Friday, March 13, 2026
Flats for sale
Homeಜಿಲ್ಲೆಮಂಗಳೂರು : ನಳಿನ್ ಕುಮಾರ್ ಕಟೀಲ್ ಮೇಲೆ ಒಲವು ತೋರದ ಸಂಘಟನೆ,ಕಾರ್ಯಕರ್ತರು. ದಕ್ಷಿಣ ಕನ್ನಡ ಲೋಕಸಭಾ...

ಮಂಗಳೂರು : ನಳಿನ್ ಕುಮಾರ್ ಕಟೀಲ್ ಮೇಲೆ ಒಲವು ತೋರದ ಸಂಘಟನೆ,ಕಾರ್ಯಕರ್ತರು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ರೇಸ್​ನಲ್ಲಿ ಬ್ರಿಜೇಶ್ ಚೌಟಾ.

ಮಂಗಳೂರು : ಕರಾವಳಿ ಬಿಜೆಪಿಯ ಭದ್ರಕೋಟೆ ಯಾವುದೇ ಗುರುತು ಪರಿಚಯ ವಿಲ್ಲದ ವ್ಯಕ್ತಿಯನ್ನು ನಿಲ್ಲಿಸಿದರೆ ಇಲ್ಲಿ ಬಿಜೆಪಿಯ ಜಯ ಕಟ್ಟಿಟ್ಟ ಬುತ್ತಿ ,ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವನ್ನು ಮೆಚ್ಚಿ ಇಲ್ಲಿಯ ಜನ ಓಟು ಮಾಡುವವರು ಹೊರತು ಇಲ್ಲಿ ವ್ಯಕ್ತಿಯನ್ನು ನೋಡಿ ಓಟು ಹಾಕುವವರು ಕಡಿಮೆ.ಅದರಿಂದ ನಳಿನ್ ಕುಮಾರ್ ಕಟೀಲ್ ಮೇಲಿನ ಒಲವು ಅಷ್ಟಕಷ್ಟೆ .

ವೈಯಕ್ತಿಕವಾಗಿ ಜಿಲ್ಲೆಯಲ್ಲಿ ನಳೀನ್ ಕುಮಾರ್ ಚುನಾವಣೆಗೆ ನಿಂತರೆ ಜಯಗಳಿಸುವುದು ತುಂಬಾ ಕಷ್ಟದ ವಿಚಾರ .ಕೇವಲ ಪಕ್ಷದ ಓಟು ಸಿಗುವುದು ಹೊರತು ವೈಯಕ್ತಿಕ ಓಟು ಸಿಗುವುದು ಅಷ್ಟಕಷ್ಟೆ .ದಕ್ಷಿಣ ಕನ್ನಡ ಜಿಲ್ಲೆ ಕಾಂಗ್ರೆಸ್ ಹಿಡಿತದಿಂದ ತಪ್ಪಿ ಹಲವು ವರ್ಷಗಳೇ ಕಳೆದಿವೆ. ಸದ್ಯ, ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ನಳಿನ್ ಕುಮಾರ್ ಕಟೀಲ್ ಸಂಸದರಾಗಿರುವ ದಕ್ಷಿಣ ಕನ್ನಡದಲ್ಲಿ ಹೊಸ ಮುಖವನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಬಿಜೆಪಿ ಟಿಕೆಟ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.ಆದರೆ ಬ್ರಿಜೇಶ್ ಚೌಟಾ ಯುವ ಕಾರ್ಯ ಕರ್ತರ ಮನಸ್ಸನ್ನು ಗೆದ್ದಿದ್ದು ಎಲ್ಲಾ ರೀತಿಯಲ್ಲೂ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂಬುದು ಯುವ ಕಾರ್ಯಕರ್ತರ ಮಾತು.

ರಾಮಮಂದಿರ ,ಹಿಂದುತ್ವ,ಮೋದಿ ವರ್ಚಸ್ಸು ಬಿಟ್ಟರೆ ನಳೀನ್ ಕುಮಾರ್ ಕಟೀಲ್ ರವರಿಗೆ ತಳ ಮಟ್ಟದ ಕಾರ್ಯಕರ್ತರ ಬೆಂಬಲ ಇಲ್ಲ,ಯಾಕೆಂದರೆ ಕಾರ್ಯಕರ್ತರ ಸಣ್ಣ ಪುಟ್ಟ ಕೆಲಸಕಾರ್ಯಗಳಿಗೆ ಸ್ಪಂದಿಸದೆ ಇರುವುದು ದೊಡ್ಡ ಕಾರಣ.ಹಾಗೂ ಹಲವಾರು ಹಿರಿಯ ಮುಖಂಡರನ್ನು ಮೂಲೆಗುಂಪು ಮಾಡಿದ ಬೇಸರವಂತೂ ಕಾರ್ಯಕರ್ತರ ಮನಸಿನಲ್ಲಿದೆ . ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಆದರೆ ಈ ಬಾರಿ ಅವರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯೆತೆ ಇದೆ ಎನ್ನಲಾಗುತ್ತಿದೆ. ಕರಾವಳಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘಟನೆ ಕಾರ್ಯಕರ್ತರು ಕಟೀಲ್ ಮೇಲೆ ಒಲವು ಹೊಂದಿಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಕಡೆಗಣಿಸಿ ಕಟೀಲ್​ಗೆ ಟಿಕೆಟ್ ನೀಡಿದರೆ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಾದ ಬಂಡಾಯದ ಬಿಸಿ ಲೋಕಸಭಾ ಚುನಾವಣೆಯಲ್ಲಿ ಮರುಕಳಿಸುವ ಸಾಧ್ಯತೆ ಇದೆ.ಮೋದಿಯಾ ಅಭಿವೃದ್ಧಿ ಅಂತ ಹೇಳಿ ಕೇವಲ ಬಾಯಿ ಹೇಳಿದಷ್ಟು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯವಾಗಲಿಲ್ಲ ಎಂಬುದು ಜನರ ಮಾತು .

ದ.ಕ ಜಿಲ್ಲೆಯಲ್ಲಿ ಮೋದಿ ಹವಾ ಹೆಚ್ಚಾಗಿದ್ದು ,ರಾಮ ಮಂದಿರ ನಿರ್ಮಾಣ ನಂತರ ಅಂತೂ ಹಿಂದುತ್ವದ ಹಳೆ ಹೆಚ್ಚಾಗಿದೆ.ಇನ್ನುಈ ಬಾರಿ ಅಭ್ಯರ್ಥಿಯನ್ನು ಬದಲಾಯಿಸಿದರೆ ಉತ್ತಮ ಎಂಬುದು ಹಿರಿಯ ಕಾರ್ಯಕರ್ತರ ಮಾತು. ಬಿಜೆಪಿ ಭದ್ರಕೋಟೆಯಲ್ಲಿ ವ್ಯಕ್ತಿಗಿಂತ ಪಕ್ಷದ ಶಕ್ತಿಯೇ ದೊಡ್ಡದು. ಯಾರನ್ನೇ ನಿಲ್ಲಿಸಿದರೂ ಗೆಲುವು ನಿಶ್ಚಿತ ಅನ್ನೋ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹೀಗಾಗಿಯೇ ಈ ಬಾರಿ ಅಭ್ಯರ್ಥಿ ಬದಲಾವಣೆ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಾಕಷ್ಟು ಮುಖಂಡರುಗಳು ಟಿಕೆಟ್ ಲಾಬಿ ಮಾಡಲಾರಂಭಿಸಿದ್ದಾರೆ. ಬ್ರಿಜೇಶ್ ಚೌಟಾ ಅವರು ಟಿಕೆಟ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಆರ್​ಎಸ್​ಎಸ್​ ಹಿನ್ನೆಲೆಯುಳ್ಳ ಚೌಟಾ ಬ್ರಿಜೇಶ್ ಚೌಟಾ ಸಂಘ ಪರಿವಾರದ ರಾಷ್ಟ್ರೀಯ ಪ್ರಮುಖರೊಂದಿಗೆ ನಿಖಟ ಸಂಪರ್ಕ‌ವೂ ಹೊಂದಿದ್ದಾರೆ,ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದು ಕಳೆದ ಬಾರಿ ಕೂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ನ ಪ್ರಭಲ ಆಕಾಂಕ್ಷಿಯಗಿದ್ದರು. ಅವರು ಇತ್ತ ಕಾರ್ಯಕರ್ತರ ಒಲವು ಇಲ್ಲದಿದ್ದರೂ ನಳಿನ್ ಕುಮಾರ್ ಕಟೀಲ್ ಅವರ ಬೆನ್ನಿಗೆ ಬಿ.ಎಲ್‌‌.ಸಂತೋಷ್ ನಿಂತಿದ್ದಾರೆ. ಹಣ ಬಲನೋ ತೋಳ್ಬಲನೋ ಎಂಬ ಮಾತಿನಂತೆ ನಳೀನ್ ಕುಮಾರ್ ಕಟೀಲ್ ನಿಂತರೆ ಇಲ್ಲಿ ಈ ಬಾರಿ ಏನೆಲ್ಲ ಬದಲಾವಣೆ ಆಗುತ್ತದೆ ಎಷ್ಟು ಜನ ಬಂಡಾಯ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular