ಮಂಗಳೂರು : ತಣ್ಣೀರುಬಾವಿ ಕಡಲ ತೀರದಲ್ಲಿ ನಡೆಯುತ್ತಿರುವ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮತ್ತು ತಪಸ್ಯಾ ಫೌಂಡೇಶನ್ ಆಯೋಜನೆಯ ಮೂರು ದಿನಗಳ ಬೀಚ್ ಫೆಸ್ಟಿವಲ್-ಟ್ರಯಾಥ್ಲನ್ ನಲ್ಲಿ ಶನಿವಾರ ಸಂಜೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ವೈದ್ಯಕೀಯ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆಯನ್ನು ಮಾಡಿರುವ ಟಾಟಾ ಮೆಮೋರಿಯಲ್ ಆಸ್ಪತ್ರೆ ಉಪನಿರ್ದೇಶಕ ಡಾ.ಶೈಲೇಶ್ ವಿ.ಶ್ರೀಖಂಡೆ ಹಾಗೂ ಸಂಜೀವಿನಿ ಆಸ್ಪತ್ರೆ ಕಟೀಲಿನ ವಿ.ಸುರೇಶ್ ರಾವ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಡಾ.ಶೈಲೇಶ್ ವಿ.ಶ್ರೀಖಂಡೆ ಅವರು, “ಬಳಿಕ ಮಾತಾಡಿದ ಅವರು, “ಇಂತಹ ಸಮ್ಮಾನಗಳು ಮಾಡುವ ನಾವು ಸೇವೆಯನ್ನು ಇನ್ನಷ್ಟು ಹುರುಪಿನಿಂದ ಸಮಾಜಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸುತ್ತದೆ. ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ನಾನು ವೈದ್ಯನಾಗಿರುವುದು ಹೆಮ್ಮೆ ಮತ್ತು ಖುಷಿಯನ್ನು ಉಂಟುಮಾಡಿದೆ. ನಾನು ಇನ್ನಷ್ಟು ಹೆಚ್ಚಿನ ಸೇವೆಯನ್ನು ಸಲ್ಲಿಸುವ ವಾಗ್ದಾನವನ್ನು ಮಾಡುತ್ತೇನೆ. ಮಂಗಳೂರಿನಂತಹ ಸುಂದರವಾದ ಊರಿನಲ್ಲಿ ಇರುವುದು ನನಗೆ ಖುಷಿ ಉಂಟುಮಾಡಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಯೋಜನೆಗೊಳ್ಳಲಿ“ ಎಂದು ಶುಭ ಹಾರೈಸಿದರು.
ಬಳಿಕ ಮಾತಾಡಿದ ಸುರೇಶ್ ವಿ ರಾವ್ ಅವರು, “ಇವತ್ತು ಬಹಳಷ್ಟು ಸಂತೋಷವಾಗುತ್ತಿದೆ. ಹುಟ್ಟೂರಿನಲ್ಲಿ ಸಿಗುವ ಇಂತಹ ಸನ್ಮಾನಗಳು ರಾಜ್ಯೋತ್ಸವ ಪ್ರಶಸ್ತಿಗಿಂತಲೂ ಹಿರಿದು. ನನ್ನ ಊರು ಕಟೀಲಿನಲ್ಲಿ ವೈದ್ಯಕೀಯ ಸೇವೆ ಸಿಗುವ ಸುಸಜ್ಜಿತ ಆಸ್ಪತ್ರೆ ಇರಲಿಲ್ಲ. ಹೀಗಾಗಿ ನನ್ನಿಂದ ಏನಾದರೂ ಕಿಂಚಿತ್ತು ಸೇವೆ ಸಲ್ಲಿಸಬೇಕೆಂಬ ಮಹದಾಸೆಯಿಂದ ಸಂಜೀವಿನಿ ಆಸ್ಪತ್ರೆ ಸ್ಥಾಪಿಸಿದೆ. ಅದು ಊರಿನ ಜನರು ಮಾತ್ರವಲ್ಲದೆ ಹೊರಗಿನ ಜನರಿಗೂ ಆಶಾಕಿರಣವಾಗಿ ಬೆಳೆದಿದೆ. ಗಣ್ಯರ ಸಮ್ಮುಖದಲ್ಲಿ ಮಾಡಿರುವ ಈ ಸನ್ಮಾನ ಸದಾಕಾಲ ನೆನಪಲ್ಲಿ ಉಳಿಯುವಂತದ್ದು“ ಎಂದರು.
ವೇದಿಕೆಯಲ್ಲಿ ಬಿ.ಎಂ.ಭಾರತಿ, ಪಿ.ಎನ್. ಶೆಟ್ಟಿ, ಪ್ರೇಮನಾಥ್ ಶೆಟ್ಟಿ, ವಿವೇಕ್ ಶೆಟ್ಟಿ, ಡಾ.ಹರ್ಷ ಪ್ರಸಾದ್, ಪ್ರವೀಣ್ ಚಂದ್ರ ಶೆಟ್ಟಿ, ತಪಸ್ಯಾ ಫೌಂಡೇಶನ್ ಸಂಸ್ಥಾಪಕಿ ಸಬಿತಾ ಆರ್. ಶೆಟ್ಟಿ, ಟ್ರಷ್ಟಿ ನವೀನ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಎನ್.ಬಿ.ಶೆಟ್ಟಿ ಪ್ರಾಸ್ತಾವಿಕ ಮಾತಾಡಿ ಅತಿಥಿಗಳನ್ನು ಸ್ವಾಗತಿಸಿದರು. ವಿಜಯ ವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.