ಬೆಳಗಾವಿ : ಕಾರು ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಕಾಲುವೆ ಬಳಿ ಜತ್ತ-ಜಾಂಬೋಟಿ ರಸ್ತೆಯಲ್ಲಿ ಸಂಭವಿಸಿದೆ.
ಅಪಘಾತದ ಕುರಿತು ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಕಳೆದ ಹಲವು ದಿನಗಳನ್ನು ರಾಜ್ಯದಲ್ಲಿ ಅಪಘಾತದಿಂದ ಮೃತಪಟ್ಟ ಸಂಖ್ಯೆ ಅಧಿಕವಾಗಿದೆ.ಇದೀಗ ಕಾರು ಬೈಕ್‌ಗೆ ಡಿಕ್ಕಿಯಾದ ಬಳಿಕ ನಿಯಂತ್ರಣ ತಪ್ಪಿದ ಕಾರು ಪಲ್ಟಿ ಐವರು ಮೃತಪಟ್ಟ ಘಟನೆ ವರದಿಯಾಗಿದೆ.
ಗುರ್ಲಾಪುರದ ನಿವಾಸಿಗಳಾದ ಮಲ್ಲಿಕಾರ್ಜುನ್ ಮರಾಠೆ(16), ಲಕ್ಷ್ಮೀ ಮರಾಠೆ(19), ಆಕಾಶ ಮರಾಠೆ(14), ನಿಪನಾಳ ಗ್ರಾಮದ ಶ್ರೀಕಾಂತ ಪಡತರಿ(22), ಮುಗಳಖೋಡ ಗ್ರಾಮದ ನಾಗಪ್ಪ ಯಡವನ್ನವರ್(48) ಮೃತರು. ಗುರ್ಲಾಪುರ ಕಡೆಯಿಂದ ಮುಗಳಖೋಡದತ್ತ ಹೊರಟಿದ್ದ ಕಾರು ಮೊದಲು ಬೈಕ್‌ಗೆ ಗುದ್ದಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಇದರಿಂದ ದುರಂತ ನಡೆದಿದ್ದು, ಐವರು ಮೃತರ ಪೈಕಿ ಮೂವರು ಒಂದೇ ಕುಟುಂಬದವರಾಗಿದ್ದಾರೆ.
ಈ ಕುರಿತು ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


