Monday, March 16, 2026
Flats for sale
Homeರಾಜ್ಯಬೆಂಗಳೂರು : ಮೂತ್ರ ವಿಸರ್ಜನೆ ವೇಳೆ ಉಪಸಭಾಪತಿ ರುದ್ರಪ್ಪ ಲಾಮಣಿಯವರಿಗೆ ಸ್ಕೂಟರ್ ಡಿಕ್ಕಿ,ಪ್ರಾಣಾಪಾಯದಿಂದ ಪಾರು ..!

ಬೆಂಗಳೂರು : ಮೂತ್ರ ವಿಸರ್ಜನೆ ವೇಳೆ ಉಪಸಭಾಪತಿ ರುದ್ರಪ್ಪ ಲಾಮಣಿಯವರಿಗೆ ಸ್ಕೂಟರ್ ಡಿಕ್ಕಿ,ಪ್ರಾಣಾಪಾಯದಿಂದ ಪಾರು ..!

ಬೆಂಗಳೂರು : ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯ, ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿ ಗಂಭೀರವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರ ತಾಲೂಕಿನ ಜವನಗೊಂಡನಹಳ್ಳಿ ಸಮೀಪದಲ್ಲಿ ಲಮಾಣಿ ಅವರಿಗೆ ಸ್ಕೂಟರ್ ಡಿಕ್ಕಿಯಾಗಿದ್ದು, ಗಂಭೀರಗವಾಗಿ ಗಾಯಗೊಂಡಿದ್ದಾರೆ. ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಲಮಾಣಿ ಅವರು ಇಳಿದಾಗ ಅದೇ ವೇಳೆ ಬಂದಂತಹ ಸ್ಕೂಟರ್ ಡಿಕ್ಕಿ ಹೊಡೆದಿದೆ. ಆಗ ಅವರ ತಲೆ, ಕೈ, ಕಾಲುಗಳಿಗೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ಮಾಹಿತಿ ದೊರೆತಿದೆ.

ಉಪಸಭಾಪತಿ ರುದ್ರಪ್ಪ ಲಾಮಣಿಯವರನ್ನು ಕೂಡಲೇ ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular