Friday, March 13, 2026
Flats for sale
Homeರಾಜ್ಯಬೆಳಗಾವಿ : ವಿವಾಹಿತ ಪ್ರೇಮಿಗಳು ತಮ್ಮ ಸಂಸಾರ ತೊರೆದು ಪರಾರಿ,ಪ್ರೇಮಿ ಮನೆ ಧ್ವಂಸ : ದೂರು...

ಬೆಳಗಾವಿ : ವಿವಾಹಿತ ಪ್ರೇಮಿಗಳು ತಮ್ಮ ಸಂಸಾರ ತೊರೆದು ಪರಾರಿ,ಪ್ರೇಮಿ ಮನೆ ಧ್ವಂಸ : ದೂರು ದಾಖಲು.

ಬೆಳಗಾವಿ : ಯುವಪ್ರೇಮಿಗಳು ಪ್ರೀತಿಸಿ ಉರುಬಿಟ್ಟುಹೋಗುವುದನ್ನು ಕಂಡಿದ್ದೇವೆ ಆದರೆ ಇಲ್ಲಿ ಮದುವೆ ಆದ 2 ಮಕ್ಕಳಿರುವ ಪ್ರೇಮಿಗಳು ಹೆಂಡತಿ ಗಂಡ ಮಕ್ಕಳನ್ನು ಬಿಟ್ಟು ಹೋದ ಘಟನೆ ನಡೆದಿದೆ.

ಎರಡು ತಿಂಗಳ ಹಿಂದೆಯಷ್ಟೇ ಕಾಕತಿ ಠಾಣಾ ವ್ಯಾಪ್ತಿಯ ಹೊಸ ವಂಟಮೂರಿಯಲ್ಲಿ ಪ್ರೇಮಿಗಳು ಪರಾರಿಯಾದಾಗ ಅವನ ಮೇಲಿನ ಸಿಟ್ಟಿನಲ್ಲಿ ಆತನ ಮನೆಗೆ ನುಗ್ಗಿ ಅವನ ತಾಯಿಯನ್ನು ವಿಸ್ತೃತ ಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದನ್ನು ಯಾರೂ ಮರೆತಿಲ್ಲ. ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಯಮಕನಮರಡಿಯಲ್ಲಿ ನಡೆದಿದೆ. ಅವರಿಬ್ಬರದ್ದೂ ಒಂದೇ ಜಾತಿ. ಅವಳು ಇಬ್ಬರು ಮಕ್ಕಳ ತಾಯಿ. ಆತನಿಗೂ ಒಬ್ಬ ಮಗನಿದ್ದಾನೆ. ಚೆಂದದ ಸಂಸಾರ ಕಟ್ಟಿಕೊಳ್ಳಬೇಕಾಗಿದ್ದ ಇಬ್ಬರೂ ಪರಸ್ಪರ ಪ್ರೀತಿಸಿ ಸಂಬಂಧ ಹೊಂದಿದ್ದೇ ಅನಾಹುತಕ್ಕೆ ಕಾರಣವಾಗಿದೆ.

ಈ ಇಬ್ಬರೂ ಪ್ರೇಮಿಗಳು ಮಂಗಳವಾರ ರಾತ್ರೋರಾತ್ರಿ ಊರು ಬಿಟ್ಟಿದ್ದಾರೆ. ಬೆಳಗಾವಿಯ ಯಮಕನಮರಡಿ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಜಿನ್ರಾಳದ ಈ ವಿವಾಹಿತ ಪ್ರೇಮಿಗಳು ತಮ್ಮ ಸಂಸಾರ ತೊರೆದು ಒಂದಾಗಿ ಬದುಕಲು ಊರು ಬಿಟ್ಟಿದ್ದಾರೆ.

ಲಗಮಣ್ಣ ವಾಲಿಕಾರ ಪ್ರಿಯಕರ. ಮನೆ ಸಾಮಗ್ರಿ ಧ್ವಂಸ ಪತ್ನಿ ಪರಪುರುಷನೊಂದಿಗೆ ಪರಾರಿಯಾಗಿದ್ದನ್ನು ಸಹಿಸದ ಪತಿ ಹಾಗೂ ಆತನ ಕುಟುಂಬದವರು ಪ್ರಿಯಕರನ ಮನೆಯ ಮೇಲೆ ದಾಳಿ ನಡೆಸಿ, ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ.

ದಾಳಿಕೋರರು ಬರುತ್ತಿರುವುದನ್ನು ಕಂಡು ಸಮಯಪ್ರಜ್ಞೆಯಿಂದ ಆತನ ಕುಟುಂಬ ಅಂದರೆ ವಯಸ್ಸಾದ ತಾಯಿ, ಅಜ್ಜಿ, ಪತ್ನಿ ಹಾಗೂ ಪುತ್ರ ನೆರೆಮನೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದರಿಂದ ಆಕ್ರೋಶಕ್ಕೆ ತುತ್ತಾಗಲಿಲ್ಲ. ಆದರೆ ಕಣ್ಣಮುಂದೆಯೇ ಮನೆ ಧ್ವಂಸವಾಗುತ್ತಿರುವುದನ್ನು ಕಂಡರೂ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿಗೆ ಬಂದರು. ಕೈಯಲ್ಲಿ ಕೊಡಲಿ, ಮಚ್ಚು, ಕಟ್ಟಿಗೆ ದೊಣ್ಣೆ ಹಿಡಿದು ಬಂದ ಸುಮಾರು 30 ಮಂದಿ ತAಡವನ್ನು ಎದುರಿಸಲಾಗದೆ ಕಣ್ಣೀರಿಡುತ್ತಾ ನಿಂತಿದ್ದ ಲಗಮಣ್ಣನ ಮನೆಯವರು ಹುಕ್ಕೇರಿ ಠಾಣೆಗೆ ದೂರು ನೀಡಿದ್ದಾರೆಂದು ಗೊತ್ತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular