ಮಂಗಳೂರು : ಸಿಟಿ ಬಸ್ಸಿನ ಮುಂಭಾಗದ ಬಾಗಿಲಿನಿಂದ ಕೆಳಕ್ಕೆ ಬಿದ್ದು ಕಂಡಕ್ಟರ್ ಒಬ್ಬರು ಮಂಗಳವಾರ ಪ್ರಾಣ ಕಳೆದುಕೊಂಡಿದ್ದಾರೆ. ಈರಯ್ಯ (23) ಮೃತ ವ್ಯಕ್ತಿ,ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಈರಯ್ಯ ಸಾವನ್ನಪ್ಪಿದ್ದಾನೆ. ಬಸ್ ಪದುವದಿಂದ ಶಿವಬಾಗ್ ಕಡೆಗೆ ಹೋಗುತ್ತಿದ್ದಾಗ ನಂತೂರು ವೃತ್ತದ ಬಳಿ ಈ ಘಟನೆ ನಡೆದಿದೆ. ಮೃತ ಈರಯ್ಯ ಮೂಲತಃ ಬಾಗಲಕೋಟೆ ಜಿಲ್ಲೆಯ ನಿವಾಸಿಯಾಗಿದ್ದು, ಪ್ರಸ್ತುತ ಸುರತ್ಕಲ್ ತಡಂಬೈಲ್ನಲ್ಲಿ ವಾಸವಾಗಿದ್ದು, ವೇಗವಾಗಿ ಬಂದ ಬಸ್ನಿಂದ ಬಿದ್ದು ರಸ್ತೆಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯ ಪೊಲೀಸರು ಹಾಗೂ ಅಕ್ಕಪಕ್ಕದವರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯು ಮುಂಭಾಗದಲ್ಲಿದ್ದ ವಾಹನದ ಮುಂಭಾಗದ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ಅತಿವೇಗದಲ್ಲಿ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್ ಚಾಲಕನ ವಿರುದ್ಧ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.