯುವೆಲ್ಲರ್ಸ್ ಹೌಸ್ ಮಂಗಳೂರು, ಶ್ರೀ ಮಹಾಬಲ ಕೊಟ್ಟಾರಿ ಎಂ. ಅಧ್ಯಕ್ಷರು ಸಿವಿಲ್ ಕಾಂಟ್ರಾಕ್ಟರ್ ಎಸೋಸಿಯೇಶನ್, ಶ್ರೀ ಕೆ. ದಾಮೋದರ ರೈ ಮಾಲಕರು ಅಧಿ ಎಂಟರ್ ಪ್ರೈಸಸ್, ಮಂಗಳೂರು, ಶ್ರೀ ಸಂತೋಷ್ ಕುಮಾರ್ ರೈ ಬೋಳಿಯಾರ್ ಪ್ರಮುಖರು, ಭಾರತೀಯ ಜನತಾ ಪಾರ್ಟಿ ದ.ಕ. ಇವರುಗಳ ಗೌರವ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೋ ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಸುಧಾಕರ್ ಪೇಜಾವರ,ಕಾರ್ಯದರ್ಶಿ ಮನೋಹರ್ ಸುವರ್ಣ,ಹಾಗೂ ಭುಜಂಗ ಕುಲಾಲ್ ರವರು ಉಪಸ್ಥಿತರಿದ್ದರು.


