Friday, March 13, 2026
Flats for sale
Homeಸಿನಿಮಾಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವಿತ್ರಾ ಗೌಡ ಜಾಮೀನು...

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ, ಮುಂದಿರುವ ಆಯ್ಕೆಗಳು ಏನು?

ಬೆಂಗಳೂರು : ಜಾಮೀನಿಗಾಗಿ ಜೈಲಿನಲ್ಲಿ ಪರದಾಡುತ್ತಿರುವ ನಟ ದರ್ಶನ್ ತೂಗುದೀಪ್‌ಗೆ ಭಾರಿ ದೊಡ್ಡ ಆಘಾತ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದು, ಜಾಮೀನು ಪಡೆದುಕೊಂಡು ಹೊರಗೆ ಬರಲು ಕಾಯುತ್ತಿದ್ದರು. ಅವರಿಗೆ ಜಾಮೀನು ಸಿಗಲಿದೆ ಅಂತಾ, ಕೋಟ್ಯಂತರ ದರ್ಶನ್ ತೂಗುದೀಪ್ ಅಭಿಮಾನಿಗಳು ಕೂಡ ಕಾಯುತ್ತಿದ್ದರು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಜಾ ಆಗಿದ್ದು, ಈ ಸುದ್ದಿ ತಿಳಿದ ತಕ್ಷಣ ಬಳ್ಳಾರಿ ಜೈಲಿನಲ್ಲೇ ಕುಸಿದು ಬಿದ್ದಿದ್ದಾರೆ.

ಬರೋಬ್ಬರಿ 120 ದಿನಗಳು.. ದರ್ಶನ್ ಜೈಲು ಸೇರಿ 120ಕ್ಕೂ ಹೆಚ್ಚು ದಿನಗಳೇ ಉರುಳಿವೆ. ಆಚೆ ಬಂದ್ಬಿಡಿ ಬಾಸ್​ ಅಂತಾ ದರ್ಶನ್ ಫ್ಯಾನ್ಸ್​ ಕಾಯ್ತಾನೆ ಇದ್ರು. ಬೆಳಗ್ಗೆಯಿಂದಲೇ ಬಳ್ಳಾರಿ ಜೈಲಿನ ಮುಂಭಾಗವೇ ಬೀಡು ಬಿಟ್ಟಿದ್ರು. ದರ್ಶನ್​​ ಸಹ ಭಾನುವಾರದಿಂದಲೇ ಬೆನ್ನು ನೋವಿನ ಮಧ್ಯೆಯೂ ಟೆನ್ಶನ್​​ನಲ್ಲೇ ಇದ್ರು. ಬೇಲ್ ಸಿಗುತ್ತೋ? ಇಲ್ಲವೋ? ಅನ್ನೋ ಒತ್ತಡದಲ್ಲೇ ಒದ್ದಾಡುತ್ತಿದ್ದರು. ಇತ್ತ ಬೆಂಗಳೂರಿನ 57ನೇ ಸಿಸಿಹೆಚ್​​ ನ್ಯಾಯಾಲಯ ಕೊನೆಗೂ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿಯ ಜಾಮೀನು ಅರ್ಜಿ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ.

ಸೋಮವಾರ.. ಸಂಜೆ ಸುಮಾರು 5.45ರ ಹೊತ್ತಿನ ತನಕ 57ನೇ ಸಿಸಿಹೆಚ್​​ ಕೋರ್ಟ್​​ ಕರ್ನಾಟಕವನ್ನೇ ಕುರ್ಚಿಯ ಕೊನೆಯ ತುದಿಯ ಮೇಲೆ ಕೂರುವಂತೆ ಮಾಡಿತ್ತು. ಕಾರಣ, ರೇಣುಕಾಸ್ವಾಮಿ ಕೊ*ಲೆ ಕೇಸ್​​ನ ಆರು ಮಂದಿ ಬೇಲ್ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಸೋಮವಾರ ತೀರ್ಪು ನೀಡುವುದಿತ್ತು. ಹಾಗಾಗಿಯೇ ನ್ಯಾಯಾಧೀಶರಾದ ಜೈ ಶಂಕರ್​​ ತೀರ್ಪು ಓದುವ ತನಕ ಎಲ್ಲರ ಚಿತ್ತ ಕೋರ್ಟ್​​ನತ್ತಲೇ ಇತ್ತು. ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್​, ಎ11 ನಾಗರಾಜ್, ಎ12 ಲಕ್ಷ್ಮಣ್ ಹಾಗೂ ಎ13 ದೀಪಕ್ ಬೇಲ್ ಪೈಕಿ ಇಬ್ಬರಿಗಷ್ಟೇ ಕೋರ್ಟ್​​ ಜಾಮೀನು ಮಂಜೂರು ಮಾಡಿದೆ. ಎ8 ರವಿ ಶಂಕರ್​ ಹಾಗೂ ಎ13 ದೀಪಕ್​​​ಗೆ ಕೋರ್ಟ್​ ಜಾಮೀನು ನೀಡಿದೆ. ಇನ್ನುಳಿದಂತೆ, ಪವಿತ್ರಾ ಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್ ಈ ನಾಲ್ವರಿಗೂ ಬೇಲ್ ನಿರಾಕರಿಸಿದೆ.

ಸದ್ಯ ದರ್ಶನ್​ ಮುಂದೆ ಒಂದಷ್ಟು ಆಯ್ಕೆಗಳು ಇವೆ. ಅವುಗಳಲ್ಲಿ ಮೂರು ಆಯ್ಕೆಗಳು ಪ್ರಮುಖವಾಗಿದೆ. ಜಾಮೀನು ಕೋರಿ ಹೈಕೋರ್ಟ್​ಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಇದು ಒಂದು ಆಯ್ಕೆ. ಇನ್ನೊಂದು ಆಯ್ಕೆ ಏನೆಂದರೆ, ಅನಾರೋಗ್ಯದ ಕಾರಣವನ್ನು ನೀಡಿ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿಯೇ ಮತ್ತೊಮ್ಮೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು.

ಹೈಕೋರ್ಟ್​ಗೆ ಸಲ್ಲಿಸಲಿರುವ ಜಾಮೀನು ಅರ್ಜಿಯಲ್ಲಿಯೂ ದರ್ಶನ್​ ಅವರು ಅನಾರೋಗ್ಯದ ವಿಷಯವನ್ನು ಹೆಚ್ಚುವರಿ ಕಾರಣವಾಗಿ ಉಲ್ಲೇಖಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಈಗಾಗಲೇ ವೈದ್ಯಕೀಯ ದಾಖಲೆಗಳಿಗಾಗಿ ಜೈಲು ಅಧಿಕಾರಿಗಳಿಗೆ ವಕೀಲರಿಂದ ಇಮೇಲ್ ಮಾಡಲಾಗಿದೆ. ಮೂರನೇ ಆಯ್ಕೆ ಏನೆಂದರೆ, ಅನಾರೋಗ್ಯಕ್ಕೆ ಚಿಕಿತ್ಸೆಗಾಗಿ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಬಹುದು. ಸ್ವಂತ ವೆಚ್ಚದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ದರ್ಶನ್​ ಮನವಿ ಮಾಡಬಹುದು.

ಸದ್ಯಕ್ಕೆ ದರ್ಶನ್​ ಅವರ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಜಾಮೀನು ಸಿಗತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಅವರು ಕಾಲ ಕಳೆಯುತ್ತಿದ್ದರು. ಇಂದು ಕೋರ್ಟ್​ ಆದೇಶ ನೋಡಿ ಅವರಿಗೆ ನಿರಾಸೆ ಆಗಿದೆ. ಅವರು ಜೈಲಿನಿಂದ ಹೊರಗೆ ಬರಬಹುದು ಎಂಬ ನಿರೀಕ್ಷೆಯಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಇತ್ತ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ ಅವರು ಕೂಡ ಕಣ್ಣೀರು ಹಾಕುತ್ತಾ ಮೌನಕ್ಕೆ ಶರಣಾಗಿದ್ದಾರೆ. ಅವರ ಜಾಮೀನು ಅರ್ಜಿ ಕೂಡ ವಜಾ ಆಗಿದೆ. ಪ್ರಕರಣದಲ್ಲಿ ಅವರು ಎ1 ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular