ಬೆಂಗಳೂರು : ಜೀವನದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದ ಚಿತ್ರ ನಟ ದರ್ಶನ ಇದೀಗ ಮನೆ ಊಟ, ಹಾಸಿಗೆ, ಬಟ್ಟೆ ಗಳಿಗೆ ನ್ಯಾಯಾಲಯದ ಮುಂದೆ ಬೇಡುವಂತಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ ನಟ ದರ್ಶನ್ ತಮಗೆ ಜೈಲೂಟ ಬೇಡ ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್ ಮನೆಯೂಟದ ಆದರೆ, ನ್ಯಾಯಾಲಯದ ಈ ಅರ್ಜಿಯನ್ನು ವಜಾಗೊಳಿಸಿದ್ದು, ಜೈಲು ಊಟವೇ ಗತಿಯಾಗಿದೆ.
ದರ್ಶನ್ ಗ್ಯಾಂಗ್ ನಿಂದ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರು ನಟ ದರ್ಶನ್‌ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ನಟ ದರ್ಶನ್ ಪರ ೀಲ ರಾಘವೇದ್ರ ಅವರು 24ನೇ ಎಸಿಎಂಎಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಜೈಲೂಟದಿಂದ ಅಜೀರ್ಣ, ಅತಿಸಾರ ಆಗಿದೆ. ಇದರಿಂದ ದೇಹದ ತೂಕ ಕಡಿಮೆಯಾಗುತ್ತಿದೆ ಎಂಬ ಕಾರಣ ನೀಡಿ ಮನೆಯ ಊಟ ತರಿಸಲು ಅನುಮತಿ ಕೋರಿ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಶ್ವನಾಥ್ ಸಿ ಗೌಡರ್ ಅವರು, ಕೊಲೆ ಆರೋಪಿಗಳಿಗೆ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ. ಜೈಲು ನಿಯಮಾವಳಿ 728ರಲ್ಲಿ ಮನೆಯ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶವಿಲ್ಲ ಎಂದು ಹೇಳಿ ಅರ್ಜಿ ವಜಾಗೊಳಿಸಿದ್ದಾರೆ.
ಇಂದು ಮಧ್ಯಾಹ್ನ ದರ್ಶನ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ನಟ ದರ್ಶನ್ ಮನೆ ಊಟ, ಮನೆಯ ಹಾಸಿಗೆ ಹಾಗೂ ಪುಸ್ತಕ ನೀಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ. ಈ ಮೂಲಕ ಮನೆ ಊಟ ಸೌಲಭ್ಯ ಪಡೆಯುವ ನಿರೀಕ್ಷೆಯಲ್ಲಿದ್ದ ದರ್ಶನ್ ಗೆ ಶಾಕ್ ನೀಡಲಾಗಿದೆ.ಒಟ್ಟಿನಲ್ಲಿ ಮಾಡಿದ್ದೂ ಉಣ್ಣು ಮಹರಾಯ ಎಂಬ ಗಾದೆಮಾತಿನಂತಾಗಿದೆ ನಟ ದರ್ಶನ ನ ಪರಿಸ್ಥಿತಿ.