Thursday, March 12, 2026
Flats for sale
Homeರಾಜ್ಯಬೆಳಗಾವಿ : ಗೃಹ ಲಕ್ಷ್ಮಿ ಹಣ ಕೂಡಿಟ್ಟು ಪುತ್ರನಿಗೆ ಬೈಕ್ ಕೊಡಿಸಿದ ತಾಯಿ.

ಬೆಳಗಾವಿ : ಗೃಹ ಲಕ್ಷ್ಮಿ ಹಣ ಕೂಡಿಟ್ಟು ಪುತ್ರನಿಗೆ ಬೈಕ್ ಕೊಡಿಸಿದ ತಾಯಿ.

ಬೆಳಗಾವಿ : ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಗೃಹ ಲಕ್ಷ್ಮಿ ಹಣ ಕೂಡಿಟ್ಟು ಪುತ್ರನಿಗೆ ಬೈಕ್ ಕೊಡಿಸಿದ ಬಾಗವ್ವ ಸಣ್ಣಕ್ಕಿಯವರ ಕಾರ್ಯಕ್ಕೆ ಸಚಿವೆ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಬುಕಿಂಗ್ ಗಾಗಿ ಮುಂಗಡ ಹಣ ನೀಡಿ ಬಾಗವ್ವ ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸಿದ್ದಾರೆ.

ಬಾಗವ್ವ ಸಣ್ಣಕ್ಕಿಯವರ ಪುತ್ರ ಇಂದು ಬೈಕ್ ಖರೀದಿಸಿದ್ದು ಮಗನಿಗೆ ಬೈಕ್ ಖರೀದಿಗೆ ತಾಯಿ ಗೃಹ ಲಕ್ಷ್ಮಿ ಹಣ ನೀಡಿರುವ ಸುದ್ದಿ ಕೇಳಿ ಖುಷಿ ಆಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಪತ್ರದ ಮೂಲಕ ಬಾಗವ್ವಗೆ ಅಭಿನಂದನೆ‌ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular