Friday, February 20, 2026
Flats for sale
Homeಜಿಲ್ಲೆಮಂಗಳೂರು : ನಾಳೆಯಿಂದ ಮಂಗಳೂರಿನಲ್ಲಿ "KCCL KUDLA" ಹೆಸರಿನ Kerala Vision Broadband ಸೇವೆ ಆರಂಭ.

ಮಂಗಳೂರು : ನಾಳೆಯಿಂದ ಮಂಗಳೂರಿನಲ್ಲಿ “KCCL KUDLA” ಹೆಸರಿನ Kerala Vision Broadband ಸೇವೆ ಆರಂಭ.

ಮಂಗಳೂರು : ದೇಶದ ಅಂತರ್ಜಾಲ ವಿತರಣಾ ಕ್ಷೇತ್ರದಲ್ಲಿ ಆರನೇ ಅತಿ ದೊಡ್ಡ ಸೇವಾ ಪೂರೈಕೆದಾರರಲ್ಲೊಂದಾದ Kerala ವಿಷನ್ ನ Broadband ಇದೀಗ ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ಕೇಂದ್ರವಾದ ಮಂಗಳೂರು ನಗರದಲ್ಲಿ ತನ್ನ ಸೇವೆಯನ್ನು ಆರಂಭಿಸುತ್ತಿದೆ. “KCCL KUDLA” ಎಂಬ ಹೆಸರಿನಲ್ಲಿ ಸೇವೆ ಆರಂಭಿಸಲಿರುವ Kerala Vision Broadband ಸೇವಾ ಪ್ರವೇಶದ ಔಪಚಾರಿಕ ಉದ್ಘಾಟನೆ ಈ ತಿಂಗಳ 21 ರಂದು ಮಂಗಳೂರಿನಲ್ಲಿ ಜರಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಲೋಹಿತಾಕ್ಷನ್ ರವರು ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಮಾನ್ಯ ಸ್ಪೀಕರ್ ಯು. ಟಿ. ಖಾದರ್ ಅವರು ಉದ್ಘಾಟನೆ ನೆರವೇರಿಸಲಿದ್ದು KCCL KUDLA ಡಾಟಾ ಕೇಂದ್ರದ ಉದ್ಘಾಟನೆಯನ್ನು ಕೇರಳ ವಿಷನ್ ಅಪರೇಟರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಪ್ರವೀಣ್ ಮೋಹನ್ ನೆರವೇರಿಸಲಿದ್ದಾರೆ. ಮಂಗಳೂರಿಗೆ ವಿಶೇಷವಾಗಿ ರೂಪಿಸಲಾದ ಬ್ರಾಡ್ಯಾಂಡ್ ಯೋಜನೆಗಳ ದರ ಪಟ್ಟಿಯನ್ನು ಕೆಸಿಸಿಎಲ್‌ ಅಧ್ಯಕ್ಷರಾದ ಕೆ. ಗೋವಿಂದನ್ ಬಿಡುಗಡೆಗೊಳಿಸುವರು ಎಂದು ಹೇಳಿದರು.

Kerala Vision Operators Association ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಬಿ. ಸುರೇಶ್, ಕೋಶಾಧಿಕಾರಿ ಬಿನು ಶಿವದಾಸ್, ಕಾರ್ಯಕಾರಿ ಸಮಿತಿ ಸದಸ್ಯ ಕೆ. ವಿಜಯಕೃಷ್ಣನ್ ಹಾಗೂ KCCL ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಕುಮಾರ್ ಪಿ.ಪಿ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅತಿ ವೇಗ, ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಕಡಿಮೆ ದರಗಳೊಂದಿಗೆ ಮಂಗಳೂರಿನ ಗ್ರಾಹಕರಿಗೆ ಅತ್ಯುತ್ತಮ ಬ್ರಾಡ್ಯಾಂಡ್ ಸೇವೆಯನ್ನು ಒದಗಿಸಲು ಕೇರಳ ವಿಷನ್ ಸಜ್ಜಾಗಿದೆ. ಇನ್ನು ಕಾಯುವಿಕೆ ಇಲ್ಲದೆ, ಬಫರಿಂಗ್ ಇಲ್ಲದೆ ಮಿಂಚಿನ ವೇಗದಲ್ಲಿ ಡೌನ್ಹೋಡ್, ಅಡ್ಡಿಯಿಲ್ಲದ ಸ್ಟ್ರೀಮಿಂಗ್, 24/7 ವಿಶ್ವಾಸಾರ್ಹ ಸಂಪರ್ಕ. ಸಿಗ್ನಲ್ ಡ್ರಾಪ್‌ ಗಳಿಲ್ಲದೆ, ವ್ಯತ್ಯಯಗಳಿಲ್ಲದೆ, ಹವಾಮಾನ ಬದಲಾವಣೆಯನ್ನೂ ತಡೆದು ನಿಲ್ಲುವ ಸ್ಥಿರ ಸೇವೆ ಒದಗಿಸಲಾಗುತ್ತದೆ.

‘ಅಧಿಕ ವೇಗ ಎನ್ನುವುದು ಅಧಿಕ ವೆಚ್ಚವಲ್ಲ’ ಎಂಬ ಧೈಯದೊಂದಿಗೆ, ಗ್ರಾಹಕರ ಸಾಮರ್ಥ್ಯಕ್ಕೆ ಹೊಂದಿಕೊಂಡು ಅತ್ಯುತ್ತಮ ಪ್ಯಾಕೇಟ್ಗಳನ್ನು ಪರಿಚಯಿಸಲಾಗುತ್ತಿದೆ. ಅತ್ಯಧಿಕ ವೇಗವನ್ನು ಅತಿ ಕಡಿಮೆ ದರದಲ್ಲಿ ನೀಡುವುದು ನಮ್ಮ ಉದ್ದೇಶ. 1,000 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಯುನಿಕೋನ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ Kerala Vision, ಕಳೆದ 30 ವರ್ಷಗಳ ಕಾರ್ಯಾನುಭವ ಮತ್ತು ವಿಶ್ವಾಸಾರ್ಹತೆಯ ಪಾರಂಪರ್ಯವನ್ನು ಹೊಂದಿದೆ.

ಮಂಗಳೂರಿನ ಐಟಿ, ಶಿಕ್ಷಣ, ಸ್ಟಾರ್ಟ್ ಅಪ್ ಹಾಗೂ ವ್ಯಾಪಾರ ಕ್ಷೇತ್ರಗಳಿಗೆ ಬಲಿಷ್ಠ ಡಿಜಿಟಲ್ ಮೂಲ ಸೌಕರ್ಯ ಒದಗಿಸುವ ಮೂಲಕ ನಗರದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸುವುದೇ KCCL KUDLA ದ ಮುಖ್ಯ ಉದ್ದೇಶವಾಗಿದೆ. ಮಂಗಳೂರಿನ ಡಿಜಿಟಲ್ ಭವಿಷ್ಯಕ್ಕೆ ಹೊಸ ಅಧ್ಯಾಯವನ್ನು ತೆರೆದು, ಹೆಚ್ಚುವರಿ ವೇಗ, ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ಆರ್ಥಿಕ ಸೌಲಭ್ಯಗಳೊಂದಿಗೆ Kerala Vision ಮಂಗಳೂರು ಜನತೆಯ ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಲಿದೆ ಎಂಬುದು ನಮ್ಮ ಆಶಯ. ಕಾಸರಗೋಡು ಜಿಲ್ಲೆಯ Kerala Vision Broadband ನ ಅಧಿಕೃತ ವಿತರಕ ಕಂಪನಿಯಾದ Colleagues Cable Net Pvt. Ltd. ಇದೀಗ ಮಂಗಳೂರು ನಗರದಲ್ಲೂ Kerala Vision Broadband ಸೇವೆಗಳನ್ನು ನೇರವಾಗಿ ವಿತರಿಸುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುಕುರ್ ಕುಲಿಕೆರೆ,ಪ್ರದೀಪ್ ಕುಮಾರ್,ಮನೋಜ್ ಕುಮಾರ್,ಹರೀಶ್ ಪಿ ನಾಯರ್,ಅಬ್ದುಲ್ಲ ಹಾಗೂ ಸುದೇಶ್ ಭಂಡಾರಿಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular