Wednesday, February 11, 2026
Flats for sale
Homeಜಿಲ್ಲೆಮಂಗಳೂರು : ಕುಳೂರು ನದಿಯಲ್ಲಿ ನೀರು ಮಲಿನ : ತಕ್ಷಣ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಕಥೋಲಿಕ್ ಸಭೆಯಿಂದ...

ಮಂಗಳೂರು : ಕುಳೂರು ನದಿಯಲ್ಲಿ ನೀರು ಮಲಿನ : ತಕ್ಷಣ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಕಥೋಲಿಕ್ ಸಭೆಯಿಂದ ಮನವಿ.

ಮಂಗಳೂರು: ಸುಲ್ತಾನ್ ಬತ್ತೇರಿ – ತಣ್ಣೀರು ಬಾವಿ ಸೇತುವೆ ನಿರ್ಮಾಣ ಕಾಮಗಾರಿಯ ಭಾಗವಾಗಿ ನದಿಗೆ ಮಣ್ಣು ತುಂಬಿರುವುದರಿಂದ ನದಿಯ ಸಹಜ ಹರಿಯು ಏರಿಳಿತ ಮತ್ತು ಭರತ ಸಂಪೂರ್ಣವಾಗಿ ತಡೆಯಲ್ಪಟ್ಟಿದೆ . ನದಿಯ ಮೇಲ್ಭಾಗ ಪ್ರದೇಶಗಳಾದ ಕೂಳೂರು ಬಂಗ್ರ ಕೂಳೂರು ಪಡುಕೋಡಿ ತೋಕೂರು ಮರವೂರ್ ಮೊದಲಾದ ಪ್ರದೇಶಗಳಲ್ಲಿ ನೀರು ತೀವ್ರವಾಗಿ ಕಲುಷಿತಗೊಂಡಿದೆ. ಇದಲ್ಲದೆ ಕೈಗಾರಿಕಾ ಪ್ರದೇಶದಿಂದ ಕೈಗಾರಿಕಾ ಘಟಕಗಳಿಂದ ಮಲಿನ ನೀರು ಬಿಡುವುದರಿಂದ ನದಿಯ ನೀರು ದುರ್ವಾಸನೆಯಿಂದ ಕೂಡಿದ್ದು ನದಿಯಲ್ಲಿ ಮೀನುಗಳು ಹಾಗು ಇತರ ಜಲಚರಗಳು ಸಾವನಪುತ್ತಿರುವುದು ಕಂಡು ಬರುತ್ತಿದೆ ನದಿಯಲ್ಲಿ ನೀರು ಸರಿಯಾಗಿ ಹರಿಯದೆ ನಿಂತಿರುವುದರಿಂದ ಕೊಳೆತ ಸ್ಥಿತಿ ಉಂಟಾಗಿ ಪರಿಸರಕ್ಕೆ ಬಾರಿ ಹಾನಿಯಾಗಿದೆ. ಸಮುದ್ರದಿಂದ ಬರುವ ಹಾಗೂ ಸಮುದ್ರಕ್ಕೆ ಹೋಗುವ ನೀರಿನ ಸಹಜ ಚಲನೆ ನಿಂತು ಹೋಗಿದೆ ಇದರಲ್ಲಿ ಇದರಿಂದಾಗಿ ನೀರು ನದಿಯಲ್ಲಿ ನಿಂತಲ್ಲಿ ನಿಂತು ದುರ್ವಾಸನೆ ಉಂಟಾಗಿ ಜಲಚರ ಜೀವಿಗಳಿಗೆ ಅಪಾಯವಾಗುತ್ತಿದೆ ನದಿಯಲ್ಲಿ ಹಾಕಿರುವ ಮಣ್ಣನ್ನು ತಕ್ಷಣ ಮಾಡಿ ನೀರು ಸರಗವಾಗಿ ಹರಿಯಲು ಅವಕಾಶ ಮಾಡಿಕೊಡಬೇಕು ಮಾಡಿಕೊಟ್ಟಲ್ಲಿ ಸಮುದ್ರ ನದಿ ನೀರಿನ ಸಹಜ ಏರಿಳಿತ ಪುನ ಆರಂಭವಾಗಿ ನೀರು ನಿಂತು ಕೊಳೆಯುವ ಪರಿಸ್ಥಿತಿ ತಪ್ಪಿಸಬಹುದಾಗಿದೆ ನೀರು ಮಲಿನತೆ ಹಾಗೂ ಪರಿಸರ ಹಾನಿ ಕುರಿತು ಕ ಥೋಲಿಕ್ ಸಭಾ ಕೂಳೂರು ಘಟಕದ ವತಿಯಿಂದ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕತೋಲಿಕ್ ಸಭಾ ಕೂಳೂರು ಘಟಕದ ಆತ್ಮಿಕ ನಿರ್ದೇಶಕರು ಹಾಗೂ ಕೂಳುರು ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ. ವಿಕ್ಟರ್ ವಿಜಯ್ ಲೋಬೋ, ಕಥೋಲಿಕ್ ಸಭಾ ಕೂಳೂರು ಘಟಕದ ಅಧ್ಯಕ್ಷ ರೋವಿನ್ ಡಿಸೋಜಾ, ಮಹಾನಗರಪಾಲಿಕೆಯ ನಿಕಟ ಪೂರ್ವ ಸದಸ್ಯರಾದ ಅನಿಲ್ ಕುಮಾರ್ ಹಾಗೂ ಇತರ ಪದಾಧಿಕಾರಿಗಳು , ಸದಸ್ಯರು ಹಾಗು ಸ್ಥಳೀಯರು ಹಾಜರಿದ್ದರು.

ಮನವಿಯಲ್ಲಿ, ಸೇತುವೆ ನಿರ್ಮಾಣಕ್ಕಾಗಿ ನದಿಗೆ ಹಾಕಿರುವ ಮಣ್ಣಿನಿಂದ ನದಿಯ ಸಹಜ ಹರಿವು ಸಂಪೂರ್ಣವಾಗಿ ತಡೆಗಟ್ಟಲ್ಪಟ್ಟಿದ್ದು, ಮೇಲ್ಭಾಗದ ಹಲವು ಪ್ರದೇಶಗಳಲ್ಲಿ ನೀರು ತೀವ್ರವಾಗಿ ಕಲಷಿತಗೊಂಡಿದೆ ಎಂದು ತಿಳಿಸಲಾಗಿದೆ. ಜೊತೆಗೆ ಕೈಗಾರಿಕಾ ಪ್ರದೇಶಗಳಿಂದ ಹರಿಯುವ ಮಲಿನ ನೀರು ನದಿಯಲ್ಲಿ ನಿಂತು ದುರ್ವಾಸನೆ ಉಂಟಾಗಿ ಮೀನುಗಳು ಹಾಗೂ ಜಲಚರಗಳು ಸಾವನ್ನಪ್ಪುತ್ತಿರುವುದರಿಂದ ಪರಿಸರಕ್ಕೆ ಗಂಭೀರ ಹಾನಿ ಉಂಟಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದ್ದರಿಂದ, ನದಿಗೆ ಹಾಕಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಪೈಪ್ ವ್ಯವಸ್ಥೆ ಕಲ್ಪಿಸಿ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular