ಬೆಳಗಾವಿ : ತಾಲೂಕಿನ ವಿಜಯನಗರ ಗ್ರಾಮದ ಲಕ್ಷ್ಮಿ ಎಂಬ ಗರ್ಭಿಣಿಗೆ ನಿನ್ನೆ ತಡರಾತ್ರಿ ಸುಮಾರು 1: 30 ನಿಮಿಷಕ್ಕೆ 108 ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ವಿಜಯನಗರ ಗ್ರಾಮದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಪ್ರಾರಂಭವಾಗಿದ್ದು ಕೂಡಲೇ ಕುಟುಂಬಸ್ಥರು 108 ಅಂಬುಲೆನ್ಸ್ ಗೆ ಕರೆ ಮಾಡಿ ಬರುವಂತೆ ತಿಳಿಸಿದರು. ಸಮಯಕ್ಕೆ ಸರಿಯಾಗಿ 108 ಸಿಬ್ಬಂದಿ ಬಾಳವ್ವ ಶಿವಪ್ಪ ಬಯ್ಯಾರ್ ಅಶೋಕ ತಲುಪಿ ಲಕ್ಷ್ಮಿ ಎಂಬ ಗರ್ಭಿಣಿ ಮಹಿಳೆಯನ್ನು ವಿಜಯನಗರ ಗ್ರಾಮದಿಂದ ಜಾಂಬೋಟಿಗೆ 108 ಆಂಬುಲೆನ್ಸ್ ನಲ್ಲಿ ಸ್ಥಳಾಂತರ ಮಾಡುತ್ತಿದ್ದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ರಸ್ತೆ ಬದಿಗೆ 108 ವಾಹನ ನಿಲ್ಲಿಸಿದ ಸಿಬ್ಬಂದಿ, ಸುರಕ್ಷಿತವಾಗಿ ಅಲ್ಲಿಯೇ ಹೆರಿಗೆ ಮಾಡಿಸಿದ್ದಾರೆ.
108 ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ಪಾತ್ರರಾಗಿದ್ದಾರೆ.


