ಮಂಗಳೂರು : ಅನ್ನಭಾಗ್ಯ ಅಕ್ಕಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜಟಾ ಪಟಿ ಹಿನ್ನಲೆ ಕೇಂದ್ರದ ವಿರುದ್ಧ ನಾಳೆ ವಿಭಿನ್ನ ಶೈಲಿಯ ಪ್ರತಿಭಟನೆಗೆ ಕಾಂಗ್ರೆಸ್ ನಾಯಕ ಮಾಜಿ ಸಚಿವ ರಮಾನಾಥ್ ರೈಯಿಂದ ಮುಂದಾಗಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ರೈ ಮಾಹಿತಿ ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ಕೊಡುವ ಅನ್ನ ನಿಲ್ಲಿಸಿದ್ದೇನೆಂದು ನನ್ನ ವಿರುದ್ಧ ಅನ್ನದ ಬಟ್ಟಲು ತಟ್ಟಿ ಪ್ರತಿಭಟಿಸಿದ್ರು ಅಂದು ನಾವು ಮಕ್ಕಳಿಗೆ ಕೊಡುವ ಅನ್ನವನ್ನ ನಿಲ್ಲಿಸಿರಲಿಲ್ಲ ದೇವಸ್ಥಾನದ ಹಣ ದುರುಪಯೋಗ ಆಗಬಾರದೆಂದು ತಡೆದಿದ್ವಿ ನಾನು ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಒಂದು ಹಿಡಿ ಅಕ್ಕಿಯನ್ನ ನಿಲ್ಲಿಸಿರಲಿಲ್ಲ ಆದರೂ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರು ಈಗ ನಮ್ಮ ಸರಕಾರದ ಅನ್ನ ಭಾಗ್ಯ ಯೋಜನೆಗೆ ವಿರೋಧ ಮಾಡಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಈ ಯೋಜನೆಯನ್ನ ತಡೆದು ಬಡವರಿಗೆ ದ್ರೋಹ ಮಾಡುತ್ತಿದೆ ನಮಗೆ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ ನಮ್ಮ ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂದೆ ಈ ರೀತಿ ಮಾಡಲಾಗಿದೆ ಯಾವುದೇ ಕಾರಣಕ್ಕೂ ಕೇಂದ್ರ ಸರಕಾರಕ್ಕೆ ಇದನ್ನ ಸಮಾಜಾಯಿಷಿ ಮಾಡಲು ಸಾಧ್ಯವಿಲ್ಲ ಇದರ ವಿರುದ್ಧ ನಾವು ನಾಳೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.
ಅನ್ನದ ತಟ್ಟೆಯನ್ನ ಬಾರಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸಲಿದ್ದೇವೆ ದ. ಕ ಜಿಲ್ಲೆಯ ಜನರು ಇದರಲ್ಲಿ ಭಾಗವಹಿಸಬೇಕು ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಬಿ ರಮಾನಾಥ್ ರೈ ಹೇಳಿದ್ದಾರೆ.


