Saturday, March 14, 2026
Flats for sale
Homeರಾಜ್ಯಬೆಂಗಳೂರು : 3 ಕಿ.ಮೀ. ಸುರಂಗ ರಸ್ತೆ ಮಾರ್ಗಕ್ಕೆ ಬರೋಬ್ಬರಿ 1200 ಕೋಟಿ ವೆಚ್ಚ.

ಬೆಂಗಳೂರು : 3 ಕಿ.ಮೀ. ಸುರಂಗ ರಸ್ತೆ ಮಾರ್ಗಕ್ಕೆ ಬರೋಬ್ಬರಿ 1200 ಕೋಟಿ ವೆಚ್ಚ.

ಬೆಂಗಳೂರು : ರಾಜಧಾನಿಗೆ ಸುರಂಗ ಮಾರ್ಗ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧವಾಗಿದೆ. ಸುಮಾರು ಮೂರು ಕಿ.ಮೀ. ಉದ್ದದ ಸುರಂಗ ಮಾರ್ಗದ ರಸ್ತೆ ನಿರ್ಮಾಣಕ್ಕೆ 1200 ಕೋಟಿ ರೂ. ವೆಚ್ಚವಾಗಲಿದೆ.

ಆಲ್ಟಿನಾಕ್ ಎನ್ನುವ ಖಾಸಗಿ ಸಂಸ್ಥೆಯಿಂದ BBMP ವರದಿ ತರಿಸಿಕೊಂಡಿದೆ. ವರದಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ನಿಟ್ಟಿನಲ್ಲಿ ತಜ್ಞರು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ವರದಿಯಲ್ಲಿ ಸುರಂಗ ನಿರ್ಮಾಣದ ಬಗೆಗಿನ ಸಾಧ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಒಟ್ಟು ಮೂರು ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಿಸಲು ತಜ್ಞರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ 16 ಕಿ.ಮೀ. ಉದ್ದದ ಸುರಂಗ ಮಾರ್ಗ, ಹೆಬ್ಬಾಳದಿಂದ ಮೇಖ್ರಿ ವೃತ್ತದ ಅರಮನೆಯ ಮೈದಾನದವರೆಗೆ 3 ಕಿ.ಮೀ ಉದ್ದದ ಸುರಂಗ ಮಾರ್ಗ ಹಾಗೂ ಗೊರಗುಂಟೆಪಾಳ್ಯದಿಂದ ಯಶವಂತಪುರ ರೈಲ್ವೆ ನಿಲ್ದಾಣದವರೆಗೆ 4.5 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವುದು ಸಾಧ್ಯ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಬೆಂಗಳೂರು ನಗರದಿಂದ ಹೊರ ಹಾಗೂ ಒಳಕ್ಕೆ ಎರಡೂ ದಿಕ್ಕಿಗೂ ಸುರಂಗ ಮಾರ್ಗ ಅನಿವಾರ್ಯ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ ಸುರಂಗ ಮಾರ್ಗದಲ್ಲೇ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸಲು ಒಳಿತು ಎಂದು ವರದಿಯಲ್ಲಿದೆ.

ಒಟ್ಟು ಐದು ಪಥಗಳನ್ನು ನಿರ್ಮಿಸಲಾಗುತ್ತಿದ್ದು ಮೂರು ಪಥಗಳ ರಸ್ತೆ ನಗರದಿಂದ ಹೊರ ದಿಕ್ಕಿಗೆ ಹಾಗೂ ಎರಡು ಪಥಗಳ ರಸ್ತೆ ಒಳ ದಿಕ್ಕಿಗೂ ನಿರ್ಮಿಸುವಂತೆ ತಜ್ಞರು ಸಲಹೆ ಕೊಟ್ಟಿದ್ದಾರೆ. ಇದರ ಹೊರತಾಗಿ ಸಿಂಗಲ್ ಲೇನ್ ಮಾರ್ಗವೂ ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಆರಂಭಿಕವಾಗಿ ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ನ ಅರಮನೆ ಮೈದಾನದವರೆಗಿನ ೩ ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಲು ಪಾಲಿಕೆ ಮುಂದಾಗುವ ಸಾಧ್ಯತೆ ಇದೆ. ಇದಕ್ಕೆ ಒಟ್ಟು 1200 ಕೋಟಿ ವೆಚ್ಚ ತಗುಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಒಂದೊಮ್ಮೆ ಪಾಲಿಕೆ ಅಂದುಕೊಂಡಂತೆ ಸರ್ಕಾರ ಈ ಕಾರ್ಯಸಾಧ್ಯತಾ ವರದಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದೇ ಆದರೆ ಲೋಕಸಭೆ ಚುನಾವಣೆಯ ಬಳಿಕ ರಾಜ್ಯದ ಚೊಚ್ಚಲ ಸುರಂಗ ಮಾರ್ಗದ ಕನಸು ನನಸಾಗಲಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular