ಬೆಳ್ತಂಗಡಿ ; ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಾಟ್ ನಂಬರ್ 13 ರಲ್ಲಿ GPR ತಂತ್ರಜ್ಞಾನ ದಿಂದ ಸ್ಥಳ ಪರಿಶೋಧನೆ ಇಂದು ನಡೆಯಲಿದೆ.

ಸ್ಪಾಟ್ ನಂಬರ್ 13 ರಲ್ಲಿ ಬೃಹತ್ ಡ್ರೋನ್ ಬಳಸಿ ರಡಾರ್ ಮೂಲಕ ಸ್ಪಾಟ್ ನಂಬರ್ 13 ರಲ್ಲಿ SIT ತಂಡ ಸ್ಕ್ಯಾನ್ ಮಾಡಲಿರದ್ದು ಭೂಮಿಯೊಳಗಡೆ ಇರುವ ವಸ್ತುಗಳನ್ನು ರಡಾರ್ ಲೈವ್ ಇಮೇಜ್ ಪತ್ತೆಹಚ್ಚಲಿವೆ ಎಂದು ಮಾಹಿತಿ ದೊರೆತಿದೆ.
SIT ಮುಖ್ಯಸ್ಥ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಸ್ಥಳ ಪರಿಶೋಧನೆ ನಡೆಯಲಿದ್ದು ಇಂದು ಪ್ರಣವ್ ಮೊಹಾಂತಿಯವರು ಮಂಗಳೂರಿಗೆ ಬಂದು ನೇರವಾಗಿ ಬೆಳ್ತಂಗಡಿ SIT ಕಚೇರಿಗೆ ತೆರಳಿದ್ದಾರೆಂದು ತಿಳಿದುಬಂದಿದೆ.
ನಂತರ SIT ಅಧಿಕಾರಿಗಳು , AC , ಸೇರಿದಂತೆ ದೂರುದಾರ ಹಾಗು ಆತನ ವಕೀಲರೊಂದಿಗೆ ಸ್ಪಾಟ್ ನಂಬರ್ 13 ಕ್ಕೆ ಪ್ರಣವ್ ಮೊಹಾಂತಿಯವರು ಬರಲಿದ್ದು ದೂರುದಾರ ಹಾಗು ಆತನ ವಕೀಲರ ಎದುರಲ್ಲೇ ನಡೆಯಲಿದೆ GPR ಮೂಲಕ ಸ್ಥಳ ಪರಿಶೋಧನೆ ನಡೆಯಲಿದೆ. GPR ಮೂಲಕ ಸ್ಪಾಟ್ ನಂಬರ್ 13 ರ ರಹಸ್ಯ ಬಯಲಾಗಲಿದೆ ಎಂದು ಮೂಲಗಳು ಮಾಹಿತಿ ತಿಳಿಸಿದೆ.