ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಗೆ SIT ಅಧಿಕಾರಿಗಳ ತಂಡ DIG ಅನುಚೇತ್ ಜೊತೆ ಮಂಗಳೂರಿಗೆ ಆಗಮಿಸಿದ್ದಾರೆ.
ಮಂಗಳೂರಿನ ಐಜಿ ಕಚೇರಿಗೆ ಡಿ ಐ ಜಿ ಅನುಜೇತ್ ಹಾಗೂ ಎಸ್ ಪಿ ಜೆತೇಂದ್ರ ಕುಮಾರ್ ದಾಯಮ ಭೇಟಿ ನೀಡಿದ್ದು ಬಳಿಕ ಬೆಳ್ತಂಗಡಿಗೆ ಭೇಟಿ ನೀಡಿದ್ದಾರೆ.
ಬಳಿಕ ತಡರಾತ್ರಿ SIT ತಂಡ ಧರ್ಮಸ್ಥಳ ಠಾಣೆಗೆ ಎಂಟ್ರಿ ಕೊಟ್ಟಿದ್ದು ಎಸ್ ಐ ಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಧರ್ಮಸ್ಥಳ ಠಾಣೆಯಲ್ಲಿ ಕೇಸ್ ಫೈಲ್ ಪಡೆದುಕೊಂಡಿದ್ದಾರೆ. ನಿನ್ನೆ ತಡರಾತ್ರಿವರೆಗೂ ಧರ್ಮಸ್ಥಳ ಠಾಣೆಯಲ್ಲಿ ಡಿಐಜಿ ಅನುಚೇತ್ ಹಾಗೂ ಎಸ್ ಪಿ ಜಿತೇಂದ್ರ ಕುಮಾರ್ ದಾಯಮ ನೇತೃತ್ವದ SIT ತಂಡ ಮಾಹಿತಿ ಪಡೆಡಿದ್ದು ಈಗಾಗಲೇ ಮಂಗಳೂರಿನ IB ಯಲ್ಲಿ ಐಜಿ ಕಚೇರಿಯಲ್ಲೂ ಇತರೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಇಂದು SIT ಟೀಮ್ಗೆ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸರು ಮತ್ತಷ್ಟು ಡೀಟೇಲ್ಸ್ ದಾಖಲೆ ನೀಡಲಿರುವ ಸಂಭವ ಹೆಚ್ಚಿದೆ ಎಂಬ ಮಾಹಿತಿ ದೊರೆತಿದೆ.
ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ ಪ್ರಕರಣದಲ್ಲಿ SIT ಟೀಮ್ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿಇಂದು ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳ ವಿಚಾರಣೆ ನಡೆಸಲಿದೆ ಎಂಬ ಮಾಹಿತಿ ದೊರೆತಿದೆ.
UDR ಕೇಸ್ ಗಳ ಬಗ್ಗೆ ದಾಖಲೆ ಪಡೆಯಲಿರುವ SIT ಅಧಿಕಾರಿಗಳು ಬೆಳ್ತಂಗಡಿ ಹಾಗೂ ಧರ್ಮಸ್ಥಳದಲ್ಲಿ ಅಸಹಜ ಸಾವಿನ ಮಾಹಿತಿ ಕಲೆಹಾಕಿದ್ದಾರೆ. ಅಪರಿಚಿತ ಶವಗಳನ್ನು ಹೂತಿರುವುದನ್ನು ಒಪ್ಪಿಕೊಂಡಿರುವ ಪಂಚಾಯತ್ ನಿಂದಲೂ ದಾಖಲೆ ಪಡೆಯುವ ಸಾಧ್ಯತೆವಿದೆ. ಅದಕ್ಕೆ ಪೂರಕ ದಾಖಲೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದ್ದರು ಈ ದಾಖಲೆಗಳು ಹಾಗೂ ಪೊಲೀಸ್ ದಾಖಲೆಗಳನ್ನು ತಂಡ ಪರಿಶೀಲಿಸಲಿದೆ. ಎಲ್ಲಾ ದಾಖಲೆಗಳನ್ನು ಪಡೆದ ಬಳಿಕ ಒಟ್ಟು ಎಷ್ಟು ಅಸಹಜ ಸಾವುಗಳಾಗಿದೆ ಎಂಬ ಲೆಕ್ಕಾಚಾರ ನಡೆಯಲಿದ್ದು ಮುಂದೆ ವಿಚಾರಣೆಯ ಹಾದಿ ಇನ್ನಷ್ಟು ಕಠೀಣವಾಗಲಿದೆ ಎಂಬ ಮಾಹಿತಿ ದೊರೆತಿದೆ.