ಬೆಳ್ತಂಗಡಿ : ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 25 ಜನರ ಛಾಯಾಚಿತ್ರಗಳ ಸಮೇತ 25 ಮೇಕೆಗಳ ತಲೆಗಳನ್ನು ತುಂಡರಿಸಿ ಗೇಟಿನ ಮುಂಭಾಗದಲ್ಲಿ ಇರಿಸಿರುವ ಆಘಾತಕಾರಿ ಘಟನೆ ಜೂ.10ರಂದು ಬೆಳ್ತಂಗಡಿ ತಾಲೂಕಿನ ಗರಡಾಡಿಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಪಡಂಗಡಿ ಗ್ರಾಮದ ಬೋಳಿಯಾರ್ ಎಂಬಲ್ಲಿ ಜೂ.9ರಂದು ರಾತ್ರಿ ಮೇಕೆಗಳ ತಲೆಯನ್ನು ತುಂಡರಿಸಿ, ಮಾಟಮಂತ್ರದ ಅಂಗವಾಗಿ ಸ್ಥಳೀಯ 25 ಜನರ ಫೋಟೋಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದ ಕಾರ್ಮಿಕರು ಜೂನ್ 10 ರಂದು ಬೆಳಿಗ್ಗೆ ದೃಶ್ಯ ಜಮೀನಿನ ಗೇಟ್ ಬಳಿ ಪತ್ತೆಹಚ್ಚಿದ್ದಾರೆ.
25 ಎಕರೆ ಭೂಮಿಯನ್ನು ಕಳೆದ ವರ್ಷ ಕೇರಳ ಮೂಲದ ಗೋಪ ಕುಮಾರ್ ಮತ್ತು ಸುಮೇಶ್ ಎಂಬುವರಿಂದ ಉದ್ಯಮಿ ಮತ್ತು ಸಾರಿಗೆ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಖರೀದಿಸಿದ್ದಾರೆ. ಪ್ರಭು ತನ್ನ ಹೆಸರಿಗೆ ಸೇಲ್ ಡೀಡ್ ಪಡೆದು ಭೂಮಿಗೆ ಒಪ್ಪಿಗೆ ಸೂಚಿಸಿದ ಎಂಟು ಕೋಟಿ ರೂ.ಗಳನ್ನು ಪಾವತಿಸಿಲ್ಲ ಎಂಬ ಅಂಶ ಬಯಲಾಗಿದೆ. ಹಲವು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆ ಬಗೆಹರಿಯಲಿಲ್ಲ. ಜಮೀನಿನ ಮೂಲ ಮಾಲೀಕರಾದ ಗೋಪ ಕುಮಾರ್ ಮತ್ತು ಸುಮೇಶ್ ಅವರು ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಯಾವುದೇ ಮೂರನೇ ವ್ಯಕ್ತಿಗೆ ಆಸ್ತಿಯನ್ನು ಮಾರಾಟ ಮಾಡದಂತೆ ಮತ್ತು ಮೂಲ ಮಾಲೀಕರಾದ ಗೋಪ ಕುಮಾರ್ ಮತ್ತು ಸುಮೇಶ್ ಅವರಿಗೆ ಭೂಮಿಯನ್ನು ಹಿಂದಿರುಗಿಸುವಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ ರಾಜೇಶ್ ಪ್ರಭು ಅವರಿಗೆ ಸೂಚಿಸಿದೆ. ಇದರಿಂದ ಗೋಪಕುಮಾರ್ ಮತ್ತು ಸುಮೇಶ್ ಕೃಷಿ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾರೆ. ರಾಜೇಶ್ ಪ್ರಭು ಮಾಟಮಂತ್ರದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆತನ ವಿರುದ್ಧ ಭೂಮಾಲೀಕರಾದ ಗೋಪಕುಮಾರ್ ಹಾಗೂ ಸುಮೇಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ
ಭೂಮಾಲೀಕರು ಕೇರಳದಲ್ಲಿ ನೆಲೆಸಿದ್ದು ಆದ್ದರಿಂದ ಜಮೀನಿನ ಮೇಲ್ವಿಚಾರಕರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ. ಮಾಟ ಮಂತ್ರದಿಂದ ಸ್ಥಳೀಯ ಗ್ರಾಮಸ್ಥರು ಭಯಭೀತರಾಗಿದ್ದಾರೆ.