Saturday, March 14, 2026
Flats for sale
Homeರಾಜ್ಯಬೆಂಗಳೂರು : ಮರ್ಯಾದ ಹತ್ಯೆ - ಮಗಳನ್ನು ಕೊಂದು ಪೊಲೀಸರಿಗೆ ಶರಣಾದ ತಂದೆ.

ಬೆಂಗಳೂರು : ಮರ್ಯಾದ ಹತ್ಯೆ – ಮಗಳನ್ನು ಕೊಂದು ಪೊಲೀಸರಿಗೆ ಶರಣಾದ ತಂದೆ.

ಬೆಂಗಳೂರು : ತನ್ನಿಬ್ಬರು ಮಕ್ಕಳ ಸರಣಿ ಪ್ರೀತಿಯಿಂದ ಮನನೊಂದ ತAದೆಯೊಬ್ಬರು ಮರ್ಯಾದೆಗೆ ಅಂಜಿ ಹಿರಿ ಮಗಳನ್ನೇ ಕೊಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಪ್ರೀತಿಸಿದ ಪ್ರಿಯತಮನಿಗಾಗಿ ಕಿರಿಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಸಾಂತ್ವಾನ ಕೇಂದ್ರ ಸೇರಿದ್ದಾಳೆ. ಇತ್ತ ಹಿರಿ ಮಗಳ ಪ್ರೀತಿ ವಿಚಾರ ತಿಳಿದ ತಂದೆ, ಚಿಕ್ಕ ಮಗಳು ಮರ್ಯಾದೆ ತೆಗೆದಳು, ಇವಳು ಮರ್ಯಾದೆ ಕಳೆಯುತ್ತಾಳೆ ಅಂತ ಕೊಲೆಯೇ ಮಾಡಿದ್ದಾನೆ. ಕವನಾ (೨೦) ಹತ್ಯೆಯಾದ ಯುವತಿ. ತನ್ನ ಮಗಳನ್ನು ಹತ್ಯೆಗೈದ ಬಳಿಕ ಆರೋಪಿ ಮಂಜುನಾಥ್ವಿ ಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮAಜುನಾಥ್ ಅವರ ಕಿರಿಯ ಮಗಳು ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರನ ಜೊತೆಗೆ ಹೋಗುವುದಾಗಿ ಕಳೆದ ಮಂಗಳವಾರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಳು. ಪ್ರೀತಿಸಿದವನ ಜೊತೆ ಹೋಗುವುದಾಗಿ ಠಾಣೆಯಲ್ಲಿ ಪಟ್ಟು ಹಿಡಿದಿದ್ದು, ಪೊಲೀಸರು ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಹಿರಿ ಮಗಳು ಸಹ ಪ್ರೀತಿ ಬಲೆಯಲ್ಲಿರುವ ವಿಚಾರ ತಿಳಿದಿದ್ದ ತಂದೆ ಮಂಜುನಾಥ್, ಚಿಕ್ಕ ಮಗಳು ಮರ್ಯಾದೆ ಕಳೆದಳು, ಇನ್ನು ಇವಳು ಕೂಡ ಗ್ರಾಮದಲ್ಲಿ ನಮ್ಮ ಮರ್ಯಾದೆ ಕಳೆಯುತ್ತಾಳೆ ಅಂತ ಹಿರಿ ಮಗಳನ್ನು ಕೊಲೆ ಮಾಡಿದ್ದಾನೆ.

ಕತ್ತು ಸೀಳಿದ ತಂದೆ: ಆರೋಪಿ ಮಂಜುನಾಥ್ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಮಗಳ ಪ್ರೀತಿಯ ವಿಚಾರ ತಿಳಿದ ನಂತರ ಮಂಜುನಾಥ್, ರಾತ್ರಿ ವೇಳೆ ನಿದ್ದೆಗೆ ಜಾರಿದ್ದ ಮಗಳು ಕವನಾಳ ಕತ್ತನ್ನು ಕೋಳಿ ಕೊಯ್ಯುವ ಚಾಕುವಿನಿಂದಲೇ ಕೊಯ್ದು ಕೊಲೆ ಮಾಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

Most Popular