Friday, March 13, 2026
Flats for sale
Homeಜಿಲ್ಲೆಬೆಂಗಳೂರು : ವಿಜಯೇಂದ್ರ - ಅರುಣ್‌ ಕುಮಾರ್‌ ಪುತ್ತಿಲ ನಡುವಿನ ಮಾತುಕತೆ ಬಹುತೇಕ ಯಶಸ್ವಿ,ಬಿಜೆಪಿ ಸೇರ್ಪಡೆಗೆ...

ಬೆಂಗಳೂರು : ವಿಜಯೇಂದ್ರ – ಅರುಣ್‌ ಕುಮಾರ್‌ ಪುತ್ತಿಲ ನಡುವಿನ ಮಾತುಕತೆ ಬಹುತೇಕ ಯಶಸ್ವಿ,ಬಿಜೆಪಿ ಸೇರ್ಪಡೆಗೆ ಗ್ರೀನ್ ಸಿಗ್ನಲ್.

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅರುಣ್‌ ಕುಮಾರ್‌ ಪುತ್ತಿಲ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಕ್ತ ಸ್ವಾಗತ ಎಂದು ಗುರುವಾರ ವಿಜಯೇಂದ್ರ ಮೈಸೂರಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಕರಾವಳಿಯ ಪ್ರಭಾವಿ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ರಾಜ್ಯ ಬಿಜೆಪಿಯಿಂದಲೇ ಗ್ರೀನ್‌ ಸಿಗ್ನಲ್‌ ಲಭಿಸಿದೆ. ಎಲ್ಲವೂ ನಿರೀಕ್ಷೆಯಂತೆ ಸಾಗಿದರೆ, ಒಂದು ವಾರದೊಳಗೆ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿಯ ಅಧಿಕೃತ ಸದಸ್ಯತ್ವ ಹೊಂದಲಿದ್ದಾರೆ. ಮೂಲಗಳ ಪ್ರಕಾರ ಅರುಣ್‌ ಕುಮಾರ್‌ ಪುತ್ತಿಲ ಅವರು ಈ ವಾರಾಂತ್ಯದಲ್ಲೇ ಬೆಂಗಳೂರಿನಲ್ಲಿ ರಾಜ್ಯ ನಾಯಕರ ಸಮ್ಮುಖ ಬಿಜೆಪಿ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.

ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಪುತ್ತಿಲ ಪರಿವಾರ ಮೂರು ದಿನಗಳ ಗಡುವು ನೀಡಿತ್ತು. ಆದರೆ ಗುಡುವಿಗೆ ಬಿಜೆಪಿ ನಾಯಕರು ಸೊಪ್ಪು ಹಾಕಿರಲಿಲ್ಲ. ಇದೀಗ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿ ರಾಜ್ಯ ನಾಯಕರ ಜತೆ ಮಾತುಕತೆ ನಡೆಸಿದ್ದು, ರಾಜ್ಯಾಧ್ಯಕ್ಷರ ಮೊದಲ ಭೇಟಿ ಫಲಪ್ರದವಾಗುವ ಸೂಚನೆ ಲಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯಲ್ಲಿ ಸ್ಥಾನ ಕಡಿಮೆ ಇದ್ದು ಆಕಾಂಕ್ಷಿಗಳು ಜಾಸ್ತಿಯಾಗಿದ್ದರೆ,ನಳೀನ್ ಕುಮಾರ್ ರಾಜ್ಯಾಧ್ಯಕ್ಷ ಆದ ಸಂದರ್ಭದಲ್ಲಿ ಲಿಸ್ಟ್ ಅಲ್ಲಿ ಇಲ್ಲದವರನ್ನು ತಂದು ಬಿಜೆಪಿ ಯಲ್ಲಿ ಉನ್ನತ ಸ್ಥಾನ ಕೊಟ್ಟದ್ದು ಅಂತೂ ನಿಜವಾದ ಮಾತು,ಆ ಸಂದರ್ಭದಲ್ಲಿ ಮೂಲ ಬಿಜೆಪಿಗರನ್ನು ಮೂಲೆ ಗುಂಪು ಮಾಡಿದ ಪಾತ್ರ ದೊಡ್ಡಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಸಂಘಪರಿವಾರ ಕೂಡ ಪುತ್ತಿಲ ಬಿಜೆಪಿ ಪ್ರವೇಶಕ್ಕೆ ಅಸಮ್ಮತಿ ಸೂಚಿಸಿದ್ದು,ಅರುಣ್‌ ಕುಮಾರ್‌ ಪುತ್ತಿಲಗೆ ದ.ಕ.ಜಿಲ್ಲಾ ಮಟ್ಟದ ಸ್ಥಾನಮಾನ ನೀಡುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಕ್ಷ ಮೂಲಗಳ ಪ್ರಕಾರ ಪುತ್ತಿಲಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡುವ ಸಂಭವವಿದ್ದು ಒಟ್ಟು ಎಂಟರಲ್ಲಿ ಏಳು ಮಂದಿ ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಇನ್ನು ಒಂದು ಸ್ಥಾನ ಬಾಕಿ ಇದೆ, ಆ ಸ್ಥಾನಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ನೇಮಿಸಿ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಪುತ್ತೂರು ಮಂಡಲದಲ್ಲಿ ಬಿಜೆಪಿ ಅತ್ಯಧಿಕ ಮತ ಗಳಿಸಿಕೊಡುವ ಟಾಸ್ಕ್‌ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular