ಬೆಳಗಾವಿ : ಜಿಲ್ಲೆಯಾ ರಾಮದುರ್ಗ ತಾಲೂಕಿನ ಕಡ್ಡಿಕೊಪ್ಪ ಗ್ರಾಮದ ಹೊಲದಲ್ಲಿ ರೈತರು ಹೆಬ್ಬಾವು ಕಂಡಿದ್ದು ರಾಮದುರ್ಗದ ಪೊಲೀಸ್ ಸಹಾಯವಾಣಿ 112 ವಾಹನಕ್ಕೆ ಕರೆ ಮಾಡಿದ್ದಾರೆ.

112 ವಾಹನದಲ್ಲಿರುವ ಪೊಲೀಸ್ ಪೇದೆ ಪ್ರಕಾಶ ಗಾಡಿವಡ್ಡರ ಉರಗ ರಕ್ಷಕನಾಗಿಯೂ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ. ಪೊಲೀಸ್ ಪೇದೆ ನೂರಾರು ಹಾವುಗಳನ್ನು ರಕ್ಷಸಿ ಸುರಕ್ಷಿತವಾದ ಸ್ಥಳಕ್ಕೆ ಬಿಡುತ್ತಿದ್ದಾರೆ. ಸಂಪೂರ್ಣವಾಗಿ 12 ಅಡಿ 30 ಕಿಲೋ ಭಾರವಿರುವ ಹೆಬ್ಬಾವನ್ನು ಪೊಲೀಸ್ ಪೇದೆ ಪ್ರಕಾಶ ಗಾಡಿವಡ್ಡರ ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡುವುತ್ತಿದ್ದರೆಂದು ತಿಳಿಸಿದ್ದಾರೆ.


