Thursday, March 12, 2026
Flats for sale
Homeರಾಜ್ಯಬೆಂಗಳೂರು : ಹಿಂದೂ ವಿರೋಧಿ ಭಾವನೆ ಹೊಂದಿದ್ದ ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ : ತಡೆ...

ಬೆಂಗಳೂರು : ಹಿಂದೂ ವಿರೋಧಿ ಭಾವನೆ ಹೊಂದಿದ್ದ ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ : ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ…!

ಬೆಂಗಳೂರು : ಸರಕಾರ ಯಾವುದೇ ಇರಲಿ ಹಿಂದೂಗಳ ಭಾವನೆಗೆ ದಕ್ಕೆ ತರುವಂತಹ ಕೆಲಸ ಮಾಡಬಾರದು ಆದರೆ ರಾಜ್ಯದಲ್ಲಿರುವ ಸಿಎಂ ಸಿದ್ದರಾಮಯ್ಯ ಸರಕಾರ ಹಿಂದೂಗಳ ಭಾವನೆಗೆ ದಕ್ಕೆ ತಂದು ಹಿಂದೂಗಳ ಧಾರ್ಮಿಕ ವಿಚಾರದಲ್ಲೂ ಬುದ್ದಿ ಜೀವಿಗಳನ್ನು ಮೂಗು ತುರಿಸುವಂತೆ ಮಾಡಿರುವುದರ ಬಗ್ಗೆ ಮೈಸೂರು ನಿವಾಸಿ ಮಲ್ಲೇಶ್ ರವರು ಕೂಡ ಆಕ್ರೋಶ ಹೊರಹಾಕಿದ್ದಾರೆ .ಕಳೆದ 60 ವರ್ಷಗಳಿಂದ ಮೈಸೂರಲ್ಲಿ ನೆಲೆಸಿದ್ದು ಹಿಂದೂಗಳ ಭಾವನೆಗೆ ದಕ್ಕೆ ತರುವ ವ್ಯಕ್ತಿಗಳಿಂದ ಉದ್ಘಾಟಿಸಿಲ್ಲ ಎಂದು ತಿಳಿಸಿದ್ದಾರೆ.

ಇದೀಗ ನಾದ ಹಬ್ಬ ದಸರಾಕ್ಕೆ ಅದರದೇ ಆದ ಇತಿಹಾಸ ಇದೆ ಆಗಂತ ಸಿಕ್ಕ ಸಿಕ್ಕವರಲ್ಲಿ ಉದ್ಘಾಟಿಸುವುದರಿಂದ ಗತ ಗತಾನು ಕಾಲದಿಂದ ಬಂದ ವೈಭವಕ್ಕೂ ಮೈಸೂರು ರಾಜರು ನಾಡಿಗೆ ನೀಡಿದ ಕೊಡುಗೆಗಳಿಗೂ ಕೊಡಲಿಯೇಟು ಬಿದ್ದಂತಾಗಿದೆ ಅದರಂತೆಯೇ ಸಾಹಿತಿ ಬಾನು ಮುಷ್ತಾಕ್​ರಿಂದ ದಸರಾ ಉದ್ಘಾಟನೆ ಮಾಡದಂತೆ ತಡೆ ಕೋರಿ ಮಾಜಿ ಸಂಸದ ಪ್ರತಾಪ್ ಸಿಂಹ ರವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಈ ಕಾರ್ಯಕ್ಕೆ ಮೈಸೂರಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ದಸರಾ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಉದ್ಘಾಟಕರ ಕುರಿತ ವಿರೋಧ ಮುಂದುವರೆದಿದೆ. ಈ ಮಧ್ಯೆ ಬಾನು ಮುಷ್ತಾಕ್​ಗೆ ಆಹ್ವಾನ ಹಿನ್ನೆಲೆ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಆದರೆ ಹಠಮಾರಿ ರಾಜ್ಯಸರ್ಕಾರ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್‌ ಬಗ್ಗೆ ವಿರೋಧ ಕೇಳಿಬಂದಿದರೂ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇತ್ತೀಚೆಗೆ ಹಾಸನದ ಅಮೀರ್ ಮೊಹಲ್ಲಾದಲ್ಲಿನ ಅವರ ನಿವಾಸಕ್ಕೆ ತೆರಳಿ, ಸರ್ಕಾರದ ಪರ ಜಿಲ್ಲಾಡಳಿತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಿದ್ದರು.ಸದ್ಯ ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಈ ಬಗ್ಗೆ ಹೈಕೋರ್ಟ್ ತಡೆ ಕೋರಿ ವಿವರಿಸಿದ್ದು ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆಯ ಸಂಪ್ರದಾಯವಿದೆ. ‘ಬಾನು ಮುಷ್ತಾಕ್ ಹಿಂದೂ ವಿರೋಧಿ,‌ ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ’. ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ಅವರನ್ನು ಆಯ್ಕೆ ಮಾಡಿದೆ ಎಂದಿದ್ದಾರೆ.ಇದರಿಂದಾಗಿ ಇಂತಹ ಅಯೋಗ್ಯ ವ್ಯಕ್ತಿಗಳಿಂದ ನಾದ ಹಬ್ಬ ದಸರಾ ಉದ್ಘಾಟನೆ ಮಾಡಬಾರದೆಂದು ಕೋರ್ಟ್ ಮೊರೆ ಹೋಗಿದ್ದಾರೆ.ಈ ನಿರ್ಧಾರದಿಂದ ಹಿಂದೂ ಸಂಘಟನೆಗಳು ಹಾಗೂ ಜನಸಾಮನ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular