Sunday, March 15, 2026
Flats for sale
Homeದೇಶಬೆಂಗಳೂರು: ಮಹಾರಾಷ್ತ್ರ ಮಾದರಿ ಸರಕಾರ ರಚಿಸಲು ರಣತಂತ್ರ ,ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿಮಾಡಿದ ರಾಜ್ಯದ...

ಬೆಂಗಳೂರು: ಮಹಾರಾಷ್ತ್ರ ಮಾದರಿ ಸರಕಾರ ರಚಿಸಲು ರಣತಂತ್ರ ,ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭೇಟಿಮಾಡಿದ ರಾಜ್ಯದ ಪ್ರಭಾವಿ ಸಚಿವ!

ಬೆಂಗಳೂರು: ರಾಜಕೀಯದಲ್ಲಿ ಯಾವೆಲ್ಲ ರೀತಿಯ ಚದುರಂಗದ ಆಟ ನಡೆಯುತ್ತೋ ಆ ಶಿವನೇ ಬಲ್ಲಾ. ರಾಜ್ಯದ ಪ್ರಭಾವಿ ಸಚಿವರೊಬ್ಬರು ಇತ್ತೀಚೆಗೆ ಹೈದರಾಬಾದ್ ಭೇಟಿ ವೇಳೆ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ಭೇಟಿ ಮಾಡಿದ್ದು, ಈ ಭೇಟಿಯ ಪರಿಣಾಮ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಲಿದೆ ಎಂದೇ ಹೇಳಲಾಗುತ್ತಿದೆ.

ಕಾಂಗ್ರೆಸ್ ಸರಕಾರದಲ್ಲಿ ಎಲ್ಲವು ಸರಿ ಇದೆ ಎಂಬುದು ತಿಳಿಯುದು ಕಷ್ಟ.ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಭಾರಿ ಮಹತ್ವಾಕಾಂಕ್ಷೆ ಹೊಂದಿರುವ ಈ ಸಚಿವರು ಗೋವಾದ ಸಿಎಂ ಸಾವಂತ್ ಅವರನ್ನು ತೀರ ಅನಿರೀಕ್ಷಿತ ಎಂಬAತೆ ಭೇಟಿ ಮಾಡಿದ್ದು, ಸರಿಸುಮಾರು ೨ ಗಂಟೆಗಳ ಕಾಲ ರಹಸ್ಯ ಚರ್ಚೆ ನಡೆಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಎರಡು ಬಾರಿ ಹೈದರಾಬಾದ್‌ಗೆ ತೆರಳಿದ್ದ ಪ್ರಭಾವಿ ಸಚಿವರು, ಮೊದಲನೇ ಬಾರಿ ತೆರಳಿದ್ದಾಗಲೇ ಗೋವಾ ಸಿಎಂ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆನ್ನಲಾಗಿದೆ.

ಅಧಿಕಾರಗೊಸ್ಕರ ಬಂಡಾಯ ಏಳೋದು ಸಹಜ ಆದರೆ ಸರಕಾರದ ವಿದುದ್ದ ಅಸಮಾಧಾನದ ಮಾತುಗಳನ್ನಾಡುವ ಸಚಿವರು ಬಿಜೆಪಿ ಸಿಎಂ ಸಾವಂತ್ ಅವರನ್ನು ಭೇಟಿ ಮಾಡಿದ್ದರೆ ಅದಕ್ಕೆ ಸಹಜವಾಗಿಯೇ ರಾಜಕೀಯ ಬಣ್ಣ ಬರುತ್ತಿತ್ತು. ಆದರೆ ಈ ಸಚಿವರು ಈ ತನಕ ಕಾಂಗ್ರೆಸ್‌ನಲ್ಲಿ ಪಕ್ಷನಿಷ್ಠೆಗೆ ಹೆಸರಾಗಿರುವ ಕಾರಣ, ಯಾರೂ ಕೂಡ ಸಾವಂತ್ ಅವರನ್ನು ಭೇಟಿ ಮಾಡಿದ್ದಾರೆ ಎಂಬುದನ್ನು ನಂಬಲಾಗುವುದಿಲ್ಲ. ಹೀಗಾಗಿ ಈ ವಿಷಯ ಅತ್ಯಂತ ಗುಟ್ಟಾಗಿ ಉಳಿದಿದೆ. ಆದರೆ ರಾಜ್ಯ ಸರಕಾರದ ಪ್ರಮುಖ ಹುದ್ದೆಯಲ್ಲಿರುವ ಕೆಲವೇ ಕೆಲವರಿಗೆ ಈ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ.

ಚರ್ಚೆ ವೇಳೆ ದೇಶದ ರಾಜಕಾರಣದ ಮುಂದಿನ ೬ ತಿಂಗಳಲ್ಲಿ ಆಗಬಹುದಾದ ಬದಲಾವಣೆಗಳನ್ನು ಆಧರಿಸಿ ಕರ್ನಾಟಕದ ರಾಜಕಾರಣದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗೆಗೆ ವಿವರ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಭೇಟಿಯ ಕಾರ್ಯಸೂಚಿ ಅನುಷ್ಠಾನಗೊಳ್ಳಲು ಇನ್ನೂ ೫-೬ ತಿಂಗಳು ಕಾಲ ಕಾಯಬೇಕು ಎನ್ನಲಾಗುತ್ತಿದೆ ಎನ್ನುತ್ತಾರೆ ವಿಶ್ಲೇಷಕರು.

ಬಿಜೆಪಿ ಬಲವರ್ಧನೆಯ ದೃಷ್ಟಿಯಿಂದ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಗೋವಾ ಸಿಎಂ ಸಾವಂತ್ ಈಗಾಗಲೇ ಕರ್ನಾಟಕದಲ್ಲಿ ಜೆಡಿಎಸ್ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಮುಂದಿನ ದಿನಗಳಲ್ಲಿ ದಕ್ಷಿಣದ ಇತರ ರಾಜ್ಯಗಳಲ್ಲೂ ಬಿಜೆಪಿ ವಿಸ್ತಾರಗೊಳಿಸುವ ಚಟುವಟಿಕೆ ನಡೆಯುತ್ತಿದೆ.

ಕರ್ನಾಟಕದಲ್ಲಿ ೧೩೫ ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಅತ್ಯಂತ ಸುಭದ್ರ ಮತ್ತು ಭಾರಿ ಬಹುಮತದ ಸರಕಾರ ಹೊಂದಿದೆ. ೫ ವರ್ಷಗಳ ಕಾಲ ಇಂತಹ ಭರ್ಜರಿ ಬಹುಮತದ ಸರಕಾರ ಬದಲಾವಣೆ ಮಾಡುವುದು ರಾಜಕೀಯ ಶಾಸ್ತçದ ಪ್ರಕಾರ ಅಸಾಧ್ಯವೇ ಆಗಿದೆ. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ಆಧರಿಸಿ ದೇಶದಲ್ಲಿ ಸೃಷ್ಟಿ ಆಗಬಹುದಾದ ರಾಜಕೀಯ ವಾತಾವರಣ ಆಧರಿಸಿ ಕರ್ನಾಟಕದಲ್ಲೂ ಕೆಲವು ಬದಲಾವಣೆ ಆಗುವ ಸಾಧ್ಯತೆಗಳಿವೆ.ಇದರ ಭಾಗವಾಗಿ ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಕೆಲವು ಪಲ್ಲಟಗಳು ಸಂಭವಿಸಲಿವೆ. ಅದೇ ಕಾರಣಕ್ಕೆ ಪ್ರಭಾವಿ ಸಚಿವರೊಂದಿಗೆ ಸಾವಂತ್ ಮಾತನಾಡಿದ್ದಾರೆ.

ಬಲ್ಲ ಮೂಲಗಳ ಪ್ರಕಾರ, ಪ್ರಭಾವಿ ಸಚಿವರು ಮಹಾರಾಷ್ಟç ಮಾದರಿಯಲ್ಲಿ ಮೂರು ಪಕ್ಷಗಳ ಸರಕಾರ ರಚನೆಗೆ ತಮ್ಮಿಂದ ಹೇಗೆ ನೆರವಾಗಬಹುದು? ಎಷ್ಟು ಶಾಸಕರ ವಿಶ್ವಾಸ ಗಳಿಸಬೇಕಾಗುತ್ತದೆ? ಪ್ರಯತ್ನ ವಿಫಲವಾದರೆ ಆಗಬಹುದಾದ ಪರಿಣಾಮಗಳೇನು? ಲೋಕಸಭೆ ಫಲಿತಾಂಶ ಬಿಜೆಪಿ ನಿರೀಕ್ಷಿಸಿದ ಮಟ್ಟದಲ್ಲಿ ಬಾರದಿದ್ದರೆ ಆಗ ಕಾರ್ಯತಂತ್ರ ಏನಿರಬೇಕು ಎಂಬುದರ ಬಗೆಗೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆನ್ನಲಾಗಿದೆ,ಆದರೆ ಮುಂದೆ ಏನೆಲ್ಲ ಆಟ ನಡೆಯುತ್ತೋ ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular