Saturday, March 14, 2026
Flats for sale
Homeಜಿಲ್ಲೆಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣೆ - ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯ...

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣೆ – ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳ ವ್ಯಾಪ್ತಿಯ ಗ್ರಾಮಗಳ ಮರುವಿಂಗಡಿಸಿ ಸರಕಾರದ ಅಧಿಸೂಚನೆ..!

ಮಂಗಳೂರು : ಸರ್ಕಾರದ ಅಧಿಸೂಚನೆ ಸಂಖ್ಯೆ ಹೆಚ್.ಡಿ/77/ಪಿ.ಓ.ಪಿ/2020 ರಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರು ಮತ್ತು ಅರ್ಕುಳ ಗ್ರಾಮಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮವನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರಕಾರದ ಅಧಿಸೂಚನೆಯಲ್ಲಿ ಆದೇಶಿಸಲಾಗಿರುತ್ತದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂದಿಸಿದಂತೆ ಪದವು ಗ್ರಾಮಕ್ಕೆ ಒಳಪಡುವ ಕುಲಶೇಖರ, ಸಿಲ್ವರ್‌ಗೇಟ್, ಡೈರಿ ಗೇಟ್, ಕುಲಶೇಖರ ಚೌಕಿ, ಪದವಿನಂಗಡಿ, ಗುರುನಗರ, ಮೇರಿಹಿಲ್ ವೆಂಕಟರಮಣ ದೇವಸ್ಥಾನ ರಸ್ತೆ, ಕೊಪ್ಪಲಕಾಡು, ಬಾಂದೋಟ್ಟು ಯೆಯ್ಯಾಡಿ, ದಂಡಕೇರಿ, ಶಕ್ತಿನಗರ, ನೀತಿ ನಗರ, ಪೊಲೀಸ್ ಲೇನ್, ಪ್ರೀತಿನಗರ, ಸಂಜಯ ನಗರ, ಮುಗೋಡಿ, ಕಾರ್ಮಿಕ ಕಾಲೋನಿ, ಕೆಹೆಚ್‌ಬಿ, ನಾಲ್ಯಪದವು, ಗಂಧಕಾಡು, ಯೆಯ್ಯಾಡಿ ಇಂಡಸ್ಟ್ರಿಯಲ್ ಏರಿಯ, ರಾಜೀವ ನಗರ, ಮುತ್ತಪ್ಪ ಗುಡಿ, ಕಕ್ಕೆಬೆಟ್ಟು, ಮಂಜಡ್ಕ, ದತ್ತ ನಗರ, ಸಿದ್ದ ಪಡ್ಡು ಪ್ರದೇಶಗಳನ್ನು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಮತ್ತು ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಡ್ಯಾರು ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಸ್ಥಳಗಳಾದ ಅಡ್ಯಾರ್ ಪದವು. ವಳಚ್ಚಿಲ್, ಸೋಮನಾಥ ಕಟ್ಟೆ, ಅಡ್ಯಾರ್ ಕಟ್ಟೆ, ಅರ್ಕುಳ, ಶ್ರೀನಿವಾಸ ಕಾಲೇಜ್, ಸಹ್ಯಾದ್ರಿ ಕಾಲೇಜ್, ಪ್ರದೇಶಗಳನ್ನು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಮರುವಿಂಗಡಿಸಿ ಸರ್ಕಾರದಿಂದ ಅಧಿಸೂಚನೆ ಹೊರಡಿಸದೆ.

ಆದುದರಿಂದ ದಿನಾಂಕ: 15-08-2025 ರಿಂದ ಪದವು ಗ್ರಾಮಕ್ಕೆ ಒಳಪಡುವ ಮೇಲ್ಕಂಡ ಪ್ರದೇಶದ ಸಾರ್ವಜನಿಕರು ತಮ್ಮ ಕ್ರಿಮಿನಲ್ ಪ್ರಕರಣಗಳು, ದೂರು ಅರ್ಜಿಗಳು, ಪಾಸ್ ಪೋರ್ಟ ಅರ್ಜಿ ವಿಚಾರಣೆ, ಪಿಸಿಸಿ ವಿಚಾರಣೆ, ಹಾಗೂ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಇತರ ವಿಷಯಗಳ ಮಂಗಳೂರು ಗ್ರಾಮಾಂತರ (ವಾಮಂಜೂರು) ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು. ಹಾಗೂ ಅಡ್ಯಾರು ಮತ್ತು ಅರ್ಕುಳ ಗ್ರಾಮಕ್ಕೆ ಒಳಪಡುವ ಮೇಲ್ಕಂಡ ಪ್ರದೇಶದ ಸಾರ್ವಜನಿಕರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕಾಗಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ಹೊರಡಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular