ಬೆಂಗಳೂರು : ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪೋಲಿಸರಿಗೆ ಗಂಡ ಶರಣಾದ ಘಟನೆ ಬೆಂಗಳೂರು ದೇವನಹಳ್ಳಿಯ ತಮ್ಮರಸನಹಳ್ಳಿ ಗ್ರಾಮದ ಕೆರೆ ಸಮೀಪ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಿವಾಸಿ
ನಿಜಾಮುದ್ದೀನ್ (38) ಕೊಲೆ ಮಾಡಿ ಪೋಲಿಸರಿಗೆ ಶರಣಾಗಿರುವ ವ್ಯಕ್ತಿ ರಾಬೀಯಾ (32) ಕೊಲೆಯಾದ ದುರ್ದೈವಿ ಹೆಂಡತಿ ಎಂದು ತಿಳಿದಿದೆ.
ಅನೈತಿಕ ಸಂಬಂಧದ ಅನುಮಾನದಿಂದ ಹೆಂಡತಿಯನ್ನು ಕೊಲೆಮಾಡಿದ್ದು ಇವರು ಮೂಲತಃ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ನಿವಾಸಿಗಳಾಗಿದ್ದಾರೆ.
ತಮ್ಮರಸನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದು ಸೂಲಿಬೆಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.