ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ವರದಿಗಳು ಹೆಚ್ಚುತ್ತಿವೆ. ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು ಎಂದು ಘೋಷಿಸಲಾಗಿದೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತಿವರ್ಷ ಅಂದಾಜು 2610 ಮಹಿಳೆಯರಿಗೆ ಸ್ತನಕ್ಯಾನ್ಸರ್ ಆಗುತ್ತಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಡಿಸೀಜ್ ಇನ್ಫರ್ಮೇಷನ್ ಆಂಡ್ ರಿಸರ್ಚ್ ಸಂಸ್ಥೆಯು ವರದಿ ಮಾಡಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 15,359ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ 2,278 ಮಹಿಳೆಯರು ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಪ್ರಸ್ತುತ 4೦,5೦೦ ಮಹಿಳೆಯರು ರೋಗದೊಂದಿಗೆ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಪ್ರತಿ ವರ್ಷ 2,610 ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾದರೆ, ಈ ಪೈಕಿ 400 ಜನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಪ್ರಸ್ತುತ 2040 ಮಹಿಳೆಯರು ರೋಗದಿಂದ ಬದುಕುತ್ತಿದ್ದಾರೆ. ಕಾಯಿಲೆ ಪ್ರಮಾಣ ಕಳೆದ ನಾಲ್ಕು ದಶಕಗಳಲ್ಲಿ ಮೂರರಷ್ಟು ಹೆಚ್ಚಾಗಿದೆ. 1982ರಲ್ಲಿ ಪ್ರತಿ 1 ಲಕ್ಷ ಮಹಿಳೆಯರಲ್ಲಿ 15 ಪ್ರಕರಣಗಳು ಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಇದರ ಪ್ರಮಾಣ 48ಕ್ಕೆ ಏರಿದೆ. ಇದು ವರ್ಷಕ್ಕೆ ಸರಾಸರಿ 3.4ರಷ್ಟು ಏರಿಕೆಯನ್ನು ಸೂಚಿಸುತ್ತದೆ. ರಾಜ್ಯ ಸರ್ಕಾರದ ಕಿದ್ವಾಯಿ ಮೆಮೋರಿಯಲ್ ಆಂಕಾಲಜಿ ಇನ್ಸ್ಟಿಟ್ಯೂಟ್ನಲ್ಲಿ ಕಳೆದ ವರ್ಷ 1,544 ಸ್ತನ ಕ್ಯಾನ್ಸರ್ ಪ್ರಕರಣಗಳನ್ನು ದಾಖಲಾಗಿವೆ.
ಇದು ಆ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದ ಮಹಿಳೆಯರ ಕ್ಯಾನ್ಸರ್ಗಳಲ್ಲಿ ಶೇ.೨೨.೫ಕ್ಕೆ ಸಮಾನವಾಗಿದೆ. ಜಾಗೃತಿ ಹೆಚ್ಚಾದರೂ, ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿ ಮೂರರಿಂದ ನಾಲ್ಕನೇ ಹಂತದ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ. ವೈದ್ಯರೊಬ್ಬರು ಹೇಳುವ ಪ್ರಕಾರ ರೋಗವನ್ನು ಮುಂಚಿತವಾಗಿ ಪತ್ತೆ ಮಾಡಿದರೆ ರೋಗಕ್ಕೆ ಶೇ.೯೦ರಷ್ಟು ಸಂಪೂರ್ಣವಾಗಿ ಚಿಕಿತ್ಸೆ ಪಡೆಯಬಹುದು. ಆದರೆ, ರಾಷ್ಟçಮಟ್ಟದ ಸಂಘಟಿತ ಸ್ಕಿçÃನಿಂಗ್ ಕಾರ್ಯಕ್ರಮದ ಕೊರತೆ ಒಂದು ಪ್ರಮುಖ ಅಡೆತಡೆ ಆಗಿದೆ. ಸದ್ಯದ ಸ್ಕಿçÃನಿಂಗ್ಗಳು ಪ್ರಾಥಮಿಕವಾಗಿ ಅವಕಾಶ ಆಧಾರಿತವಾಗಿವೆ ಮತ್ತು ಜಾಗೃತಿ ಹಾಗೂ ಆರೋಗ್ಯ ಸೇವೆಗಳ ಪ್ರವೇಶದ ಮೇಲೆ ಅವಲಂಬಿತವಾಗಿವೆ.
ಸ್ತನ ಕ್ಯಾನ್ಸರ್ಗಳಲ್ಲಿ ಶೇ.5 ರಿಂದ 10ರಷ್ಟು ವಂಶಪಾರAಪರ್ಯವಾಗಿ ಬರಲಿದೆ. ಆದರೆ ಬದಲಾದ ಜೀವನಶೈಲಿ, ಅತಿಯಾದ ತೂಕ, ಚಲನೆಯ ಕೊರತೆ, ಮದ್ಯಪಾನ ಹಾಗೂ ಕೊಬ್ಬಿನ ಆಹಾರ ಮುಂತಾದ ಅಂಶಗಳಿಂದ ಕ್ಯಾನ್ಸರ್ ಬರಲಿದೆ.


