ಬೇಲೂರು : ಮಾಹಿತಿ ಇಲ್ಲದ ಅಧಿಕಾರಿಯನ್ನು ಹೊರ ಹಾಕಿದ ಘಟನೆ ಬೇಲೂರು ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು .
ಅರಸೀಕೆರೆ ತಾಲ್ಲೂಕು ಅಧಿಕಾರಗಳ ವಿರುದ್ಧ ಗರಂ. ಆಗಿದ್ದು ಜಾವಗಲ್ ಹೋಬಳಿ ಮೇಲೆ ಮಲತಾಯಿ ಧೋರಣೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸಭೆಯಲ್ಲಿ ಕಣ್ಣೀರು ಹಾಕಿದ ಪಿಡಿಒ ಅಧಿಕಾರಿಗಳಿಗೆ ಚಳಿ ಬಿಡಿಸಿದ ಘಟನೆಯು ನಡೆಯಿತು.
ಬಹುತೇಕ ಅಧಿಕಾರಿಗಳು ಪ್ರಗತಿ ಪರಿಶೀಲನೆ ಸಭೆಗೆ ಯಾವುದೇ ಅಂಕಿ ಅಂಶವಿಲ್ಲದೆ ನೆಪ ಮಾತ್ರಕ್ಕೆ ಕಾಟಚಾರಕ್ಕೆ ಬರುವ ವಾಡಿಕೆ ಇಟ್ಟುಕೊಳ್ಳದೆ ಸಭೆಗೆ ಇಲಾಖೆಯ ಸಮಗ್ರ ಮಾಹಿತಿ ನೀಡಬೇಕು ಮತ್ತು ಪ್ರತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ತಾಕೀತು ಮಾಡಿದರು.
ಪಟ್ಟಣದ ಚನ್ನಕೇಶವ ಸಭಾಂಗಣದಲ್ಲಿ ತಾಲ್ಲೂಕು ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕನಿಷ್ಟ ಇಲಾಖೆ ಮಾಹಿತಿ ಇಲ್ಲದಿರುವುದು ನಿಜಕ್ಕೂ ಶೋಚನೀಯ. ಯಾರೋ ಒಬ್ಬ ಬಡವರ ಭೂಮಿ ನಮಗೆ ಸೇರಿದೆ ಎಂದು ರೋಲ್ ಕಾಲ್ ತಂತ್ರ ನಮಗೆ ಗೊತ್ತಿದೆ.ಕಾಡಾನೆಗಳಿಂದ ರೈತಾಪಿ ದಿಕ್ಕು ಕಾಣದ ಸ್ಥಿತಿಯಲ್ಲಿದ್ದಾರೆ ಅರಣ್ಯ ಇಲಾಖೆಯವರು ಕಾಡಾನೆ ಓಡಿಸದೆ ಬೀದಿ ಸೇದು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು.
ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಅಪರೇಟರ್ ಮತ್ತು ವಾಟರ್ ಮ್ಯಾನ್ ಗಳೆ ದರ್ಬಾರ್ ಹೆಚ್ಚಾಗಿದೆ. ಪಿಡಿಒಗಳು ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಬಡವರ ಮೇಲೆ ಅಧಿಕಾರ ದರ್ಪ ತೋರುತ್ತಾರೆ. ಕ್ರೀಯಾಯೋಜನೆ ನಡೆಸುವ ವೇಳೆ ಅಧಿಕಾರಿಗಳಿಂದ ಬೇಡಿಕೆಯ ಬಗ್ಗೆ ಫಲಾನುಭವಿಗಳ ಬಳಿ ಲಂಚ ಕೇಳುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಯಾವ ಕಾರಣಕ್ಕೂ ಲಂಚ ಪಡೆಯುವುದೆ ವಾಡಿಕೆಯಾದರೆ ನನ್ನ ಕ್ಷೇತ್ರದಲ್ಲಿ ಇರುವುದು ಬೇಡ. ಹಳೇಬೀಡು ಪಿಡಿಒ ದೇಗುಲದ ಸುತ್ತ ಮತ್ತು ಸಿಎ ನಿವೇಶನ ಇ ಸೋತ್ತು ಮಾಡಿದ್ದಾರೆ ಈ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.ಬಂದೂರು.ಅರಕೆರೆ ಮತ್ತು ಉಂಡಿಗನಾಳು ಪಂಚಾಯತಿ ಪಿಡಿಒ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ದಿಢೀರ್ ಭೇಟಿ ನೀಡುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಪಂಚಾಯತಿಯಲ್ಲಿ ಜನಪ್ರತಿನಿಧಿಗಳ ಬಳಿ ಸಮನ್ವಯತೆ ಹೊಂದಬೇಕು ಎಂದು ಕಿವಿ ಮಾತು ಹೇಳಿದರು.
ಎಲ್ಲಾ ಪಂಚಾಯತಿಯಲ್ಲಿ ೪೪ ಅಂಶಗಳು ಜಾತಿಯಾಗಬೇಕು. ಬೇಲೂರು ತಾಲ್ಲೂಕು ಆಡಳಿತಾಧಿಕಾರಿ ಕಾರ್ಯವೈಖರಿ ಬಗ್ಗೆ ನನಗೆ ಪೂರ್ಣ ನಂಬಿಕೆ ಇಲ್ಲವಾಗಿದೆ ಅವರು ಬದಲಾವಣೆ ಸೂಕ್ತವಾಗಿದೆ.ನರೇಗಾ ಇಂಜಿನಿಯರ್ ಗಳು ಕೆಲಸ ಅಸಮರ್ಪಕವಾಗಿದೆ. ರಸ್ತೆ ಕೆಲಸ ಬದಲು ಮೈದಾನಕ್ಕೆ ಬಿಲ್ಲು ಬರೆಯುತ್ತಾರೆ. ಉದ್ಯೋಗ ಖಾತ್ರಿ ಕೆಲಸಗಳು ಗ್ರಾಮಾಭಿವೃದ್ದಿಗೆ ಪೂರಕವಾಗುತ್ತದೆ ಎಲ್ಲಾ ಅಧಿಕಾರಿಗಳ ಮತ್ತು ಪಿಡಿಒ ಸೂಕ್ತ ಕೆಲಸ ಮಾಡಬೇಕು ಎಂದು ಹೇಳಿದರು.
ಹಾಸನ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಮಾತನಾಡಿ, ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನರೇಗಾ ಮುಖ್ಯವಾಗಿದೆ. ಆದರೆ ಬೇಲೂರು ತಾಲ್ಲೂಕು ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣ ಹಿನ್ನಡೆಯಾಗಿದೆ. ಇದಕ್ಕೆ ಕಾರಣ ಅಧಿಕಾರಗಳ ನಿರ್ಲಕ್ಷ್ಯ ವಹಿಸಿದ್ದಾರೆ. ನರೇಗಾದಡಿಯಲ್ಲಿ ಸಮುದಾಯ ಅಭಿವೃದ್ಧಿ ಜೊತೆಗೆ ವೈಯಕ್ತಿಕವಾಗಿ ರೂ ೫ ಲಕ್ಷ ತನಕ ಬಳಕೆ ಮಾಡಿಕೊಳ್ಳಬಹುದು ಎಂದ ಅವರು ಗ್ರಾಮೀಣ ಗ್ರಂಥಾಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಬೇಲೂರಿಗೆ ನಾನು ಎರಡನೇ ಭಾರಿ ಬಂದ ಸಂದರ್ಭದಲ್ಲಿ ಯಾವುದೇ ಪ್ರಮುಖ ಬದಲಾವಣೆಯಾಗಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯತ ಮಟ್ಟದಲ್ಲಿ ಇಸೋತ್ತು ಬಗ್ಗೆ ಪಿಡಿಒಗಳಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣದಿಂದ ಭಾರಿ ದೂರು ಬರುತ್ತಿದೆ.ಪಂಚಾಯತಿ ಅಧಿಕಾರಿಗಳ ಮೊದಲು ಸ್ವಚ್ಚತೆಗೆ ಒತ್ತು ನೀಡಬೇಕು. ಮೊದಲು ಜನ ವಸತಿ ಬಳಿ ತಿಪ್ಪೆಗಳನ್ನು ತೆರವು ಮಾಡಬೇಕು. ತಾಲ್ಲೂಕಿನ ೧೦ ಪಂಚಾಯತ ನರೇಗಾ ಕೆಲಸದ ಪ್ರಗತಿ ತೀವ್ರ ಕುಠಿತವಾಗಿದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚುರುಕು ಮುಟ್ಟಿಸಬೇಕು ಎಂದ ಅವರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಅಧಿಕಾರಿ ಪರಪ್ಪಸ್ವಾಮಿ, ಇಒ ಸತೀಶ್ ಮತ್ತು ಬೇಲೂರು ಮತ್ತು ಅರಸೀಕೆರೆ ತಾಲ್ಲೂಕಿನ ವಿವಿಧ ಅಧಿಕಾರಿಗಳು ಹಾಜರಿದ್ದರು.


