ಬೆಂಗಳೂರು : ಕೇವಲ ಬಿಟ್ಟಿ ಭಾಗ್ಯಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಖಜಾನೆ ಬರಿದಾಗಿದ್ದು ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ7,೦೦೦ ಕೋಟಿ ರೂ. ಹೆಚ್ಚುವರಿ ಮದ್ಯ ಮಾರಾಟ ಮಾಡುವ ಗುರಿ ನೀಡಿದೆ.
ಈ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದು ಸರಕಾರಕ್ಕೆ ಹಣ ಹೊಂದಿಸುವುದೇ ದೊಡ್ಡ ತಲೆನೋವಾಗಿದೆ . 2022-24 ನೇ ಸಾಲಿನಲ್ಲಿ 26 ಸಾವಿರ ಕೋಟಿ ರೂ. ವಾರ್ಷಿಕ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಶೇ.30 ರಷ್ಟು ಹೆಚ್ಚುವರಿ ಗುರಿಯನ್ನು ನೀಡಲಾಗಿದೆ.
ರಾಜ್ಯದಲ್ಲಿ ಅಬಕಾರಿ ಇಲಾಖೆಯ ಸುಂಕ ಹೆಚ್ಚಾಗಿದ್ದು ಸರಕಾರ ಮದ್ಯಪ್ರಿಯರಿಗೆ ಬರೆಯೆಳೆದಿದ್ದಾರೆ .ಎಂಟು ತಿಂಗಳಲ್ಲಿ ಮದ್ಯ ಮಾರಾಟದ ಶೇ.65.8 ರಷ್ಟು ಸಾಧನೆಯನ್ನು ತಲುಪಿದೆ. ಉಳಿದ ನಾಲ್ಕು ತಿಂಗಳಲ್ಲಿ ಶೇ.35 ರಷ್ಟು ಗುರಿ ತಲುಪುವುದು ಕಷ್ಟ ಸಾಧ್ಯ ಎನ್ನುತ್ತಿದ್ದಾರೆ ಅಧಿಕಾರಿಗಳು. ವಿವಿಧ ಇಲಾಖೆಗಳಿಗೆ ಹೊಲಿಸಿದರೆ ಅಬಕಾರಿ ಇಲಾಖೆಯಿಂದ ಹೆಚ್ಚು ತೆರಿಗೆಯನ್ನು ಸರ್ಕಾರ ನಿರೀಕ್ಷೆ ಮಾಡಿದೆ.
ಇದಲ್ಲದೆ ಟಾರ್ಗೆಟ್ ನೀಡುವ ಮುಖಂತರ ಘೋಷಣೆ ಮಾಡಿರುವ ಐದು ಗ್ಯಾರಂಟಿಗಳಿಗೆ ಹಣ ಕ್ರೊಢೀಕರಣ ಮಾಡಿಕೊಡಲು ಅಬಕಾರಿ ಅಧಿಕಾರಿಗಳು ಮದ್ಯದಂಗಡಿ, ಬಾರ್ಗಳ ಮಾಲೀಕರಿಗೆ ಹೆಚ್ಚು ಮದ್ಯ ಮಾರಾಟ ಮಾಡುವ ಬಗ್ಗೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ ನಾಲ್ಕು ಯೋಜನೆಗಳನ್ನು ಸರ್ಕಾರ ಜಾರಿಗೆ ಮಾಡಿದೆ. ಯುವನಿಧಿ 5 ನೇ ಗ್ಯಾರಂಟಿಯನ್ನು ಡಿಸೆಂಬರ್ನಲ್ಲಿ ಪ್ರಾರAಭಿಸುವುದಾಗಿ ಹೇಳಿದೆ. ಈ ಯೋಜನೆಗೆ ಸಾಕಾಗುವಷ್ಟು ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ.
ಸರಕಾರದ ಗುರಿ,ಸಾಧನೆ: 2022-23ನೇ ಸಾಲಿನಲ್ಲಿ 36 ಸಾವಿರ ಕೋಟಿ ರೂ.ಮದ್ಯ ಮಾರಾಟದ ಗುರಿ ನೀಡಲಾಗಿತ್ತು. ಆ ಪೈಕಿ 21.015 ಸಾವಿರ ಕೋಟಿ ಮದ್ಯವನ್ನು ಮಾರಾಟ ಮಾಡಲಾಗಿತ್ತು. 2013-24ನೇ ಸಾಲಿನಲ್ಲಿ 36,೦೦೦ ಕೋಟಿ ರೂ. ಗುರಿಯನ್ನು ನೀಡಲಾಗಿರುವುದು ಇಲಾಖೆಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ಇಷ್ಟಲ್ಲದೆ ಆರುತಿಂಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಿಯರ್ ಮಾರಾಟವಾಗಿದೆ. 2023-24ನೇ ಸಾಲಿನ ಮಾರ್ಚ್ನಿಂದ ಇಲ್ಲಿಯ (2023 ಡಿಸೆಂಬರ್ 12)ಯವರೆಗೆ 302 ಲಕ್ಷ ಬಾಕ್ಸ್ಗಳು ಮಾರಾಟ ವಾಗಿದೆ. ಉಳಿದಂತೆ ವಿಸ್ಕಿ, ಬ್ರಾಂಡಿ ಸೇರಿ ಇತರೆ ಮದ್ಯ 4.68 ಲಕ್ಷ ಬಾಕ್ಸ್ಗಳಷ್ಟು ಮಾರಾಟವಾಗಿದೆ.
ಇಷ್ಟೆಲ್ಲ ಕಸರತ್ತು ನಡೆಸಿದರು ಸರಕಾರದ ಆದಾಯದಲ್ಲಿ ಕೊರತೆ ಎದ್ದು ಕಾಣುತಿದ್ದು ,ಕೊರೋನಾ ಅಂತಹ ಮಹಾಮಾರಿಯ ಪ್ರಕರಣ ರಾಜ್ಯದಲ್ಲಿ ಹೆಚ್ಚಾದರೆ ಸರ್ಕಾರ ಈ ಎಲ್ಲ ಗ್ಯಾರಂಟೀ ಯೋಜನೆಗಳನ್ನು ರದ್ದುಪಡಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರ ಮಾತು.


