Sunday, July 13, 2025
Flats for sale
Homeಜಿಲ್ಲೆಮಂಗಳೂರು : ತಣ್ಣೀರು ಬಾವಿ ಬೀಚ್‍ನಲ್ಲಿ ಜ.31ರಿಂದ ಫೆ.2ರ ವರೆಗೆ ಮಂಗಳೂರು ಬೀಚ್ ಫೆಸ್ಟಿವಲ್..!

ಮಂಗಳೂರು : ತಣ್ಣೀರು ಬಾವಿ ಬೀಚ್‍ನಲ್ಲಿ ಜ.31ರಿಂದ ಫೆ.2ರ ವರೆಗೆ ಮಂಗಳೂರು ಬೀಚ್ ಫೆಸ್ಟಿವಲ್..!

ಮಂಗಳೂರು : ಜ.31ರಂದು ಸಂಜೆ 5.30ಕ್ಕೆ ಬೀಚ್ ಉತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಎಚ್.ಕೆ. ಪಾಟೀಲ್, ಎನ್. ಚಲುವರಾಯಸ್ವಾಮಿ, ಜಿಲ್ಲೆಯ ಸಂಸದರು, ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ. ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ತಪಸ್ಯ ಫೌಂಡೇಶನ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ನಾನಾ ಸಂಸ್ಥೆಗಳ ಸಹಯೋಗದಲ್ಲಿ ಜ.31ರಿಂದ ಫೆ.2ರವರೆಗೆ ತಣ್ಣೀರುಬಾವಿಯ ಮಂಗಳೂರು ಸರ್ಫ್ ಕ್ಲಬ್ ಬೀಚ್‍ನಲ್ಲಿ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ಮಂಗಳೂರು ಟ್ರಯಥ್ಲಾನ್ ಆಯೋಜಿಸಲಾಗಿದ್ದು ಫೆ.1ರಂದು ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಟಾಟಾ ಸ್ಮಾರಕ ಆಸ್ಪತ್ರೆ ಡೆಪ್ಯೂಟಿ ಡೈರೆಕ್ಟರ್ ಡಾ. ಶೈಲೇಶ್ ಶ್ರೀಖಂಡೆ, ಕಟೀಲು ಸಂಜೀವಿನ ಆಸ್ಪತ್ರೆಯ ಡಾ. ಸುರೇಶ್ ರಾವ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಫೆ.2ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಕ್ಯಾನ್ಸರ್ ಪೀಡಿತರ ಆರೈಕೆ ಕೇಂದ್ರಕ್ಕೆ ನೆರವಾಗುವ ಉದ್ದೇಶದಿಂದ ದೇಣಿಗೆ ಸಂಗ್ರಹಕ್ಕಾಗಿ ಕಾರ್ಯಕ್ರಮ ನಡೆಯಲಿದೆ ಎಂದು ತಪಸ್ಯಾ ಫೌಂಡೇಶನ್ ಸ್ಥಾಪಕಿ ಸಬಿತಾ ಶೆಟ್ಟಿ ತಿಳಿಸಿದ್ದಾರೆ.

ಜ.31ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ಮಹಿಳಾ ಉದ್ಯಮಿಗಳ ಎಕ್ಸ್‍ಪೆÇೀ ನವನಾರಿ ಉದ್ಯಮಿ, ಫುಡ್ ಫೆಸ್ಟಿವಲ್, ವಿಜ್ಞಾನ ಮಾದರಿ ಪ್ರದರ್ಶನ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 9ರಿಂದ ರಾಷ್ಟ್ರೀಯ ಮಟ್ಟದ ಬೀಚ್ ವಾಲಿಬಾಲ್ ಪ್ರಾರಂಭವಾಗಲಿದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 12, ಸಂಜೆ 4ರಿಂದ ರಾತ್ರಿ 8ರವರೆಗೆ ಪಂದ್ಯಾಟ ನಡೆಯಲಿದೆ. ಸಂಜೆ 5ರಿಂದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟ ಏರ್ಪಡಿಸಲಾಗಿದೆ. ರಾತ್ರಿ 8ಕ್ಕೆ ಮಲ್ಲಕಂಬ ಪ್ರದರ್ಶನವಿದೆ ಎಂದರು. ಫೆ.1ರಂದು ಬೆಳಗ್ಗೆ 10ರಿಂದ ಕೃಷಿ ಮೇಳ, ನವನಾರಿ ಉದ್ಯಮಿ, ಆಹಾರ ಉತ್ಸವ, ವಿಜ್ಞಾನ ಮಾದರಿ ಪ್ರದರ್ಶನ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಉಚಿತ ಕ್ಯಾನ್ಸರ್ ತಪಾಸಣೆ ಆಯೋಜಿಸಲಾಗಿದೆ. ಸಂಜೆ 5ಕ್ಕೆ ಬೈಕ್ ಸ್ಟಂಟ್, 7.15ಕ್ಕೆ ಕಳರಿಪಯಟ್ಟು ಪ್ರದರ್ಶನ, ರಾತ್ರಿ 8ಕ್ಕೆ ಮೂಸಿಕಲ್ ನೈಟ್ ಕಾರ್ಯಕ್ರಮವಿದೆ ಎಂದು ಹೇಳಿದರು.

ಫೆ.2ರಂದು ಮುಂಜಾನೆ 4.30ಕ್ಕೆ ಮ್ಯಾರಥಾನ್ ಆರಂಭಗೊಳ್ಳಲಿದೆ. ಬೆಳಗ್ಗೆ 6.30ಕ್ಕೆ ಐಡಿಎಫ್‍ಸಿ ಫಸ್ಟ್ ಬ್ಯಾಂಕ್ ಮಂಗಳೂರು ಟ್ರಯಥ್ಲಾನ್, ಈಜು, ಸೈಕ್ಲಿಂಗ್, ರನ್ನಿಂಗ್, ವಾಕಿಂಗ್ ಸ್ಪರ್ಧೆಗಳು ನಡೆಯಲಿವೆ. ಈಗಾಗಲೇ ಐದು ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಬೆಳಗ್ಗೆ 10ರಿಂದ ಕೃಷಿ ಮೇಳ, ನವನಾರಿ ಉದ್ಯಮಿ, ಆಹಾರ ಉತ್ಸವ, ಸಂಜೆ 5ಕ್ಕೆ ಸ್ಟಾರ್ಟ್‍ಅಪ್ ಫೆಸ್ಟ್, 7ಕ್ಕೆ ಸಾಂಪ್ರದಾಯಿಕ ಫ್ಯಾಶನ್ ಶೋ, ರಾತ್ರಿ 8ಕ್ಕೆ ನಿಹಾಲ್ ತಾವ್ರೊ ಅವರಿಂದ ಸಂಗೀತ ಕಾರ್ಯಕ್ರಮ, ರಾತ್ರಿ 10ಕ್ಕೆ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ ಎಂದರು ಇದರ ಜೊತೆ ಬೀಚ್ ಫೆಸ್ಟಿವಲ್‍ನ ಜತೆಗೆ ಕೃಷಿ ಮೇಳ, ನವನಾರಿ ಉದ್ಯಮಿ, ಬೀಚ್ ವಾಲಿಬಾಲ್, ಕುಸ್ತಿ, ವಿಜ್ಞಾನ ಮಾದರಿ ಪ್ರದರ್ಶನ, ಬೈಕ್ ಸ್ಟಂಟ್, ವಿವಿಧ ಮನೋರಂಜಾ ಕಾರ್ಯಕ್ರಮಗಳು ನಡೆಯಲಿವೆ. ನವೀನ್ ಹೆಗ್ಡೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular