Thursday, September 18, 2025
Flats for sale
Homeಜಿಲ್ಲೆಮಂಗಳೂರು : ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಪತ್ತೆ ಕಾರ್ಯ,ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ...

ಮಂಗಳೂರು : ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣ ಪತ್ತೆ ಕಾರ್ಯ,ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ದಕ್ಷತೆ ಮೆರೆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬಹುಮಾನ-ಪ್ರಶಂಸನಾ ಪತ್ರ ನೀಡಿ ಗೌರವ..!

ಮಂಗಳೂರು : ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ, ಕಳೆದ ಮೂರು ತಿಂಗಳ ಅವಧಿಯಲ್ಲಿ, ಠಾಣೆಯ ಅಪರಾಧ ಪ್ರಕರಣಗಳಲ್ಲಿ ಪತ್ತೆ ಕಾರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಕಾರ್ಯ ದಕ್ಷತೆಯನ್ನು ಮೆರೆದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗುರುತಿಸಿದ್ದು,ಇಂದು ನಡೆದ ಜಿಲ್ಲಾ ಕವಾಯತು ಮೈದಾನದಲ್ಲಿ ಪೊಲೀಸ್ ಆಯುಕ್ತರು 32 ಪೊಲೀಸ್ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಹಾಗೂ 121 ಸಿಬ್ಬಂದಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿಸಿದ್ದಾರೆ . ಅಲ್ಲದೇ ನಗರದ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಲು ನೆರವಾದ 19 ವಿಶೇಷ ಕಾರ್ಯ ಪಡೆಯ ಸಿಬ್ಬಂದಿಗಳಿಗೆ ಪುರಸ್ಕರಿದ್ದು. (ಒಟ್ಟು 32 ಪೊಲೀಸ್ ಅಧಿಕಾರಿಗಳು ಮತ್ತು 140 ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಗಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ಎಲ್.ಪಿ.ಸಿ ಪ್ರಕರಣಗಳ (Long pending case) ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಮುಲ್ಕಿ ಠಾಣಾ ಸರಹದ್ದಿನಲ್ಲಿ 27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಲಾಗಿದ್ದು ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿರುವ 52 ಎನ್.ಬಿ.ಡಬ್ಲ್ಯೂ ವಾರಂಟು ಆಸಾಮಿಗಳನ್ನು ಪತ್ತೆ ಮಾಡಲಾಗಿದೆ. ಸೊತ್ತು ಕಳವು ಪ್ರಕರಣಗಳ ಪೈಕಿ 39 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಮಾಡಿ ಸುಮಾರು 1 ಕೋಟಿ 5 ಲಕ್ಷ ಮೌಲ್ಯದ ಕಳವಾದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ಪೆಡ್ಲರ್ಸ್ ಗಳ ಮೇಲೆ 37 ಪ್ರರಕಣ ದಾಖಲಿಸಿ, 73 ಆರೋಪಿಗಳನ್ನು ದಸ್ತಗಿರಿ ಮಾಡಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, 46 ಡ್ರಗ್ ಪೆಡ್ಲರ್ಸ್ ಗಳು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾರೆ . ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ 89 ಪ್ರಕರಣವನ್ನು ದಾಖಲಿಸಿದ್ದು, 127 ಆಸಾಮಿಗಳನ್ನು ವಶಕ್ಕೆ ಪಡೆದು ಅವರ ಮೂಲಕ ಪೆಡ್ಲರ್ಸ್ ಗಳ ಮಾಹಿತಿಯನ್ನು ಕಲೆ ಹಾಕಿ ಕ್ರಮ ಕೈಗೊಳ್ಳಲಾಗಿದೆ.

ಸೋಶಿಯಲ್ ಮೀಡಿಯಾದ ಮೇಲೆ ಇಲಾಖೆಯು ತೀವ್ರ ನಿಗಾ ಇಟ್ಟಿದ್ದು, ದ್ವೇಷ ಭಾಷಣ, ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ, ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಈಗಾಗಲೇ 22 ಆರೋಪಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ಪ್ರಕರಣಗಳಲ್ಲಿ ತನಿಖಾಧಿಕಾರಿ ಹಾಗೂ ತನಿಖಾ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸಿ ಉತ್ತಮ ಗುಣಮಟ್ಟದ ತನಿಖೆಯನ್ನು ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಗರಿಷ್ಟ ಮಟ್ಟದ ಶಿಕ್ಷೆಯನ್ನು ವಿಧಿಸಲು ಸಹಕರಿಸಿದ್ದಾರೆಂದು ತಿಳಿಸಿದ್ದಾರೆ.

ನಗರದ ಅಧಿಕಾರಿ ಮತ್ತು ಸಿಬ್ಬಂದಿಗಳ ಶ್ಲಾಘನೀಯ ಕಾರ್ಯಗಳನ್ನು ಗುರುತಿಸಿ ಈ ಕೆಳಕಂಡಂತೆ ನಗದು ಪುರಸ್ಕಾರ ಮತ್ತು ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

👉 ಎಲ್.ಪಿ.ಸಿ ಪ್ರಕರಣಗಳ (Long pending case) ಆರೋಪಿ ಪತ್ತೆ ಕಾರ್ಯಕ್ಕೆ: 3 ಅಧಿಕಾರಿ ಮತ್ತು 11 ಸಿಬ್ಬಂದಿಗಳಿಗೆ

👉 ತಲೆಮರೆಸಿಕೊಂಡಿರುವ ವಾರಂಟು ಅಸಾಮಿಗಳ ಪತ್ತೆ ಕಾರ್ಯಕ್ಕೆ: 4 ಅಧಿಕಾರಿ ಮತ್ತು 18 ಸಿಬ್ಬಂದಿಗಳಿಗೆ

👉 ಸೊತ್ತು ಕಳವು ಪ್ರಕರಣಗಳಲ್ಲಿ ಆರೋಪಿ ಹಾಗೂ ಸ್ವತ್ತು ಪತ್ತೆ ಕಾರ್ಯಕ್ಕೆ: 5 ಅಧಿಕಾರಿ ಮತ್ತು 13 ಸಿಬ್ಬಂದಿಗಳಿಗೆ

👉 ನ್ಯಾಯಾಲಯದಲ್ಲಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಉತ್ತಮ ಕಾರ್ಯಕ್ಕೆ: 3 ಅಧಿಕಾರಿ ಮತ್ತು 8 ಸಿಬ್ಬಂದಿಗಳಿಗೆ

👉 ಪ್ರಮುಖ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆ ಕಾರ್ಯಕ್ಕೆ: 9 ಅಧಿಕಾರಿ ಮತ್ತು 31 ಸಿಬ್ಬಂದಿಗಳಿಗೆ

👉 ಪ್ರಮುಖ ಎನ್.ಡಿ.ಪಿ.ಎಸ್ ಪ್ರಕರಣಗಳ ಪತ್ತೆ ಕಾರ್ಯಕ್ಕೆ: 3 ಅಧಿಕಾರಿ ಮತ್ತು 13 ಸಿಬ್ಬಂದಿಗಳಿಗೆ

👉 ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ಮತ್ತು ಸಂದೇಶಗಳನ್ನು ಮಾಡಿದ್ದವರನ್ನು ಪತ್ತೆ ಕಾರ್ಯಕ್ಕೆ: 11 ಸಿಬ್ಬಂದಿಗಳಿಗೆ

👉 ಕಾನೂನು ಸುವ್ಯವಸ್ಥೆ, ಸಂಚಾರ ಸುಧಾರಣೆ ಮತ್ತು ಇತರೆ ಉತ್ತಮ ಕಾರ್ಯಕ್ಕೆ: 5 ಅಧಿಕಾರಿ ಮತ್ತು 16 ಸಿಬ್ಬಂದಿಗಳಿಗೆ ಕಾನೂನು ಸುವ್ಯವಸ್ಥೆಯ ಶಾಂತಿ ಕಾಪಾಡಲು ನೆರೆವಾದ ವಿಶೇಷ ಕಾರ್ಯಪಡೆ 19 ಸಿಬ್ಬಂದಿಗಳನ್ನು ಈ ದಿನ ಪುರಸ್ಕರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular