Friday, March 13, 2026
Flats for sale
Homeಜಿಲ್ಲೆಮಂಗಳೂರು : ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಡಗರ.

ಮಂಗಳೂರು : ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬದ ಸಡಗರ.

ಮಂಗಳೂರು : ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಇಂದು ರಂಜಾನ್ ಆಚರಣೆ ಈ ಬಗ್ಗೆ ಘೋಷಿಸಿದ್ದಾರೆ. ಕರಾವಳಿ ಬಿಟ್ಟು ಕರ್ನಾಟಕದ ಎಲ್ಲೆಡೆ ನಾಡಿದ್ದು ಅಂದರೆ ಏಪ್ರಿಲ್ 11ರಂದು ರಂಜಾನ್ ಹಬ್ಬ ಆಚರಣೆ ಮಾಡಲಾಗುತಿದ್ದು ಕೇರಳದಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯಲ್ಲಿ ನಾಳೆ ರಂಜಾನ್ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಶ್ವದೆಲ್ಲೆಡೆ ಈ ಹಬ್ಬವನ್ನು ಮುಸ್ಲಿಮರು ಸಡಗರ ಸಂಭ್ರಮದಿಂದ ಆಚರಿಸುತಿದ್ದು ಮುಸ್ಲಿಂ ಸಮುದಾಯದವರಿಗೆ ಇದು ಪವಿತ್ರ ಹಬ್ಬವಾಗಿದೆ. ಭಾರತ ಮಾತ್ರವಲ್ಲದೆ .ರಂಜಾನ್‌ ತಿಂಗಳ ಕೊನೆಯ ದಿನವನ್ನು ಈದ್-ಉಲ್-ಫಿತರ್ ಆಗಿ ಆಚರಿಸಲಾಗುತ್ತದೆ. ರಂಜಾನ್ ತಿಂಗಳ ಉದ್ದಕ್ಕೂ ಮುಸ್ಲಿಂ ಸಮುದಾಯದ ಜನರು ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಈ ಅವಧಿಯಲ್ಲಿ ಆಹಾರ ಮಾತ್ರವಲ್ಲ ನೀರು ಸಹ ಕುಡಿಯುವುದಿಲ್ಲ. ಈದ್‌ ಚಂದ್ರ ಗೋಚರಿಸಿದ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ರೋಜಾ ಆಚರಣೆಯನ್ನು ಮುಕ್ತಾಯಗೊಳಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular