Thursday, November 6, 2025
Flats for sale
Homeಜಿಲ್ಲೆಮಂಗಳೂರು : ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ, ದೈವಸ್ಥಾನದಲ್ಲಿ ಹುಲಿ...

ಮಂಗಳೂರು : ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ, ದೈವಸ್ಥಾನದಲ್ಲಿ ಹುಲಿ ಹೆಜ್ಜೆ ಪತ್ತೆ,ತಬ್ಬಿಬ್ಬಾದ ಸ್ಥಳೀಯರು.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಅಂದರೆ ಅದು ದೈವಗಳ ತವರೂರು ,ಇಲ್ಲಿ ಕಾರ್ಣಿಕದ ದೈವ ಕೋರ್ದಬ್ಬು ನಿಂದ ಹಿಡಿದು ಹಲವಾರು ದೈವಗಳಿಗೆ ಹಳೆ ಕಾಲದಿಂದಲೂ ದೈವಾರಾಧನೆ ಮಾಡುತ್ತ ಬಂದಿದೆ.ಇದು ತುಳುನಾಡಿನ ದೈವಾರಾಧನೆಯ ಮತ್ತೊಂದು ರೋಚಕ ಸ್ಟೋರಿ. ಎರಡೇ ತಿಂಗಳಲ್ಲಿ ದೈವದ ಮತ್ತೊಂದು ಪವಾಡ ನಡೆದಿದೆ. ಒರಿಸ್ಸಾದ ಮುಸ್ಲಿಂ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು. ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ (ಪಿಲಿಚಾಮುಂಡಿ) ಹೆಜ್ಜೆ ಪತ್ತೆಯಾಗಿದೆ.

ದೈವದ ಮುನಿಸಿನ ಬೆನ್ನಲ್ಲೇ ಪ್ರಶ್ನೆ ಇಟ್ಟಾಗ ಪಾಳುಬಿದ್ದ ದೈವಸ್ಥಾನ ಹಾಗೂ ನೇಮೋತ್ಸವ ಸ್ಥಗಿತಗೊಳಿಸಿದ್ದು ಕಾಣಿಸಿದೆ.ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಮೇಲೆ ಪಿಲಿಚಾಮುಂಡಿ ಆವೇಶ ಬಂದು ಮುನಿಸು ತೋರಿಸಿದ ಘಟನೆ ನಡೆದಿದೆ.

ಹೀಗಾಗಿ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ 18 ವರ್ಷಗಳ ಬಳಿಕ ದೈವದ ನೇಮೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ. ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಜ.4 ರಂದು ನೇಮೋತ್ಸವ ನಡೆಯಲಿದ್ದು, ಎರಡೇ ತಿಂಗಳಲ್ಲಿ ದೈವಸ್ಥಾನಕ್ಕೆ ದ್ವಾರ, ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.

ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡ
18 ವರ್ಷಗಳಿಂದ ದೈವಾರಧನೆ ಸ್ಥಗಿತಗೊಂಡ ಜಾಗದಲ್ಲಿ ಇರುವಿಕೆ ತೋರಿಸಿತಾ ಪಿಲಿಚಾಮುಂಡಿ ದೈವ ಎನ್ನುವ ಮಾತುಗಳು ಕೇಳಿಬರುತ್ತಿವೆ.ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡವೂ ನಡೆದಿದೆ. ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಧಕರಲ್ಲಿ ಅಚ್ಚರಿ ವ್ಯಕ್ತವಾಗಿದೆ.

ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾಗ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ಹುಲಿಯ ಹೆಜ್ಜೆ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಗಿದೆ.

ಕನ್ನಡದಲ್ಲಿ ಇದನ್ನು ವ್ರಾಘ್ರ ಚಾಮುಂಡಿ ಅಂತಲೂ ಕರೆಯುತ್ತಾರೆ.ಸಾರ್ವಜನಿಕವಾಗಿ ಕಾಣ ಸಿಗದೇ ಇದ್ದರೂ ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಕರೆಯುತ್ತಾರೆ.

ಇದೀಗ ಕಾಯರ್ ಕಟ್ಟೆಯಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಭಕ್ತರು ಪುಳಕಿತರಾಗಿದ್ದಾರೆ.ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವೂ ಹೌದು. ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ಇದೆ.

ಇದೀಗ ಮಾತುಕತೆ ನಂತರ ಕಂಪನಿಯು ನೇಮೋತ್ಸವ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಗ್ರಾಮಸ್ಥರು ಮತ್ತು ಎಂಆರ್​ಪಿಎಲ್ ಸಹಕಾರದಲ್ಲಿ ಜ.4 ರಂದು ನೇಮೋತ್ಸವ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.ದೈವಸ್ಥಾನದ ಪಕ್ಕದಲ್ಲಿ ಎಂಆರ್​ಪಿಎಲ್ ಕಂಪನಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಂಪನಿ ಸಮೀಪ ನೇಮೋತ್ಸವಕ್ಕೆ ಅವಕಾಶ ನೀಡುತ್ತಿರಲಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular