Saturday, March 14, 2026
Flats for sale
Homeರಾಜ್ಯಬೆಂಗಳೂರು : 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ,ಮಗು ಗಂಭೀರ, ನಗರಗಳಲ್ಲಿ ರಾಟ್‌ವಿಲ್ ತಳಿ...

ಬೆಂಗಳೂರು : 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ,ಮಗು ಗಂಭೀರ, ನಗರಗಳಲ್ಲಿ ರಾಟ್‌ವಿಲ್ ತಳಿ ನಿಷೇಧ..!

ಬೆಂಗಳೂರು : ಎರಡು ವರ್ಷದ ಮಗುವಿನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿರುವ ಘಟನೆ ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ಡಿ23 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಸಾಕು ನಾಯಿ ಮಾಲೀಕರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವಿನ ಭುಜಕ್ಕೆ ಗಂಭೀರವಾಗಿ ಗಾಯಗಳಾಗಿವೆ ಎಂದು ಮಗುವಿನ ತಂದೆ ನಬ್ರಾಜ್ ದಮಾಲ್ ಆರೋಪಿಸಿದ್ದಾರೆ.

ಗಾಯಾಳು ಮಗುವಿನ ಪೋಷಕರು ನೇಪಾಳ ಮೂಲದವರಾಗಿದ್ದು, ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ವಾಸವಿದ್ದರು. ಅದೇ ಮನೆಯ ಪಕ್ಕದಲ್ಲೇ ವಾಸವಿರುವ ಪಿಟ್‌ಬುಲ್ ಹಾಗೂ ರಾಟ್‌ವಿಲ್ ತಳಿಯ
ನಾಯಿಗಳನ್ನು ಸಾಕಿದ್ದರು. ಸಂಜೆ ವೇಳೆ ಮಗು ಎತ್ತಿಕೊಂಡಿದ್ದ ತಾಯಿ ಮನೆ ಬಳಿ ನಿಂತಿದ್ದಾಗ ಏಕಾಏಕಿ ಪಿಟ್‌ಬುಲ್ ನಾಯಿ ದಾಳಿ ಮಾಡಿದೆ. ಮಗುವನ್ನು ನಾಯಿಯಿಂದ ರಕ್ಷಿಸಲು ತಾಯಿ ಯತ್ನಿಸಿದ್ದರಾದರೂ ಸಾಧ್ಯವಾಗಿಲ್ಲ. ಮಗುವಿನ ಭುಜಕ್ಕೆ ಕಚ್ಚಿ ನಾಯಿ ಗಾಯಗೊಳಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಟ್‌ವಿಲ್ ತಳಿ ನಿಷೇಧ..

ಸಾಕು ನಾಯಿಗಳ ಪೈಕಿ ರಾಟ್‌ವಿಲ್ ತಳಿ ನಿಷೇ ಧಿಸಲಾಗಿದೆ. ಆದರೂ ಬೆಂಗಳೂರಿನಲ್ಲಿ ಇಂತಹ ತಳಿಯ ನಾಯಿಯನ್ನು ಹೇಗೆ ಸಾಕಿದ್ದಾರೆಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತಿದ್ದಾರೆ. ರಾಟ್‌ವಿಲ್ ನಂತಹ ನಾಯಿಯನ್ನು ಕಾಡಿನಂಚಿನ ಭಾಗದಲ್ಲಿ ಇಲ್ಲವೇ ಹೊರವಲಯದಲ್ಲಿರುವವರು ತಮ್ಮ ರಕ್ಷಣೆಗಾಗಿ ಸಾಕುತ್ತಾರೆ. ಈ ತಳಿಯ ನಾಯಿ ಎಷ್ಟು ಅಪಾಯಕಾರಿ ಎಂದರೆ ಮಾಲೀಕನ ಮೇಲೆಯೇ ದಾಳಿ ಮಾಡಿ ಸಾಯಿಸುವಂತಹ ಪ್ರವೃತ್ತಿಯದು. ಇಂತಹ ನಾಯಿಯನ್ನು ಬೆಂಗಳೂರಿನಲ್ಲಿ ಸಾಕಿರುವುದು ಸರಿಯಲ್ಲ ಎಂದು ಸ್ಥಳೀಯರು ವಾದಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular