ಮಂಗಳೂರು : ಡಿಜಿಟಲ್ ಅರೆಸ್ಟ್ ಲ್ಲಿ ಬೆದರಿಸಿ ಆನ್ಲೈನ್ ಮುಖಾಂತರ ಹಣವರ್ಗಾವಣೆಮಾಡಿಸಿಕೊಂಡಿದ್ದ ಹಣವನ್ನು ತ್ವರಿತಗತಿಯಲ್ಲಿ ದೂರುದಾರರಿಗೆ ಹಣವನ್ನು ಹಿಂದುರುಗಿಸಿದ ಘಟನೆ ನಡೆದಿದೆ.
ಆ .23ರಂದು ಬೆಳಿಗ್ಗೆ ಸುಮಾರು ಸಮಯ 10:00 ಯಾರೋ ಅಪರಿಚಿತ ವ್ಯಕ್ತಿ ಬಿಜೈ ನಿವಾಸಿ, 79 ವರ್ಷ ಪ್ರಾಯದ ಹಿರಿಯಮಹಿಳೆಗೆ ಫೋನ್ಕರೆ ಮಾಡಿದ್ದು ಅಪರಿಚಿತ ವ್ಯಕ್ತಿಯು ಮಹಿಳೆಯ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿರುವುದಾಗಿ ಹಾಗೂ ಮಹಿಳೆಯನ್ನು ಬಂಧಿಸುವುದಾಗಿ ಹೆದರಿಸಿರುತ್ತಾರೆ. ನಂತರ ಬಂಧನದಿಂದ ಪಾರಾಗಲು ಮಹಿಳೆ ಹಣವನ್ನು ಆರ್ ಬಿ ಐ ನಲ್ಲಿ ಡೆಪಾಸಿಟ್ ಇಡುವುವಂತೆ ಹಾಗೂ ಡೆಪಾಸಿಟ್ ಎಲ್ಲಾ ಹಣವನ್ನು ಪರಿಶೀಲನೆ ಮುಗಿದ ನಂತರ ಮಹಿಳೆಗೆ ವಾಪಾಸು ನೀಡುವುದಾಗಿ ತಿಳಿಸಿದ್ದು ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಹಾಗೂ ಒಂದು ವೇಳೆ ತಿಳಿಸಿದರೆ ಮಹಿಳೆಯನ್ನು ಬಂಧಿಸುವುದಾಗಿಯೂ ಭಯ ಹುಟ್ಟಿಸಿದ್ದಾರೆ,ಇದರಿಂದ ಮಹಿಳೆ ಸಂಪೂರ್ಣವಾಗಿ ಭಯ ಭೀತಳಾಗಿ ಈ ವಿಚಾರವನ್ನು ಯಾರಿಗೂ ತಿಳಿಸಿರುವುದಿಲ್ಲ.ಸುಮಾರು 5 ರಿಂದ 6 ಗಂಟೆಯ ಕಾಲ ದೂರವಾಣಿ ಕರೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಗಳು ಮಹಿಳೆಗೆ ವಾಟ್ಸ್ ಆಪ್ ಮೂಲಕ ವಿಡಿಯೋ ಕರೆ ಮಾಡಿ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳಂತೆ ಕಾಣಿಸಿಕೊಂಡು ಹಾಗೂ ಜಡ್ಜ್ ರವರು ಕುಳಿತಿರುವ ಹಾಗೆ ವಿಡಿಯೋನಲ್ಲಿ ತೋರಿಸಿ ಮಹಿಳೆಯನ್ನು ನಂಬಿಸಿದ್ದಾರೆ. ಮಹಿಳೆ ತನ್ನಲ್ಲಿರುವ Fixed Deposit ಹಣವನ್ನು ನಂತರ ರೂ 17,00,000/- ಗಳನ್ನು ಅಪರಿಚಿತ ವ್ಯಕ್ತಿಯು ನೀಡಿದ ಬ್ಯಾಂಕ್ ಖಾತೆಗೆ RTGS ಮೂಲಕ ತಮ್ಮ ಬ್ಯಾಂಕ್ ಖಾತೆಯಿಂದ ಖುದ್ದಾಗಿ ಬ್ಯಾಂಕಿಗೆ ತೆರಳಿ ಅದೇದಿನ ಮಧ್ಯಾಹ್ನ 3:00 ಗಂಟೆಗೆ ವರ್ಗಾಯಿಸಿರುತ್ತಾರೆ.
ನಂತರ ಅದೇ ದಿನ ಸಂಜೆ ಸುಮಾರು 6:00 ಗಂಟೆಯ ವೇಳೆಗೆ ಮಹಿಳೆ ಈ ವಿಚಾರವನ್ನು ತಮ್ಮ ಪಕ್ಕದ ಮನೆಯ ಹೆಂಗಸರಿಗೆ ತಿಳಿಸಿದ್ದು ಎಚ್ಚೆತ್ತುಕೊಂಡು ನೆರೆಮನೆಯವರು ಜೊತೆಯಲ್ಲಿ ಕರೆದುಕೊಂಡು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೂಡಲೇ ಹೆಚ್ಚೆತ್ತ ಸೈಬರ್ ಅಪರಾಧ ಪೊಲೀಸರು 1930 ಸಹಾಯವಾಣಿ ಮೂಲಕಬ್ಯಾಂಕ್ ಖಾತೆಯಲ್ಲಿದ್ದ 17,00,000/- ರೂ ಗಳನ್ನು Hold ಮಾಡಿಸಿ,ಸಂಬಂಧಪಟ್ಟ ಬ್ಯಾಂಕ್ ಮ್ಯಾನೇಜರ್ ಗೆ ಕರೆ ಮಾಡಿ ಹಣ ಇರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.ಬಳಿಕ ಆ 24ರಂದು ಹಣ ಬಿಡುಗಡೆಗಾಗಿ ಮಾಹಿತಿಯನ್ನು ವರದಿಯೊಂದಿಗೆ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದಾರೆ. ಆ 25 ಮತ್ತು26 ರಂದು ಸಾರ್ವತ್ರಿಕ ರಜೆ ಇದ್ದುದರಿಂದ 27ರಂದು ನ್ಯಾಯಾಲಯವು ಹಣ ಬಿಡುಗಡೆ ಮಾಡುವಂತೆ ಆದೇಶವನ್ನು ನೀಡಿದೆ ಬಳಿಕ ಆದೇಶವನ್ನು ಸ್ವೀಕರಿಸಿಕೊಂಡು ದೂರುದಾರರ ಬ್ಯಾಂಕ್ ಖಾತೆಗೆ 17,00,000/- ರೂಗಳನ್ನು ವರ್ಗಾವಣೆಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಒಟ್ಟಾರೆಯಾಗಿ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಹಿರಿಯ ನಾಗರಿಕರಿಗೆ ಅಪರಿಚಿತವ್ಯಕ್ತಿಗಳು ಕರೆಮಾಡಿ ಆನ್ಲೈನ್ ವಂಚನೆ ಮೂಲಕ ಹಲವರಿಂದ ಹಣವರ್ಗಾವಣೆ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ವಂಚಿತರು ಮೊದಲೇ ದೂರು ನೀಡಿದರೆ ಇಂತಹ ವಂಚಕರ ವಿರುದ್ಧ ಕ್ರಮ ತೆಗೆದುಕೊಂಡು ಹಣ ವರ್ಗಾವಣೆಯನ್ನು ತಡೆಯಬದುದೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


