Friday, March 6, 2026
Flats for sale
Homeರಾಜ್ಯಬೆಂಗಳೂರು : ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ವರ್ಷಕ್ಕೆ 3650 ಕೋಟಿ ನಷ್ಟ,ಬಸ್ ದರ ಏರಿಕೆಗೆ...

ಬೆಂಗಳೂರು : ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಕ್ಕೆ ವರ್ಷಕ್ಕೆ 3650 ಕೋಟಿ ನಷ್ಟ,ಬಸ್ ದರ ಏರಿಕೆಗೆ ಸರಕಾರ ತಯಾರಿ…!

ಬೆಂಗಳೂರು : ಸಾರಿಗೆ ನಿಗಮಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ನಡುವೆಯೇ ಮತ್ತೆ ಪ್ರಯಾಣ ದರ ಏರಿಕೆ ವಿಷಯ ಮುನ್ನೆಲೆಗೆ ಬಂದಿದ್ದು, ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿ ಶೇ. ೧೫ರಷ್ಟು ದರ ಏರಿಕೆಗೆ ಶಿಫಾರಸು ಮಾಡಿದೆ. 2019 ರಿಂದ ಪ್ರಯಾಣ ದರ ಏರಿಕೆ ಮಾಡದೇ ಇರುವುದರಿಂದ ಸಾರಿಗೆ ನಿಗಮಗಳು ಆದಾಯ ನಷ್ಟ ಅನುಭವಿಸುವಂತಾಗಿದೆ. ಎಲ್ಲ ಸಾರಿಗೆ ನಿಗಮಗಳಿಗೆ ವಾರ್ಷಿಕ 3650 ಕೋಟಿ ರೂ. ಹೊರೆಯಾಗುತ್ತಿದೆ ತಿಳಿದುಬಂದಿದೆ.

ಸರ್ಕಾರದ ಶಕ್ತಿ ಯೋಜನೆಗೂ ಸರ್ಕಾರ ಕಾಲಕಾಲಕ್ಕೆ ಹಣ ಬಿಡುಗಡೆ ಮಾಡದೇ ಇರುವುದು ಕೂಡಾ ನಷ್ಟಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ನಷ್ಟ ಭರಿಸುವ ನಿಟ್ಟಿನಲ್ಲಿ ಪ್ರಯಾಣ ದರವನ್ನು ಶೇ. 20 ರಷ್ಟು ಹೆಚ್ಚಳ ಮಾಡುವಂತೆ ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿವೆ.

ದರ ಏರಿಕೆ ಮಾಡುವ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಕೂಡಾ ಶೇ. 15 ರಷ್ಟು ಪ್ರಯಾಣ ದರ ಏರಿಕೆ ಮಾಡುವಂತೆ ಶಿಫಾರಸು ಮಾಡಿದೆ ಎಂದು ಗೊತ್ತಾಗಿದೆ. ಸಾರಿಗೆ ನಿಗಮಗಳನ್ನು ಲಾಭದತ್ತ ಕೊಂಡೊ ಯ್ಯಲು ಇಂಧನ ಚಾಲಿತ ಬಸ್‌ಗಳ ಬದಲು ಎಲೆಕ್ಟಿçಕ್ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡುವ ಕಡೆಯೂ ಗಮನ ನೀಡಬೇಕಾಗಿದೆ. ಇದರಿಂದಲೂ ಕೂಡಾ ನಷ್ಟದ ಪ್ರಮಾಣ ಕಡಿಮೆಯಾಗಲಿದೆ. ಹಾಗೆಯೇ ಸಾರಿಗೆ ನಿಗಮ ಆರಂಭಿಸಿರುವ ಕಾರ್ಗೋ ಸೇವೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದೆ. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಬಸ್‌ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡುವುದಲ್ಲದೆ, ಮೂಲಭೂತ ಸೌಲಭ್ಯ ಗಳನ್ನು ಹೆಚ್ಚಳ ಮಾಡಬೇಕಾಗುತ್ತದೆ ಎಂದು ತಿಳಿದುಬಂದಿದೆ.

ದರ ಏರಿಕೆಗೆ ಮುಖ್ಯ ಕಾರಣವೇನೆಂದರೆ ನಿವೃತ್ತ ನೌಕರರ 625 ಕೋಟಿ ಬಾಕಿ ,851 ಕೋಟಿ ಇಂಧನ ಬಾಕಿ , 625 ಕೋಟಿ ಸಿಬ್ಬಂದಿಗೆ ಬಾಕಿ 883 ಕೋಟಿ ಬಿಡಿಭಾಗಗಳಿಗೆ ಬಾಕಿ ಒಟ್ಟಿನಲ್ಲಿ ಸರಕಾರ ಸಾಲ ಮಾಡಿರುವುದು 700 ಕೋಟಿ ರೂ. ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular