ಬೆಳಗಾವಿ ; ಬಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟ ಹಿನ್ನೆಲೆ ತುರ್ತು ಚಿಕಿತ್ಸಾ ಘಟಕದಲ್ಲಿ ಇಪ್ಪತ್ತು ನಿಮಿಷಗಳ ಕಾಲ ಕತ್ತಲಲ್ಲಿ ಚಿಕಿತ್ಸೆ ನೀಡಿದ ಘಟನೆ ವರದಿಯಾಗಿದೆ.
ವೈದ್ಯರು ರೋಗಿಗಳಿಗೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ ನೀಡಿದ್ದು ವಿಷ ಕುಡಿದು ಬಂದಿದ್ದ ರೋಗಿಗೂ ಬೇರೆ ಉಪಾಯವಿಲ್ಲದೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ ನೀಡಿದ್ದಾರೆ.
ಐಸಿಯುವಿನಲ್ಲೂ ಕರೆಂಟ್ ಶಾಕ್ ಹೋಗಿದ್ದು ಇದರಿಂದ ರೋಗಿಗಳು ಶಾಕ್ ಆಗಿದ್ದಾರೆಂದು ತಿಳಿದಿದೆ. ಇಪ್ಪತ್ತು ನಿಮಿಷಗಳ ಕಾಲ ವಿದ್ಯುತ್ ಕಡಿತ ಹಿನ್ನೆಲೆ ವೈದ್ಯರು ರೋಗಿಗಳ ಪರದಾಟ ಶುರುವಾಗಿತ್ತೆಂದು ಮಾಹಿತಿ ದೊರೆತಿದೆ.
ಇಪ್ಪತ್ತು ನಿಮಿಷಗಳ ಬಳಿಕ ವಿದ್ಯುತ್ ಪೂರೈಕೆಯಾಗಿದ್ದು ಇದರಿಂದ ರೋಗಿಗಳ ಪೋಷಕರು ಆಸ್ಪತ್ರೆ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.


