Friday, March 13, 2026
Flats for sale
Homeಕ್ರೈಂಮಂಗಳೂರು : ದನದ ಹಟ್ಟಿಯಿಂದ ಗಬ್ಬದ ಹಸುವನ್ನು ಕದ್ದು, ಜಮೀನಿನಲ್ಲೇ ಹತ್ಯೆ ಮಾಡಿ ಮಾಂಸ ಮಾಡಿದ...

ಮಂಗಳೂರು : ದನದ ಹಟ್ಟಿಯಿಂದ ಗಬ್ಬದ ಹಸುವನ್ನು ಕದ್ದು, ಜಮೀನಿನಲ್ಲೇ ಹತ್ಯೆ ಮಾಡಿ ಮಾಂಸ ಮಾಡಿದ ಪ್ರಕರಣ,ಕುದ್ರೋಳಿ ಬೀಫ್ ಸ್ಟಾಲ್ ಮಾಲಕ ಮನ್ಸೂರ್ ಸೇರಿ ಮೂವರ ಬಂಧನ..!

ಮಂಗಳೂರು : ನವೆಂಬರ್ 14 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತುಂಬೆ ಬಳಿ ಜಾನುವಾರು ಕಳವು ಹಾಗೂ ಅದರ ಅಂಗಾಗಗಳು ಮರುದಿನ ದಿನಾಂಕ 15 ರಂದು ಅಲ್ಲೆ ಸಮೀಪದಲ್ಲಿ ಪತ್ತೆಯಾಗಿತ್ತು ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ: 303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34) ಮಂಗಳೂರು ಕುದ್ರೋಳಿ ನಿವಾಸಿ ಮಹಮ್ಮದ್ ಮನ್ಸೂರ್ (48),ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ರವರನ್ನು ಬಂಧಿಸಿದ್ದಾರೆ.

ಈ ಆರೋಪಿಗಳು ನಿನ್ನೆ ಉಪ್ಪಿನಂಗಡಿ ವ್ಯಾಪ್ತಿಯ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗಬ್ಬದ ದನವನ್ನು ಕದ್ದೊಯ್ದು ಅವರ ಜಮೀನಿನಲ್ಲೇ ಹತ್ಯೆ ಮಾಡಿ ಮಾಂಸವನ್ನು ಸಾಗಿಸಿದ್ದಾರೆ. ಈ ಬಗ್ಗೆ ಗೀತೇಶ್ ಕೆ.ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಹಸು ಮುಂಜಾನೆ 6.3೦ರ ಸಮಯಕ್ಕೆ ಹಟ್ಟಿಗೆ ಹೋಗಿ ನೋಡಿದಾಗ ನಾಪತ್ತೆಯಾಗಿತ್ತು. ಹುಡುಕಾಟ ನಡೆಸಿದಾಗ ತಮ್ಮ ಜಮೀನಿನಲ್ಲಿಯೇ ಹಸುವಿನ ಚರ್ಮ, ಮತ್ತದರ ಅಂಗಾಂಗಗಳು ಬಿದ್ದಿರುವುದು ಕಂಡು ಬಂದಿದೆ. ಹಂತಕರು ಹಟ್ಟಿಯಿಂದ ದನವನ್ನು ಕದ್ದೊಯ್ದು, ತಮ್ಮ ಜಮೀನಿನಲ್ಲಿಯೇ ಹತ್ಯೆ ಮಾಡಿ ಅದರ ಮಾಂಸವನ್ನು ಸಾಗಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಆರೋಪಿಗಳನ್ನು ಇಂದು ಬಂಧಿಸಲಾಗಿದೆ .ಈ ಆರೋಪಿಗಳು ವಿಚಾರಣೆಯ ವೇಳೆ ಸೆ.04 ರಂದು ಇಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರ:76/2025, Sec:THE BHARATIYA NYAYA SANHITA (BNS), 2023 (U/s-331(4),305); THE KARNATAKA PREVENTION OF SLAUGHTER AND PRESERVATION OF CATTLE ACT-2020 (U/s-4,5) ಪ್ರಕರಣದಲ್ಲೂ ಆರೋಪಿಗಳಾಗಿರುವುದು ತಿಳಿದುಬಂದಿದ್ದು ಇದೀಗ ಪೋಲಿಸರು ತನಿಖೆಗೆ ಒಳಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular