Friday, January 16, 2026
Flats for sale
Homeಜಿಲ್ಲೆಮಂಗಳೂರು ; ಅಯ್ಯಪ್ಪ ಸ್ವಾಮಿಯ ಪೂಜೆ ವೇಳೆ ಚರ್ಮುರಿ ಅಂಗಡಿಗೆ ಟೊಮೇಟೊ ತಿನ್ನಲು ಬಂದ ದನಕ್ಕೆ...

ಮಂಗಳೂರು ; ಅಯ್ಯಪ್ಪ ಸ್ವಾಮಿಯ ಪೂಜೆ ವೇಳೆ ಚರ್ಮುರಿ ಅಂಗಡಿಗೆ ಟೊಮೇಟೊ ತಿನ್ನಲು ಬಂದ ದನಕ್ಕೆ ಚೂರಿ ಇರಿತ,ದನದ ಮಾಲೀಕ ಹಾಗೂ ಇರಿತ ಮಾಡಿದವನ ವಿರುದ್ಧ ಪ್ರಕರಣ ದಾಖಲು.

ಮಂಗಳೂರು : ಎಡಪದವು ಪುಪಾಡಿಕಲ್ಲು ಎಂಬಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ಬಿರಿ ( ಟೆಂಟ್ ) ಬಳಿ ಇಂದು ಪೂಜೆಯ ಸಮಾರಂಭ ನಡೆಯುತ್ತಿತ್ತು ಆ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿ ಒರ್ವ ಚರುಮುರಿ ಸ್ಟಾಲನ್ನು ಇರಿಸಿದ್ದನು ಈ ವೇಳೆ ಸ್ಟಾಲಿಗೆ ಟೊಮೇಟೊ ತಿನ್ನಲು ಬಂದ ದನದ ಮುಖಕ್ಕೆ ವ್ಯಕ್ತಿ ಕೋಪಗೊಂಡು ಚೂರಿ ಇರಿದ ಘಟನೆ ನಡೆದಿದೆ.

ಚೂರಿ ಇರಿದ ವ್ಯಕ್ತಿಯನ್ನು ಚರಮುರಿ ಸ್ಟಾಲ್ ನ ಉಮರಬ್ಬ ಎಂದು ತಿಳಿದುಬಂದಿದೆ. ಈತ ಜಾತ್ರೆಯ ವೇಳೆ ಹಲವೆಡೆ ಚರುಮುರಿ ಸ್ಟಾಲ್ ಹಾಕಿ ವ್ಯಾಪಾರ ನಡೆಸುತ್ತಿದ್ದು ಈತನ ಈ ಕೃತ್ಯಕ್ಕೆ ಸ್ಥಳೀಯರು ಅಕ್ರೋಶ ಹೊರಹಾಕಿದ್ದಾರೆ.

ಘಟನೆಯ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ದನಕ್ಕೆ ಚಿಕಿತ್ಸೆ ನೀಡಿದ್ದಾರೆ.ಈ ಘಟನೆಯ ಬಗ್ಗೆ ವಿಶ್ವ ಹಿಂದೂಪರಿಷತ್ ತೀವ್ರ ಖಂಡಿಸಿದ್ದು ಜಜಪೆ ಪೋಲಿಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular