Thursday, March 12, 2026
Flats for sale
Homeಜಿಲ್ಲೆಮಂಗಳೂರು : ಕೇರಳದಲ್ಲಿ ಬಾಂಬ್ ಸ್ಫೋಟ : ರಾಜ್ಯದ ಗಡಿ ಪ್ರದೇಶಗಳಲ್ಲಿ ಹೆಚ್ಚಿದ ಭದ್ರತೆ .

ಮಂಗಳೂರು : ಕೇರಳದಲ್ಲಿ ಬಾಂಬ್ ಸ್ಫೋಟ : ರಾಜ್ಯದ ಗಡಿ ಪ್ರದೇಶಗಳಲ್ಲಿ ಹೆಚ್ಚಿದ ಭದ್ರತೆ .

ಮಂಗಳೂರು : ಕೊಚ್ಚಿ ಬಳಿಯ ಸಭಾಂಗಣದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಗಡಿ ಭಾಗದಲ್ಲಿ ಕೇರಳದಿಂದ ಆಗಮಿಸಿ ಕೇರಳ ಕಡೆಗೆ ಹೋಗುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದು, ದೇವಿಪುರ, ತಚ್ಚಣಿ, ತಲಪಾಡಿಯಲ್ಲಿಯೂ ಚೆಕ್ ಪಾಯಿಂಟ್ ಗಳನ್ನು ಸ್ಥಾಪಿಸಲಾಗಿದೆ. ನೆಟ್ಟಿಲಪದವು, ತೌಡುಗೋಳಿ, ನಂದರಪಡ್ಪು, ನಾರ್ಯಾ, ಮೂಡುಂಗಾರುಕಟ್ಟೆಯಲ್ಲೂ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಪೆರ್ಮನ್ನೂರು, ತೊಕ್ಕೊಟ್ಟು, ರಾಣಿಪುರ, ಪನೀರು ಮತ್ತು ಬಬ್ಬುಕಟ್ಟೆಯ ಚರ್ಚ್‌ಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಇತರ ಪೂಜಾ ಸ್ಥಳಗಳನ್ನು ಹೊರತುಪಡಿಸಿ ಇತರ ಚರ್ಚುಗಳಲ್ಲಿ ಪೊಲೀಸರು ನಿಗಾ ಇರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular