ಬೆಳಗಾವಿ : ಪ್ರತಿಪಕ್ಷಗಳ ಪ್ರತಿಭಟನೆ, ಭಾರೀ ಗದ್ದಲ, ಕೂಗಾಟ ಹಾಗೂ ಹಲವಾರು ಗೊಂದಲಗಳ ನಡುವೆ ವಿವಾದಿತ `ದ್ವೇಷ ಭಾಷಣ’ ನಿಷೇಧ ವಿಧೇಯಕ ಗುರು ವಾರ ವಿಧಾನಸಭೆಯಲ್ಲಿ ಅಂಗೀಕಾರ ಗೊAಡಿತು. ಈ ವಿಧೇಯಕದ ಅಂಗೀಕಾರ ಪ್ರಕ್ರಿಯೆ ಹಲವಾರು ತಿರುವುಗಳಿಂದ ಕೂಡಿತ್ತು ಹಾಗೂ ಕೆಲ ನಾಟಕೀಯ ಘಟನಾವಳಿಗಳೂ ನಡೆದು ತೀರ ಅನಿರೀಕ್ಷಿತ ಎನ್ನುವ ಹಂತದಲ್ಲಿ ವಿವಾದಿತ ಬಿಲ್ ಅಂಗೀಕಾರ ಗೊಂಡಿತೆನ್ನುವುದು ಗಮನಾರ್ಹ.
ಗೃಹ ಸಚಿವ ಡಾ.ಜಿ.ಪರಮೇಶ್ವರ ವಿಧೇಯಕದ ಬಗ್ಗೆ ವಿವರಿಸಿದ ನಂತರ ಚರ್ಚೆ ಆರಂಭವಾಯಿತು. ವಿಪಕ್ಷ ನಾಯಕ ಆರ್.ಅಶೋಕ ವಿಧೇಯಕ ವನ್ನು ಇನ್ನಿಲ್ಲದಂತೆ ವಿರೋಧಿಸಿ ಮಾತನಾಡುತ್ತಿದ್ದರು. ಈ ಹಂತದಲ್ಲಿ ಅಶೋಕ್ ಮಾತಿಗೆ ಪೂರಕವಾಗಿ ಎದ್ದು ನಿಂತ ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಉದ್ದೇಶಿಸಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕರಾವಳಿಗೆ ಬೆಂಕಿ ಇಟ್ಟು ಬಂದಿದ್ದೀರಿ, ಕೂತ್ಕೊಳ್ರೀ' ಎಂದದ್ದು ಬಿಜೆಪಿಯನ್ನು ಕೆರಳಿಸಿತು. ಸಚಿವ ಭೈರತಿ ಕ್ಷಮೆಗೆ ಪಟ್ಟು ಹಿಡಿದು ಬಿಜೆಪಿ ಮತ್ತು ಜೆಡಿಎಸ್ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾಗ, ಗೃಹ ಸಚಿವರು ವಿಧೇಯಕವನ್ನು ಅಂಗೀಕರಿಸುವAತೆ ತರಾತುರಿಯಲ್ಲಿ ಕೋರಿದರು. ಸ್ಪೀಕರ್ ಯು.ಟಿ.ಖಾದರ್ ಧ್ವನಿಮತದಿಂದ ಅಂಗೀಕರಿಸಿ, ಸದನವನ್ನು ಮುಂದೂಡಿ ಪೀಠದಿAದ ತೆರಳಿದರು. ಇದು ಪ್ರತಿಪಕ್ಷಕ್ಕೆ ಅನಿರೀಕ್ಷಿತವಾಗಿತ್ತು.ಬೇರೆ ವಿಷಯಕ್ಕೆ ಪ್ರತಿ ಭಟನೆ ನಡೆಯುತ್ತಿರುವಾಗ, ಚರ್ಚೆಯೇ ಪೂರ್ಣಗೊಳ್ಳದೇ ಹೇಗೆ ಅಂಗೀಕರಿಸುತ್ತೀರಿ’ ಎAದು ಕೆರಳಿ ಕೆಂಡವಾಗಿದ್ದ ಪ್ರತಿ ಪಕ್ಷಗಳು ಕೂಗಾಟ ನಡೆಸಿದವು.
ಆದರೆ ಅಧಿಕೃತವಾಗಿ ಮಸೂದೆ ಅಂಗೀಕಾರ ಗೊAಡಿತ್ತು. ಇದು ಸಹಜವಾಗಿ ಇಡೀ ಬಿಜೆಪಿ- ಜೆಡಿಎಸ್ಗೆ ಆಘಾತ ತಂದ ಸಂಗತಿಯಾಗಿತ್ತು. ಏಕೆAದರೆ ಸಾಕಷ್ಟು ಮುಂಚೆ ಯಿಂದಲೇ ನಿರ್ಣಯಿಸಿ ಕೊಂಡಿದ್ದAತೆ ಈ ವಿಧೇಯಕವನ್ನು ಪಾಸ್ ಆಗಲು ಬಿಡಬಾರದು; ಜಂಟಿ ಸದನ ಸಮಿತಿ ಅಧ್ಯಯನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಬೇಕು ಎಂಬುದು ಪ್ರತಿಪಕ್ಷದ ಆಲೋಚನೆಯಾಗಿತ್ತು. ಈ ತಂತ್ರಗಾರಿಕೆಯಲ್ಲಿ ವಿಫಲವಾಗಿದ್ದಷ್ಟೇ ಅಲ್ಲ, ತಮ್ಮನ್ನು ಬೇರೊಂದು ವಿಷಯದತ್ತ ಗಮನ ಸೆಳೆದು ಬಿಲ್ ಅಂಗೀಕಾರ ಮಾಡಿಕೊಂಡಿದ್ದು ಮೂಡಿಸಿದ ಆಘಾತ ಸದನದಿಂದ ಹೊರ ಬಂದ ಎಲ್ಲ ಬಿಜೆಪಿ ಸದಸ್ಯರಲ್ಲಿತ್ತು. ಭೋಜನಾನಂತರ ಸದನ ಸೇರಿದಾಗ ಆರ್.ಅಶೋಕ್ ಮತ್ತು ಇತರರು ಸ್ಪೀಕರ್ ನಡೆಯನ್ನು ಖಂಡಿಸಿ, ನಾವಿನ್ನೂ ಚರ್ಚೆಯನ್ನೇ ಮಾಡದಿರುವಾಗ ಅಂಗೀಕಾರ ಸರಿಯೇ ಎಂದು ಕೇಳಿದರು.
ಆಗ ಸ್ಪೀಕರ್ ವಿಪಕ್ಷ ಹಾಗೂ ಪ್ರಮುಖ ಸಚಿವರೊಂದಿಗೆ ಸಂಧಾನ ಸಭೆಯನ್ನು ನಡೆಸಿದಾರೂ ಪ್ರಯೋಜನ ಆಗಲಿಲ್ಲ. ಮಸೂದೆ ವಾಪಸ್ ಪಡೆದು, ಜಂಟಿ ಅಧ್ಯಯನ ಸಮಿತಿಗೆ ಒಪ್ಪಿಸಿ ಎಂಬ ಆಗ್ರಹ ಮುಂದುವರಿಸಿದರು. ಸರ್ಕಾರ ಒಪ್ಪಲಿಲ್ಲ. ಸರ್ಕಾರದ ನಿಲುವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ- ಜೆಡಿಎಸ್ ಸಭಾ ತ್ಯಾಗ ಮಾಡಿದವು.
ದ್ವೇಷ ಭಾಷಣ ಮಸೂದೆ ಅಂಗೀಕಾರ ವAತೂ ಆಯಿತು. ಮುಂದಿನ ನಡೆ? `ಕಾನೂನು ಮತ್ತು ಮೇಲ್ಮನೆಯಲ್ಲಿ ತಂತ್ರಗಾರಿಕೆಯ ಹೋರಾಟ’ ಎಂಬುದಾಗಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ.
ಮಸೂದೆಯಲ್ಲಿ ಏನಿದೆ?
ದ್ವೇಷ ಭಾಷಣ ಜಾಮೀನು ರಹಿತ ಅಪರಾಧವಾಗಿದ್ದು ಮೊದಲ ಸಲ ಅಪರಾಧಕ್ಕೆ ಕನಿಷ್ಠ 1 ವರ್ಷದಿಂದ 7ವರ್ಷಗಳ ತನಕ ಜೈಲು ಶಿಕ್ಷೆ, 5೦೦೦೦ ರೂ. ದಂಡ ವಿಧಿಸಲಾಗಿದೆ. ಅಪರಾಧವನ್ನು ಪುನರಾವರ್ತಿಸಿದರೆ ೨ರಿಂದ ೭ ವರ್ಷ ಜೈಲು ಶಿಕ್ಷೆ ಫಿಕ್ಸ್, ಒಂದು ಲಕ್ಷ ರೂಪಾಯಿ ದಂಡ. ಧರ್ಮ, ಜನಾಂಗ, ಜಾತಿ, ಸಮುದಾಯ, ಲಿಂಗ, ಲಿAಗತ್ವ, ಜನ್ಮಸ್ಥಳ, ವಾಸ ಸ್ಥಳ, ಭಾಷೆ, ನ್ಯೂನತೆ, ಪಂಗಡ ಆಧರಿಸಿ ಭಾಷಣ ಮಾಡುವುದು ಅಪರಾಧ. ಲೈಂಗಿಕ ದೃಷ್ಟಿಕೋನದ ಸಾರ್ವಜನಿಕ ಮಾತುಗಳೂ ಅಪರಾಧ. ಇದಕ್ಕೂ ಜೈಲು ಶಿಕ್ಷೆ, ದಂಡ ಇರುತ್ತದೆ. ಎಂದೋ ಪ್ರಕಟವಾಗಿದ್ದ ದ್ವೇಷಕಾರಕ ಅಂಶವನ್ನು ಉಲ್ಲೇಖ ಮಾಡುವುದೂ ಶಿಕ್ಷಾರ್ಹ ಅಪರಾಧವೇ. ಬೇರೊಬ್ಬರು ಮಾಡಿದ ಭಾಷಣದ ಪ್ರಕಟಣೆಗಳು, ಪ್ರಚಾರ, ಸಾರ್ವಜನಿಕವಾಗಿ ಕಾಣುವಂತೆ ಅಥವಾ ಕೇಳುವಂತೆ ಮೌಖಿಕವಾಗಿ ಮಾತನಾಡಿಕೊಳ್ಳುವುದೂ ಅಪರಾಧ. ಇದಕ್ಕೂ ಜೈಲು ಶಿಕ್ಷೆ ಹಾಗೂ ದಂಡ. ಮುದ್ರಣ, ಪ್ರಕಟಣೆ ಜೊತೆಗೆ, ಎಲೆಕ್ಟಾçನಿಕ್ ವಿಧಾನಗಳ ಮೂಲಕ (ಮೊಬೈಲ್ ಇತ್ಯಾದಿ) ಹರಿದಾಡಿ ದರೂ ಶಿಕ್ಷೆ. ಯೂಟ್ಯೂಬರ್ಗಳೂ ಇದರ ವ್ಯಾಪ್ತಿಗೆ ಬರುತ್ತಾರೆ.


