Friday, January 16, 2026
Flats for sale
Homeಜಿಲ್ಲೆಮಂಗಳೂರು : ನಿಷೇಧಿತ ಮಾದಕ ವಸ್ತುಗಳ ಮಾರಾಟ : ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಬಂಧನ.

ಮಂಗಳೂರು : ನಿಷೇಧಿತ ಮಾದಕ ವಸ್ತುಗಳ ಮಾರಾಟ : ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಬಂಧನ.

ಮಂಗಳೂರು : ಮಂಗಳೂರು ನಗರ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯನ್ನು ಡಿ. 29 ರಂದು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲು,ಆತನಿಂದ ಸುಮಾರು 21,000/- ರೂಪಾಯಿ ಬೆಲೆ ಬಾಳುವ ನಿಷೇಧಿತ ಮಾದಕ ವಸ್ತುವಾದ 425 ಗ್ರಾಂ ತೂಕದ ಗಾಂಜಾ ಮತ್ತು ನಗದು ರೂ 650/-, 1 ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳ ವಶಪಡಿಸಕೊಳ್ಳಲಾಗಿದೆ.

ಆರೋಪಿಯನ್ನು ಮೂಲತಃ ಉತ್ತರ ಪ್ರದೇಶ ರಾಜ್ಯದ ಹರೋಯಿ ಜಿಲ್ಲೆಯ ಜೂರಿ ಚಂದ್ರಾಪುರ್ ವಾಸಿಯಾದ ರಾಜ್ ಪಾಲ್ ಎಂದು ತಿಳಿದುಬಂದಿದೆ’.ಈತ ಉತ್ತರಪ್ರದೇಶದ ತನ್ನ ಊರಿನಿಂದ ಗಾಂಜಾ ತೆಗೆದುಕೊಂಡು ಬಂದು ಹಣಕ್ಕಾಗಿ ಬೇರೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಈತನನ್ನು ಡಿ. 30 ರಂದು ಬೆಳಗ್ಗಿನ ಜಾವ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಸೋಮೇಶ್ವರ ಗ್ರಾಮದ, ತಲಪಾಡಿ ರೈಲ್ವೇ ಟ್ರ್ಯಾಕ್ ಬಳಿಯ ಕಲ್ಪನೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ಗಾಂಜಾ ಮತ್ತು ಇತರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 278/2025 ಕಲಂ 8(c), 20(b) ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular