Friday, March 13, 2026
Flats for sale
Homeಜಿಲ್ಲೆಬೆಳ್ತಂಗಡಿ : ಪೈಪ್‌ಲೈನ್‌ ಕೊರೆದು 9 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲ್ ದೋಚಿದ ಕಳ್ಳರು.

ಬೆಳ್ತಂಗಡಿ : ಪೈಪ್‌ಲೈನ್‌ ಕೊರೆದು 9 ಲಕ್ಷ ರೂಪಾಯಿ ಮೌಲ್ಯದ ಪೆಟ್ರೋಲ್ ದೋಚಿದ ಕಳ್ಳರು.

ಬೆಳ್ತಂಗಡಿ ; ಬೆಳ್ತಂಗಡಿಯಾ ಪುದುವೆಟ್ಟು ಎಂಬಲ್ಲಿ ಪೆಟ್ರೋಲಿಯಂ ಸರಬರಾಜು ಮಾಡುವ ಪೈಪ್‌ಲೈನ್‌ಗೆ ರಂಧ್ರ ಕೊರೆದ ಕಳ್ಳರು ಮಾರ್ಚ್ 16 ಮತ್ತು 19 ರ ನಡುವೆ 9.6 ಲಕ್ಷ ರೂಪಾಯಿ ಮೌಲ್ಯದ ಸುಮಾರು 12,000 ಲೀಟರ್ ಇಂಧನವನ್ನು ಕಳವು ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನೆರಿಯ ಪೆಟ್ರೋನೆಟ್ ಎಂಎಚ್‌ಬಿ ಲಿಮಿಟೆಡ್‌ನ ಠಾಣಾಧಿಕಾರಿ ರಾಜನ್ ಅವರು ದೂರು ದಾಖಲಿಸಿದ್ದಾರೆ.

ಕಳ್ಳರು ಮೂರು ಅಡಿಗಳವರೆಗೆ ಭೂಮಿಯನ್ನು ಅಗೆದು ಮುಖ್ಯ ಪೈಪ್‌ಲೈನ್‌ನಲ್ಲಿ ರಂಧ್ರವನ್ನು ಕೊರೆದು 2.5 ಇಂಚು ವ್ಯಾಸದ ಪೈಪ್ ಅನ್ನು ಅಳವಡಿಸಿ ಇಂಧನವನ್ನು ಟ್ಯಾಂಕ್ ಗಳಿಗೆ ತುಂಬಿಸಿ ಕಳ್ಳತನ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular