ಬೆಂಗಳೂರು ; ಸ್ಮಾರ್ಟ್ ಮೀಟರ್ಗಳಿಗೆ ದುಬಾರಿ ಬೆಲೆ ನಿಗದಿಪಡಿಸಿ ರುವ ಬೆಸ್ಕಾಂ ಮತ್ತು ಸರ್ಕಾರದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಇದೆಲ್ಲವೂ ಉಚಿತ ಗ್ಯಾರಂಟಿ ಯೋಜ ನೆಗಳಿಂದ ಸೃಷ್ಟಿಯಾಗಿರುವ ಸಮಸ್ಯೆಗಳೇ? ಉಚಿತವಾಗಿ ವಿದ್ಯುತ್ ಕೊಡಿ ಎಂದು (ನಿಮ್ಮ ನ್ನು) ಯಾರು ಕೇಳಿದ್ರು ? ಏಕಾ ಏಕಿ ದುಬಾರಿ ಬೆಲೆ ನಿಗದಿಪಡಿಸಿದರೆ, ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದರೆ ಬಡವರು ಎಲ್ಲಿಗೆ ಹೋಗಬೇಕು? ಎಂದು ತೀಕ್ಷ್ಮವಾಗಿ ಪ್ರಶ್ನಿಸಿದೆ. ಡಿಜಿಟಲ್ ಮೀಟರ್ ಹೆಸರಲ್ಲಿ ಬಡವರನ್ನು ಹಿಂಡುತ್ತಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ 10 ಸಾವಿರ ರೂ. ನಿಗದಿಪಡಿಸಿದ್ದ ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ ಎಂದಿದ್ದಾರೆ.
ಸ್ಮಾರ್ಟ್ ಮೀಟರ್ ಬೆಲೆ ೨ ಸಾವಿರ ರೂ ಇದ್ದುದ್ದನ್ನು 10 ಸಾವಿರಕ್ಕೆ ಏರಿಸಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಉಚಿತ ವಿದ್ಯುತ್ ಕೊಡಿ ಎಂದು ಯಾರಾದರೂ ಕೇಳಿದ್ದರಾ. ಬಡವರ ಸ್ಥಿತಿ ಏನಾಗಬೇಕು ಎಂದು ಉಚ್ಛ ನ್ಯಾಯಾಲಯ ಮಂಗಳಾರತಿ ಎತ್ತಿದೆ. ಇನ್ನಾದರೂ ಈ ಸರ್ಕಾರ ಜನಪೀಡಕ ನಿರ್ಧಾರಗಳನ್ನು ಕೈಬಿಟ್ಟು ಜನಪರ ಕಾರ್ಯಕ್ರಮಗಳಿಗೆ ಮುಂದಾಗಲಿ ಎAದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?
10 ಸಾವಿರ ರು. ಮೌಲ್ಯದ ಸ್ಮಾರ್ಟ್ಮೀಟರ್ ಅಳವಡಿಕೆಗೆ ಬೆಸ್ಕಾಂ ನೀಡಿದ್ದ ನೋಟಿಸ್ ಪ್ರಶ್ನಿಸಿದ್ದ ದೊಡ್ಡಬಳ್ಳಾಪುರ ಮಹಿಳೆ,ಈ ಅರ್ಜಿ ವಿಚಾರಣೆ ವೇಳೆ ಬೆಸ್ಕಾಂ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದು ತಿಳಿಸಿ ಈಗ ಶಾಶ್ವತ ಸಂಪರ್ಕಕ್ಕೂ ಒತ್ತಾಯಿಸುವುದು ಕಠಿಣ ಕ್ರಮ ಎಂದಿದೆ .ಈ ರೀತಿ ಕಡ್ಡಾಯ ಮಾಡಿದರೆ ಬಡವರು ಎಲ್ಲಿಗೆ ಹೋಗಬೇಕು? ಹೊರಗುತ್ತಿಗೆದಾರರಿಂದ ಮೀಟರ್ ಖರೀದಿ ಅಪಾಯಕಾರಿ 2 ಸಾವಿರ ರು. ಇದ್ದ ಮೀಟರ್ ಬೆಲೆಯನ್ನು 10 ಸಾವಿರ ರು.ಗೆ ಹೆಚ್ಚಿಸುವುದು ಗ್ರಾಹಕರಿಗೆ ಹೊರೆ ನ್ಯಾ| ನಾಗಪ್ರಸನ್ನ ರವರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯ ಮೂಲಕ 200 ಯೂನಿಟ್ವರೆಗೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಅವಾಸ್ಥವಿಕ ಗ್ಯಾರಂಟಿ ನೀಡಿ ಅದಕ್ಕೂ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಗ್ಯಾರಂಟಿ ಅನುಷ್ಠಾನದ ಬಳಿಕ ಇಂಧನ ಇಲಾಖೆ ದಿವಾಳಿ ಹಂಚಿಗೆ ಸಾಗಿದ ಬೆನ್ನಲ್ಲೆ ಗ್ರಾಹಕರ ಮೇಲೆ ಹೊರೆ ಹಾಕಿ ದಿನದಿಂದ ದಿನಕ್ಕೆ ವಿದ್ಯುತ್ ದರ ಏರಿಸುತ್ತಲೇ ಇದ್ದ ಈ ಸರ್ಕಾರ ಇದೀಗ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿ ಬರೋಬ್ಬರಿ 10 ಸಾವಿರ
ರೂ. ನಿಗದಿಪಡಿಸಿದ ನಿರ್ಧಾರಕ್ಕೆ ನ್ಯಾಯಾಲಯ ಛೀಮಾರಿ ಹಾಕಿ ತಡೆಯಾಜ್ಞೆ ನೀಡಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.


