Saturday, March 14, 2026
Flats for sale
Homeಜಿಲ್ಲೆಮಂಗಳೂರು ; ಕಾರ್ಕಳ ಪಡುಬಿದ್ರಿ ಹೆದ್ದಾರಿಯಲ್ಲಿ ಬಸ್-ಜೀಪ್ ಡಿಕ್ಕಿ,ಒರ್ವ ಸಾವು,ಹಲವರಿಗೆ ಗಾಯ.

ಮಂಗಳೂರು ; ಕಾರ್ಕಳ ಪಡುಬಿದ್ರಿ ಹೆದ್ದಾರಿಯಲ್ಲಿ ಬಸ್-ಜೀಪ್ ಡಿಕ್ಕಿ,ಒರ್ವ ಸಾವು,ಹಲವರಿಗೆ ಗಾಯ.

ಕಾರ್ಕಳ : ನಿಟ್ಟೆ ಸಮೀಪದ ಕಾರ್ಕಳ ಪಡುಬಿದ್ರಿ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಒರ್ವ ಸಾವನಪ್ಪಿದ್ದು ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ

ಜೀಪ್ ಓವರ್ ಟೇಕ್ ಮಾಡಲು ಯತ್ನಿಸುತ್ತಿದ್ದಾಗ ಡಿಕ್ಕಿ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಗೊಂಡವರಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಬಸ್ ಬೆಳ್ಮಣ್ ಕಡೆಗೆ ಹೋಗುತ್ತಿದ್ದು, ಜೀಪ್ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು. ಜೀಪಿಗೆ ಡಿಕ್ಕಿ ಹೊಡೆದ ನಂತರ ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಜೀಪಿನಲ್ಲಿ ಕುಟುಂಬವೊಂದು ಪ್ರಯಾಣಿಸುತ್ತಿದ್ದು, ರೇಷ್ಮಾ ಎಂಬ ಹೆಸರಿನ ಬಸ್ ಮುಂಬೈಗೆ ತೆರಳುತ್ತಿದ್ದು, ಜೀಪಿನಲ್ಲಿದ್ದ ಕುಟುಂಬ ಶೃಂಗೇರಿ ಕಡೆಗೆ ತೆರಳುತ್ತಿತ್ತು.

ಅಪಘಾತದ ಪರಿಣಾಮ ಪ್ರಯಾಣಿಕರನ್ನು ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ 12 ಮಂದಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಂದು ತಿಳಿಯಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular