Thursday, March 12, 2026
Flats for sale
Homeರಾಜ್ಯಬೆಳಗಾವಿ ; ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿ,ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ...

ಬೆಳಗಾವಿ ; ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿ,ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಸೈಬರ್ ವಂಚಕರ ಬೆದರಿಕೆಗೆ ಹೆದರಿ ಆತ್ಮಹತ್ಯೆ…!

ಬೆಳಗಾವಿ ; ಸೈಬರ್ ವಂಚಕರ ಕಿರುಕುಳಕ್ಕೆ ವೃದ್ಧ ದಂಪತಿ ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ಡಿಯಾಂಗೋ ನಜರತ್(83) ಮಾತ್ರೆ ನುಂಗಿ ಆತ್ಮಹತ್ಯೆಮಾಡಿಕೊಂಡವರನ್ನು ಪ್ಲೇವಿಯಾನಾ ನಜರತ್(79) ಎಂದು ತಿಳಿದಿದೆ.

ಕೆಲ ದಿನಗಳ ಹಿಂದೆ ದೆಹಲಿ ಕ್ರೈಂ ಬ್ರ್ಯಾಂಚ್ ದಿಂದ ಕರೆ ಮಾಡ್ತಿದ್ದೇವೆ.ಕ್ರೈಂ ಒಂದರಲ್ಲಿ ಭಾಗಿಯಾಗಿದ್ದೀರಿ ಅಂತಾ ವೃದ್ದ ದಂಪತಿಗೆ ವಿಡಿಯೋ ಕಾಲ್ ನಲ್ಲಿ ಬೆದರಿಕೆ ಹಾಕಿದ್ದು ಬಳಿಕ ಐದು ಲಕ್ಷ ಹಣಕ್ಕೆ ಸೈಬರ್ ವಂಚಕರು ಬೇಡಿಕೆ ಇಟ್ಟಿದ್ದರು.

ಹಣ ಕೊಟ್ಟ ಬಳಿಕವೂ ಮತ್ತೆ ವಿಡಿಯೋ ಕಾಲ್ ಮಾಡಿ ಧಮಕಿ. ಹಣ ಕೊಡದಿದ್ರೇ ಅರೆಸ್ಟ್ ಮಾಡುವುದಾಗಿ ಸೈಬರ್ ವಂಚಕರು ಹೆದರಿಸಿದ್ದರು. ಇದರಿಂದ ಮನನೊಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ನಂದಗಡ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು ವೃದ್ಧ ದಂಪತಿ ಶವ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular