ಬೆಂಗಳೂರು : ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪಾರದರ್ಶಕವಾದ ತನಿಖೆ ಮಾಡಬೇಕು ಹಾಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಯು ಶ್ರೀನಿವಾಸ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಚಿವ ಕೃಷ್ಣ ಬೈರೇಗೌಡರ ತಾತ, ಮುತ್ತಾಂದಿರ ಕಾಲದಿAದಲೂ ಜಮೀನುದಾರರು. ಆದರೆ ಅವರು ಕೋಲಾರ ತಾಲೂಕಿನ ಗುರುಡನಪಾಳ್ಯದಲ್ಲಿ 20 ಎಕರೆ 16 ಗುಂಟೆ ಜಮೀನನ್ನು ಕೃಷ್ಣಬೈರೇಗೌಡರು ತಮ್ಮ ಹೆಸರಿಗೆ ವಿಭಾಗ ಮಾಡಿಸಿಕೊಂಡಿದ್ದಾರೆ. ಆದರೆ, ಉಳಿದ 5 ಮಂದಿಯನ್ನು ಜAಟಿಯಾಗಿದ್ದಾರೆ. ಈ ಜಮೀನು ಮೂಲತಃ ಸರಕಾರಿ ಖರಾಬ್ ಜಮೀನು, ಅವರ ಸಂಬAಧಿಕರು ಅನುಭವದಲ್ಲಿದ್ದದ್ದನ್ನೆ ಬಳಕೆ ಮಾಡಿಕೊಂಡು, 11 ಇ ನಕ್ಷೆ ಮಾಡದೇ ಪಹಣಿ ಮಾಡಿಸಿ ಕೊಂಡಿದ್ದಾರೆ ದಾಖಲೆಗಳೊಂದಿಗೆ ಆರೋಪಿಸಿದರು.
ಈ ಭೂಮಿಯನ್ನು ಯಾವುದೇ ಪ್ರಾಧಿಕಾರವು ಮಂಜೂರು ಮಾಡಿ ಕೊಟ್ಟಿಲ್ಲ. ಇವರ ಕುಟುಂಬದವರು ಜಮೀನು ದಾರರಾಗಿರುವುದರಿಂದ 50, 53, 57 ನಮೂನೆಯಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವುದಕ್ಕೂ ಅರ್ಹರಲ್ಲ. ಆದ್ದರಿಂದ ಇವರಿಗೆ ಭೂಮಿ ಮಂಜೂರಾಗಿಲ್ಲ. ಕೃಷ್ಣಬೈರೇಗೌಡರು ಇದನ್ನು ಪಿತ್ರಾರ್ಜಿತ ಆಸ್ತಿ ಎಂದು ಹೇಳುತ್ತಿದ್ದಾರೆ. ರಾಜ್ಯ ಸರಕಾರ ಈ ಭೂಮಿಯನ್ನು ವಾಪಸ್ ಪಡೆದು, ಹೇಗೆ ಮಂಜೂರಾಗಿದೆ, ಯಾರಿಗೆ ಮಂಜೂರಾಗಿದೆ ಎನ್ನುವ ಕುರಿತು ದಾಖಲೆಗಳನ್ನು ಬಹಿರಂಗಪಡಿಸಬೇಕು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಬೇಕೆಂದು ಒತ್ತಾಯಿಸಿದರು.


