ಬೆಳ್ತಂಗಡಿ ; ಕುದುರೆಮುಖ ಉದ್ಯಾನವನ ವನ್ಯಜೀವಿ ವಲಯರ ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ತಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸಪಡುತ್ತಿರುವ ಮಾಹಿತಿ ದೊರೆತ್ತಿದೆ.
ಕಡಿದಾದ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೇ ಇರುವುದರಿಂದ ಬೆಂಕಿ ಕೆನ್ನಾಲಿಗೆ ಸುಮಾರು 50 ಕಿ.ಮೀ. ದೂರದ ಬೆಳ್ತಂಗಡಿ ವರೆಗೆ ನೇರವಾಗಿ ಗೋಚರಿಸುತ್ತಿದ್ದು ಬೆಟ್ಟದ ತುದಿ ಪ್ರದೇಶವಾಗಿರುವುದರಿಂದ ಬೆಂಕಿನಂದಿಸಲು ಪ್ರಯತ್ನಿಸುತ್ತಿದ್ದು ಅದು ನೆಟ್ ವರ್ಕ್ ಇಲ್ಲದ ಪ್ರದೇಶವಾಗಿದ್ದು ಅರಣ್ಯ ಇಲಾಖೆಯ ಕುದುರೆಮುಖ ವಿಭಾಗದ ಸಿಬ್ಬಂದಿ ಜತೆ ಸಂವಹನ ನಡೆಸುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದೊ ಕಾಡ್ಗಿಚ್ಚು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ವನ್ಯಜೀವಿ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ ಎಂದು ತಿಳಿದುಬಂದಿದೆ.ಈ ಭಾಗದ ಸ್ವಯಂ ಸೇವಕರ ತಂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಹಿಸಿದ್ದಾರೆಂದು ತಿಳಿದಿದೆ.