ಮಂಗಳೂರು : ಪೆರ್ಮನ್ನೂರಿನ ಸಂತೋಷ ನಗರದ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಡಿ.4ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿಶಿರ್ ದೇವಾಡಿಗ ಮತ್ತು ಶುಶನ್ ಎಲ್ ಎಂದು ಗುರುತಿಸಲಾಗಿದೆ.
ಪೊಲೀಸರು ಸ್ವಿಫ್ಟ್ ಕಾರು, 132 ಗ್ರಾಂ ಮೆಥಾಂಫೆಟಮೈನ್ ಮತ್ತು 250 ಎಲ್ಎಸ್ಡಿ ಸ್ಟ್ಯಾಂಪ್ ಡ್ರಗ್, ರೂಪಾಯಿ 3.7 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ವಶಪಡಿಸಿಕೊಂಡ ಮಾಲುಗಳ ಒಟ್ಟು ಮೌಲ್ಯ 14 ಲಕ್ಷ ರೂ. ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ ಐ ಪುನಿತ್ ಗಾಂವ್ಕರ್, ಉಳ್ಳಾಲ ಠಾಣೆ ಪಿಎಸ್ ಐ ಸಂತೋಷ್ ಕುಮಾರ್ ಡಿ, ಸಿಬ್ಬಂದಿಗಳಾದ ಸಾಜು ನಾಯರ್, ಮಹೇಶ್, ಶಿವಕುಮಾರ್, ಅಕ್ಬರ್ ಯಡ್ರಾಮಿ ಪಾಲ್ಗೊಂಡಿದ್ದರು.


